ವಿರಾಟ್ ಕೊಹ್ಲಿ ಸಾಧನೆಗೆ ಮತ್ತೊಂದು ವಿಶಿಷ್ಟ ಗರಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 05: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ವಿಶ್ವ ಕ್ರಿಕೆಟ್‌ ಪ್ರತಿಷ್ಠಿತ ಗೌರವವೊಂದು ಕೊಹ್ಲಿ ಅವರನ್ನು ಹುಡುಕಿಕೊಂಡು ಬಂದಿದೆ. ವಿಶ್ವ ಕ್ರಿಕೆಟ್‌ನ ಬೈಬಲ್‌ ಎಂದೇ ಕರೆಯಲ್ಪಡುವ 'ವಿಸ್ಡೆನ್‌ ಕ್ರಿಕೆಟರ್ಸ್‌' ಪುಸ್ತಕ ತನ್ನ ಮುಖಪುಟದಲ್ಲಿ ಕೊಹ್ಲಿ ಫೋಟೊ ವನ್ನು ಪ್ರಕಟಿಸಲಾಗಿದೆ.

ಏಪ್ರಿಲ್ 06ರ ವಿಸ್ಡೆನ್ ಆವೃತ್ತಿಯಲ್ಲಿ ಕೊಹ್ಲಿ ಫೋಟೊ ಹೊಂದಿರುವ ಮುಖುಪ ಪುಸ್ತಕ ಪ್ರಕಟಗೊಳ್ಳಲಿದೆ. ಟೆಸ್ಟ್‌ ಅಥವಾ ನಿಗದಿತ ಓವರ್‌ ಕ್ರಿಕೆಟ್‌ ಮಾದರಿಯಲ್ಲಿ ರಿವರ್ಸ್‌ ಸ್ವೀಪ್‌ ಅತಿ ವಿರಳ ಹೊಡೆತವಾಗಿದ್ದು, ಕೊಹ್ಲಿ ಅವರು ರಿವರ್ಸ್ ಸ್ವೀಪ್ ಹೊಡೆತ ಬಾರಿಸುತ್ತಿರುವ ಫೋಟೊ ಬಳಸಿಕೊಳ್ಳಲಾಗಿದೆ.

ವಿರಾಟ್ ಕೊಹ್ಲಿ ಸಾಧನೆಗೆ ಮತ್ತೊಂದು ವಿಶಿಷ್ಟ ಗರಿ

ಮೈದಾನದಲ್ಲಿ ಕೊಹ್ಲಿ ಮಾಡಿರುವ ಸಾಧನೆಗಳನ್ನು ವಿಸ್ಡೆನ್‌ ಸಂಪಾದಕ ಲಾರೆನ್ಸ್‌ ಬೂತ್‌ ಹೊಗಳಿದ್ದಾರೆ. ಪ್ರಸಕ್ತ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಕ್ರಿಕೆಟರ್‌ ಎಂದಿದ್ದಾರೆ, ಹಳದಿ ಬಣ್ಣದ ಮುಖಪುಟ ವಿನ್ಯಾಸ ಹೊಂದಿರುವ ಚಿತ್ರವನ್ನು ವಿಸ್ಡನ್ ಟ್ವೀಟ್ ಮಾಡಿದೆ.

2014ರಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಫೋಟೊವನ್ನು ವಿಸ್ಡೆನ್ ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು. ಇದಾದ ಬಳಿಕ ಈ ಗೌರವಕ್ಕೆ ಪಾತ್ರರಾದ ಎರಡನೇ ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ.(ಏಜೆನ್ಸೀಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Virat Kohli has been unveiled as the latest cover star of Wisden Cricketers' Almanack, following his leading role in India's clean sweep of trophies in all three formats of their recent series against England.
Please Wait while comments are loading...