ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್ ಹೇಗಿದೆ ನೋಡಿ!

Written By: Ramesh
Subscribe to Oneindia Kannada

ನವದೆಹಲಿ, ಸೆ. 15 : ಸದಾ ಒಂದಲ್ಲ ಒಂದು ವಿಭಿನ್ನ ಹೇರ್ ಸ್ಟೈಲ್ ನಿಂದ ಗಮನ ಸೆಳೆಯುವ ಟೀಮ್ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ಇದೀಗ ಮತ್ತೆ ತಮ್ಮ ಹೇರ್ ಸ್ಟೈಲ್ ನ್ನು ಬದಲಾಯಿಸಿಕೊಂಡಿದ್ದಾರೆ.

ಮೈದಾನದಲ್ಲಿ ಮಿಂಚುವ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ, ವಿಭಿನ್ನ ಸ್ಟೈಲ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸೆಪ್ಟೆಂಬರ್ 22 ರಿಂದ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈ ಸ್ಪೆಷಲ್ ಕೇಶ ವಿನ್ಯಾಸದಿಂದ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ. [ಮಹೇಂದ್ರ ಸಿಂಗ್ ಧೋನಿ ಲುಂಗಿ ಲುಕ್ ನೋಡಿದ್ರಾ!]

Virat kholi

ತಲೆಯ ಎರಡೂ ಬದಿಯ ಕೂದಲನ್ನ ಬೋಳಿಸಿ ಮಧ್ಯ ಭಾಗದಲ್ಲಿ ಮಾತ್ರ ಉದ್ದಕ್ಕೆ ಕೂದಲನ್ನು ಬಿಟ್ಟು ತುಂಬಾ ವಿಚಿತ್ರವಾಗಿ ಕಾಣುತ್ತಿದ್ದಾರೆ.ಈ ಹೊಸ ಹೇರ್ ಸ್ಟೈಲ್ ನೊಂದಿಗೆ ಕಾಣಿಸಿಕೊಂಡ ವಿರಾಟ್ ನ ಹೊಸ ಲುಕ್ ಸಾಮಾಜಿಕ ತಾಣ ಟ್ವೀಟ್ಟರ್ ನಲ್ಲಿ ಸಂಚಲನ ಸೃಷ್ಟಿಸಿದೆ.

ಡೆಲ್ಲಿ ಬಾಯ್ ವಿರಾಟ್ ಗೆ ತುಂಬಾನೇ ಹೇರ್ ಸ್ಟೈಲ್ ಕ್ರೇಜ್ ಇದೆ. ಆಗಾಗ್ಗೆ ತಮ್ಮ ಹೇರ್ ಸ್ಟೈಲ್ ಬದಲಾಯಿಸುತ್ತಾ ಹೊಸ ಗೆಟಪ್ ನಲ್ಲಿ ಮಿಂಚುತ್ತಾರೆ.

ತಮ್ಮ ಹೊಸ ಹೇರ್ ಸ್ಟೈಲ್ ನ ವಿವಿಧ ಭಂಗಿಗಳಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ. ಕೊಹ್ಲಿಯ ಈ ಹೊಸ ಹೇರ್ ಸ್ಟೈಲ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As Team India gear up for the three-match Test series against New Zealand, skipper Virat Kohli on Thursday (Sep 15) unveiled his new look.
Please Wait while comments are loading...