ಮಿಥಾಲಿ ವಿಶ್, ಕೊಹ್ಲಿ ಮಾಡಿದ ಎಡವಟ್ಟು, ನಗೆಪಾಟಲು

Posted By:
Subscribe to Oneindia Kannada

ನವದೆಹಲಿ, ಜುಲೈ 13:ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ ಮಾಡಿದ್ದು ಎಲ್ಲರಿಗೂ ಗೊತ್ತಿದೆ. 6 ಸಾವಿರ ರನ್ ಗಳಿಸಿದ ಮಿಥಾಲಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಆದರೆ,ಟ್ವಿಟ್ಟರ್ ನಲ್ಲಿ ಸರಿಯಾಗಿ ವಿಶ್ ಮಾಡಿದ್ದ ಕೊಹ್ಲಿ, ಫೇಸ್ ಬುಕ್ ನಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಮಿಥಾಲಿ ಬದಲಿಗೆ ಪೂನಂ ಇರುವ ಚಿತ್ರ ಹಾಕಿ ವಿಶ್ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪೂನಂ ರಾವತ್ ಅವರು ಶತಕ ಗಳಿಸಿದರೆ, ಮಿಥಾಲಿ 67ರನ್ ಗಳಿಸಿ ಔಟಾದರು.

ಮಿಥಾಲಿ ಸಾಧನೆ ನಡುವೆಯೂ ಭಾರತ ಗೆಲ್ಲಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 227ರನ್ ಗಳಿಸಿ ಸುಲಭ ಜಯ ದಾಖಲಿಸಿತು.

ಟೀಂ ಇಂಡಿಯಾ ಮಹಿಳೆ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಬಗ್ಗೆ ಕೊಹ್ಲಿಗೆ ಗೊತ್ತಿಲ್ಲ ಎಂದು ಅಭಿಮಾನಿಗಳು ನಗೆಯಾಡಿದ್ದಾರೆ.

ಮಿಥಾಲಿ ಬದಲಿಗೆ ಪೂನಂ ಫೋಟೊ

ಮಿಥಾಲಿ ಬದಲಿಗೆ ಪೂನಂ ಫೋಟೊ

ಈ ನಡುವೆ ತಮ್ಮ ವಿರುದ್ಧ ಸಾಲು ಸಾಲು ಟೀಕೆಗಳು ಬಂದ ಹಿನ್ನೆಲೆಯಲ್ಲಿ ಕೊಹ್ಲಿ ಅವರು ಮಿಥಾಲಿಗೆ ವಿಶ್ ಮಾಡಿದ ಫೇಸ್ ಬುಕ್ ಪೋಸ್ಟ್ ಡಿಲೀಟ್ ಮಾಡಿಬಿಟ್ಟಿದ್ದಾರೆ. ಆದರೆ, ಆ ವೇಳೆಗಾಗಲೇ ಹಲವರಿಂದ ಕೊಹ್ಲಿ ಮಾನ ಹರಾಜಾಗಿದೆ.

ಕೊಹ್ಲಿ ಮೇಲಿನ ಗೌರವ ಕಡಿಮೆ

ಅತ್ಯಂತ ತ್ವರಿತವಾಗಿ ಶತಕ ಗಳಿಸಿದ ವೇಗಕ್ಕಿಂತ ವೇಗವಾಗಿ ಕೊಹ್ಲಿ ಮೇಲೆ ಗೌರವ ಕಡಿಮೆಯಾಗುತ್ತಿದೆ.

ಮರ್ರೆ ನಂತರ ಕೊಹ್ಲಿ

ಆಂಡಿ ಮರ್ರೆ ಅವರು ಮಾಧ್ಯಮ ಪ್ರತಿನಿಧಿಗೆ ತರಾಟೆಗೆ ತೆಗೆದುಕೊಂಡ ಬಳಿಕ ಕೊಹ್ಲಿ ಮಾಡಿದ ಪ್ರಮಾದ ಕಣ್ಣಿಗೆ ಬಿತ್ತು. ಒಳ್ಳೆ ಮಜಾ ಸಿಗುತ್ತಿದೆ ಎಂದ ಅಭಿಮಾನಿಗಳು.

ಮಹಿಳಾ ಕ್ರಿಕೆಟ್ ಬಗ್ಗೆ ಜ್ಞಾನ

ಮಹಿಳಾ ಕ್ರಿಕೆಟ್ ಬಗ್ಗೆ ಎಲ್ಲರಿಗೂ ಎಷ್ಟಿದೆ ಜ್ಞಾನ ಎಂಬದು ಇದರಿಂದ ಚೆನ್ನಾಗಿ ಗೊತ್ತಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India skipper Virat Kohli faced embarrassment following goof-up on his congratulatory message to Indian women's cricket team skipper Mithali Raj on Facebook.
Please Wait while comments are loading...