ವಾಸಿಂ ಅಕ್ರಂಗೆ ಕೊಟ್ಟ ಮಾತು ಉಳಿಸಿಕೊಂಡ ಕೊಹ್ಲಿ

Posted By:
Subscribe to Oneindia Kannada

ಕ್ಯಾನ್ ಬೆರಾ, ಜ.21: ಪಾಕಿಸ್ತಾನದ ಕ್ರಿಕೆಟ್ ದಿಗ್ಗಜ ವಾಸಿಂ ಅಕ್ರಮ್ ಅವರಿಗೆ ಜನವರಿ 12ರಂದು ನೀಡಿದ್ದ ಮಾತನ್ನು ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಉಳಿಸಿಕೊಂಡಿದ್ದಾರೆ. ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸತತ ಎರಡು ಶತಕ ಬಾರಿಸುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

ಪರ್ತ್ ನಲ್ಲಿ ಕೊಹ್ಲಿ ಅವರು ಶತಕ ವಂಚಿತರಾದ ಮೇಲೆ ಮುಂಬರುವ ಎರಡು ಪಂದ್ಯಗಳಲ್ಲಿ ಸತತ ಎರಡು ಶತಕ ಬಾರಿಸುವುದಾಗಿ ವಾಸಿಂ ಆಕ್ರಂಗೆ ಮಾತು ನೀಡಿದ್ದರು.[ಕೊಹ್ಲಿ 25ನೇ ಶತಕ, ಮತ್ತೆ ದಾಖಲೆಗಳು ಧ್ವಂಸ]

Virat Kohli keeps promise to Wasim Akram

ಬುಧವಾರ (ಜನವರಿ 20) ಮನುಕಾ ಓವಲ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ನಲ್ಲಿ ವೃತ್ತಿ ಬದುಕಿನ 25ನೇ ಶತಕ ಬಾರಿಸಿದರು. 84 ಎಸೆತಗಳ ಶತಕ ಮೂಲಕ ಅತ್ಯಧಿಕ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರು. ಸಚಿನ್ ತೆಂಡೂಲ್ಕರ್ ಅವರು 49 ಶತಕಗಳ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.[ನಾಲ್ಕನೇ ಪಂದ್ಯದ ವರದಿ]

27 ವರ್ಷ ವಯಸ್ಸಿನ ಕೊಹ್ಲಿ ಅವರು 162 ಇನ್ನಿಂಗ್ಸ್ ನಲ್ಲಿ 25 ಶತಕ ಬಾರಿಸಿ, ಹೊಸ ದಾಖಲೆ ಬರೆದಿದ್ದಾರೆ. ರನ್ ಚೇಸಿಂಗ್ ಮಾಡುವಾಗ 15ನೇ ಶತಕ ಇದಾಗಿದೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ದಲ್ಲಿ ಜನವರಿ 17ರಂದು ತ್ವರಿತ ಗತಿಯಲ್ಲಿ 24 ಶತಕ ಗಳಿಸಿದ ಸಾಧನೆ ಮಾಡಿದ್ದರು. ಅದೇ ಪಂದ್ಯದಲ್ಲಿ ತ್ವರಿತ ಗತಿಯಲ್ಲಿ ಏಕದಿನ ಕ್ರಿಕೆಟ್ ನಲ್ಲಿ 7,000ರನ್ ಗಳಿಸಿದ ದಾಖಲೆ ಬರೆದಿದ್ದರು. ವಿಡಿಯೋದಲ್ಲಿ ಈ ಸುದ್ದಿ ಕೇಳಿಸಿಕೊಳ್ಳಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's flamboyant cricketer Virat Kohli kept the promise he made to Pakistan pace legend Wasim Akram in Perth on January 12 by slamming 2 centuries in the ongoing 5-match ODI series against Australia.
Please Wait while comments are loading...