ಎಂಸಿಸಿ ಗೌರವ : ಸಚಿನ್, ದ್ರಾವಿಡ್ ಸಾಲಿಗೆ ಸೇರಿದ ಸೆಹ್ವಾಗ್

Posted By:
Subscribe to Oneindia Kannada

ಲಂಡನ್, ಆಗಸ್ಟ್ 16: ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರಿಗೆ ಇಂಗ್ಲೆಂಡಿನ ಎಂಸಿಸಿ ಗೌರವ ಆಜೀವ ಸದಸ್ಯತ್ವ ನೀಡಲಾಗಿದೆ.

ಸೆಹ್ವಾಗ್ ಅವರು Marylebone Cricket Club ಎಂಸಿಸಿ ಸದಸ್ವತ್ವ ಪಡೆದ ನಾಲ್ಕನೇ ಭಾರತೀಯ ಆಟಗಾರರಾಗಿದ್ದಾರೆ.

Virender Sehwag awarded Honorary Life Membership of MCC

ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಈ ಮುಂಚೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಸೆಹ್ವಾಗ್ ಎಲ್ಲ ಮೂರು ಮಾದರಿಯ ಕ್ರಿಕೆಟ್‌ ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ.

ಟೆಸ್ಟ್‌ನಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ 8,586 ರನ್ ಗಳಿಸಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 35.05ರ ಸರಾಸರಿಯಲ್ಲಿ 8,273 ರನ್ ಗಳಿಸಿದ್ದಾರೆ. ಸೆಹ್ವಾಗ್ ಟೆಸ್ಟ್‌ನಲ್ಲಿ ಎರಡು ಬಾರಿ ತ್ರಿಶತಕ ಸಿಡಿಸಿರುವ ಭಾರತದ ಏಕೈಕ ಹಾಗೂ ವಿಶ್ವದ ನಾಲ್ಕನೆ ಬ್ಯಾಟ್ಸ್‌ಮನ್ ಆಗಿದ್ದಾರೆ.

ಸೆಹ್ವಾಗ್ 2004ರಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ತ್ರಿಶತಕ ಬಾರಿಸಿದ್ದರು. ಕೆಲವು ವರ್ಷಗಳ ಬಳಿಕ ಚೆನ್ನೈನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಮತ್ತೊಮ್ಮೆ ತ್ರಿಶತಕ ಬಾರಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former opener Virender Sehwag on August 16 joined his former team-mates Sachin Tendulkar, Rahul Dravid, Sourav Ganguly and other Indians as an Honorary Life Member of Marylebone Cricket Club (MCC).
Please Wait while comments are loading...