ಧ್ವಜ ಹಾರಿಸಿದ್ದ ಕೊಹ್ಲಿ ಅಭಿಮಾನಿಗೆ ಅಂತೂ ಜಾಮೀನು

By: ರಮೇಶ್.ಬಿ
Subscribe to Oneindia Kannada

ಇಸ್ಲಾಮಬಾದ್.ಫೆಬ್ರವರಿ, 27: ಇತ್ತ ಭಾರತ ಮತ್ತು ಪಾಕಿಸ್ತಾನ ನಡುವಣ ಏಷ್ಯಾ ಕಪ್ ಟಿ-20 ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದ್ದರೆ ಅತ್ತ ಪಾಕ್ ನಲ್ಲಿ ಭಾರತದ ಧ್ವಜ ಹಾರಿಸಿ ಬಂಧನಕ್ಕೊಳಗಾಗಿದ್ದ ವಿರಾಟ್ ಕೊಹ್ಲಿ ಅಭಿಮಾನಿಗೆ ಅಂತೂ ಜಾಮೀನು ಸಿಕ್ಕಿದೆ.

ಭಾರತದ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರ ಪಾಕಿಸ್ತಾನದ ಅಭಿಮಾನಿ ಉಮರ್ ತನ್ನ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ. ಉಮರ್ ಗೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಜಿಲ್ಲಾ ಹೆಚ್ಚವರಿ ಸೇಷನ್ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.[ಅನುಷ್ಕಾ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೊಹ್ಲಿ ಗರಂ]

cricket

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಜನವರಿ 26 ರಂದು ನಡೆದ ಟಿ-20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 90 ರನ್ ಗಳಿಸಿ ಮಿಂಚಿದ್ದರು. ಪಂದ್ಯದಲ್ಲಿ ಭಾರತ ಆಸೀಸ್ ಗೆ ಸೋಲುಣಿಸಿತ್ತು. ಇದಾದ ಮೇಲೆ ಅಭಿಮಾನಿ ಬಾವುಟ ಹಾರಿಸಿದ್ದ. ಉಮರ್ ನನ್ನು ಜನವರಿ 27 ರಂದು ಬಂಧಿಸಲಾಗಿತ್ತು. ಅಲ್ಲದೆ ಕೇವಲ ಎರಡೇ ದಿನದಲ್ಲಿ ವಿಚಾರಣೆ ಮುಗಿಸಿದ ನ್ಯಾಯಾಲಯ ಉಮರ್ ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.[ಭಗ್ನ ಪ್ರೇಮಿ ವಿರಾಟ್ ಕೊಹ್ಲಿಗೀಗ 'ವಿರಹ' ವಿರಾಮ]

ಇದಾದ ಮೇಲೆ ಉಮರ್ ಪರ ವಕೀಲರು ಜಾಮೀನಿಗೆ ನಿರಂತರ ಯತ್ನ ಮಾಡುತ್ತಿದ್ದರು. ಅಂತಿಮವಾಗಿ ಆಸಾದುಲ್ಲಹ ಸಿರಾಜ್ ನೇತೃತ್ವದ ಪೀಠ ಉಮರ್ ಗೆ ಜಾಮೀನು ನೀಡಿದ್ದು 50,000 ಶ್ಯೂರಿಟಿಯ ಬಾಂಡ್ ನೀಡುವಂತೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Pakistani fan of Indian cricketer Virat Kohli, who was arrested for hoisting an Indian flag, was granted bail by a court in the country's Punjab province. The additional district and sessions court in Okara admitted the bail plea of Umar Daraz, who has been behind the bars for over a month, Dawn online reported.
Please Wait while comments are loading...