ವಿಡಿಯೋ: ರೆಹಮಾನ್ ಮ್ಯೂಸಿಕ್, ವಿರಾಟ್ ಕೊಹ್ಲಿ ಡಾನ್ಸ್!

Written By:
Subscribe to Oneindia Kannada

ನವದೆಹಲಿ, ಜುಲೈ, 09: ರನ್ ಸರದಾರ ವಿರಾಟ್ ಕೊಹ್ಲಿ ಮತ್ತು ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಕಾಂಬಿನೇಶನ್ ನಲ್ಲಿ ಪ್ರೀಮಿಯರ್ ಫುಟ್ಸಲ್ ಲೀಗ್ ವಿಡಿಯೋ ಮೂಡಿಬಂದಿದೆ.

ಎಆರ್ ರೆಹಮಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರೆಹಮಾನ್ ಸಂಗೀತಕ್ಕೆ ತಕ್ಕಂತೆ ವಿರಾಟ್ ನರ್ತನ ಮಾಡಿದ್ದಾರೆ. "ನಾಮ್ ಹೈ ಫುಟ್ಸಲ್ " ಟೈಟಲ್ ನಲ್ಲಿ ಬಿಡುಗಡೆಯಾಗಿರುವ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.[ಕೊಹ್ಲಿ ತಂಡ ಕೆರೆಬಿಯನ್‌ನಲ್ಲಿ ಮಾಡುತ್ತಿರುವುದೇನು?]

virat

ರೆಹಮಾನ್ ಮತ್ತು ಕೊಹ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಗೀತೆಗೆ ವಿರಾಟ್ ಅವರೇ ಧ್ವನಿ ನೀಡಿರುವುದು ವಿಶೇಷ. ವಿರಾಟ್ ಜಿಕ್ಯೂ ಮ್ಯಾಗಜಿನ್ ಗೆ ಕವರ್ ಪೇಜ್ ಆಗಿದ್ದರು. ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದ ಕೊಹ್ಲಿ ಹೊಸ ಅವತಾರ ನಿಮಗೆ ಇಷ್ಟವಾಗುವುದರಲ್ಲಿ ಅನುಮಾನ ಇಲ್ಲ.[ವಿರಾಟ್ ಕೊಹ್ಲಿ ಹೊಸ ಅವತಾರ ಬಲ್ಲಿರೇನಯ್ಯಾ?]

ಪ್ರೀಮಿಯರ್ ಫುಟ್ಸಲ್ ಲೀಗ್ ಫುಟ್ ಬಾಲ್ ಪಂದ್ಯಾವಳಿ ಜುಲೈ 15 ರಿಂದ ಆರಂಭವಾಗಲಿದೆ. ಸದ್ಯ ವೆಸ್ಟ್ ಇಂಡೀಸ್ ಗೆ ತೆರಳಿರುವ ಕೊಹ್ಲಿ ಪಡೆ ಕೆರೆಬಿಯನ್ ನಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಟೆಸ್ಟ್ ತಂಡವನ್ನು ಹೊಸ ಗುರು ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಕೊಹ್ಲಿ ಮುನ್ನಡೆಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Premier Futsal League has released its official video anthem featuring India's star cricketer Virat Kohli and musical maestro AR Rahman.The video was released by AR Rahman himself on his Twitter account on Thursday. Premier Futsal League will start its maiden season in India from July 15.
Please Wait while comments are loading...