ಮೆಲ್ಬೋರ್ನ್ ನಲ್ಲಿ ಟೆನಿಸ್ ನೋಡಲು ಹೋದ ಕೊಹ್ಲಿ-ಯುವಿ

Posted By:
Subscribe to Oneindia Kannada

ಮೆಲ್ಬೋರ್ನ್, ಜ. 28: ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಅವರು ಎರಡನೇ ಟಿ20 ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯನ್ ಓಪನ್ ಪಂದ್ಯ ನೋಡಿ ಖುಷಿ ಪಟ್ಟಿದ್ದಾರೆ. ಸೆರ್ಬಿಯಾದ ನೊವಾಕ್ ಜೋಕೊವಿಕ್ ಹಾಗೂ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಅವರ ನಡುವಿನ ಸೆಮಿಫೈನಲ್ ಪಂದ್ಯವನ್ನು ಕ್ರಿಕೆಟರ್ ಗಳು ವೀಕ್ಷಿಸಿ ಆನಂದಿಸಿದ್ದಾರೆ.

ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಜನವರಿ 29ರಂದು ಆಸ್ಟ್ರೇಲಿಯಾ ವಿರುದ್ಧ ಎರಡನೇ ಟ್ವೆಂಟಿ20 ಪಂದ್ಯವನ್ನಾಡಲಿದೆ. ರ್ರೋಜರ್ ಫೆಡರರ್ ಅವರ ಬಹುದೊಡ್ಡ ಅಭಿಮಾನಿಯಾಗಿರುವ ವಿರಾಟ್ ಅವರು ಮೆಲ್ಬೋರ್ನ್ ನ ಟೆನಿಸ್ ಗ್ಯಾಲರಿಯಲ್ಲಿ ಯುವರಾಜ್ ಜೊತೆ ನಿಂತು ಸೆಲ್ಫಿ ತೆಗೆದುಕೊಂಡು ಟ್ವೀಟ್ ಮಾಡಿದ್ದಾರೆ.[ಕೊಹ್ಲಿ ಬದುಕಲ್ಲಿ ಎಂದೂ ಮರೆಯದ ದಿನ ಬಂದೇ ಬಿಡ್ತು!]

Virat Kohli and Yuvraj Singh watch Federer-Djokovic match at Australian Open

ಆದರೆ, ಕೊಹ್ಲಿಗೆ ನಿರಾಶೆ ಕಾದಿತ್ತು. ನೆಚ್ಚಿನ ಅಟಗಾರ ರೋಜರ್ ಫೆಡರರ್ ಉತ್ತಮ ಸೆಣಸಾಟದ ನಡುವೆ ಪಂದ್ಯವನ್ನು ಜೋಕೋವಿಕ್ ಗೆ ವಹಿಸಿಕೊಟ್ಟರು. ಆರಂಭದ ಎರಡು ಸೆಟ್ ಗಳನ್ನು 6-1, 6-2 ಅಂತರದಲ್ಲಿ ಗೆದ್ದ ಜೋಕೊವಿಕ್ ಗೆ ಮೂರನೇ ಸೆಟ್ ನಲ್ಲಿ ಭಾರಿ ಪೈಪೋಟಿ ನೀಡಿದ ಫೆಡರರ್ 6-3ರಲ್ಲಿ ಗೆದ್ದರು. ಅದರೆ, ಮುಂದಿನ ಸೆಟ್ 6-3ರಲ್ಲಿ ಸೋತ ಫೆಡರರ್ ಟೂರ್ನಿಯಿಂದ ನಿರ್ಗಮಿಸಿದರು.

ಕಳೆದ ವರ್ಷ ಜನವರಿ ತಿಂಗಳಿನಲ್ಲಿ ರೋಜರ್ ಫೆಡರರ್ ರನ್ನು ಖುದ್ದು ಭೇಟಿ ಮಾಡಿದ್ದ ಕೊಹ್ಲಿ, ಇದು ನನ್ನ ಬದುಕಿನ ಅತ್ಯಂತ ಸಂತಸದ ಕ್ಷಣ ಎಂದು ಹೇಳಿದ್ದರು. ನಂತರ ಫೆಡರರ್ ಅವರು ಆಡುವ ಇಂಟರ್ ನ್ಯಾಷನಲ್ ಪ್ರಿಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನ ಯುಎಇ ರಾಯಲ್ಸ್ ತಂಡದ ಸಹ ಮಾಲೀಕತ್ವವನ್ನು ಕೊಹ್ಲಿ ವಹಿಸಿಕೊಂಡರು.[ಟಿ20ಯಲ್ಲಿ ರನ್ ಸರಾಸರಿ ಅಗ್ರಸ್ಥಾನಕ್ಕೇರಿದ ಕೊಹ್ಲಿ]

Kohli and Yuvraj Singh

ಫೆಡರರ್ ಅವರು ಕಳೆದ ವರ್ಷ ತಮ್ಮ ವೃತ್ತಿ ಬದುಕಿನ 1000ನೇ ಗೆಲುವು ಸಾಧಿಸಿ ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಪಂದ್ಯ ನೋಡಲು ಪ್ಯಾಟ್ ರಾಫ್ಟರ್ ಅರೀನಾಗೆ ಕೊಹ್ಲಿ ಬಂದಿದ್ದರು. ಸೆಲ್ಫಿ ತೆಗೆದುಕೊಂಡು ಆತ ಮೈದಾನದ ಹೊರಗೂ ದಿಗ್ಗಜ. ಇದು ನನ್ನ ಬದುಕಿನ ಅತ್ಯಂತ ಅವಿಸ್ಮರಣೀಯ ಕ್ಷಣ ವಿರಾಟ್ ಕೊಹ್ಲಿ ಎಂದು ಟ್ವೀಟ್ ಮಾಡಿದ್ದರು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian cricketers Virat Kohli and Yuvraj Singh on Thursday (January 28) headed to the Melbourne Park to watch the Australian Open tennis semi-final between Serbian Novak Djokovic and Roger Federer of Switzerland.
Please Wait while comments are loading...