ಮಾರುಕಟ್ಟೆ ಮೌಲ್ಯ: ಮೆಸ್ಸಿ, ಜೋಕೊವಿಕ್ ಹಿಂದಿಕ್ಕಿದ ಕೊಹ್ಲಿ

Posted By:
Subscribe to Oneindia Kannada

ನವದೆಹಲಿ, ಮೇ 27: ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ವಿಶ್ವ 'ಮೂರನೇ ಅತ್ಯಂತ ಮೌಲ್ಯಯುತ ಕ್ರೀಡಾಪಟು' ಎನಿಸಿಕೊಂಡಿದ್ದಾರೆ. ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ, ವಿಶ್ವದ ನಂ.1 ಟೆನಿಸ್ ಪಟು ನೋವಾಕ್ ಜೋಕೊವಿಕ್ ರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ ಎಂದು 'ಸ್ಫೋರ್ಟ್ಸ್ ಪ್ರೋ' ಸಮೀಕ್ಷೆ ಹೇಳಿದೆ.[ಸಚಿನ್, ರಿಚರ್ಡ್ಸ್,ಲಾರಾಗಿಂತ ಕೊಹ್ಲಿ ಬೆಸ್ಟ್: ಕಪಿಲ್]

ವಿಶ್ವದ ಅತ್ಯಂತ ಮೌಲ್ಯ ಹೊಂದಿರುವ ಆಟಗಾರರಾಗಿ ಎನ್ ಬಿಎಯ ಸ್ಟೀಫನ್ ಕರಿ ಆಯ್ಕೆಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಯೂವೆಂಟಸ್ ಫ್ರೆಂಚ್ ಫುಟ್ಬಾಲ್ ಕ್ಲಬ್ ನ ಪಾಲ್ ಪೋಗ್ಬಾ ಇದ್ದರೆ, ಭಾರತದ ಕ್ರಿಕೆಟ್ ತಾರೆ ಕೊಹ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.[ಜಾಹೀರಾತು ವಾರ್: ಧೋನಿ ಹಿಂದಿಕ್ಕಿದ ವಿರಾಟ್ ಕೊಹ್ಲಿ]

Virat Kohli is ahead of Messi, Djokovic; named third most marketable sportsperson in world


ಕೊಹ್ಲಿ ನಂತರ ಗಾಲ್ಫರ್ ಜೋರ್ಡನ್ ಸ್ಪಿತ್ ಇದ್ದರೆ, ಟೆನಿಸ್ ತಾರೆ ಜೋಕೊವಿಕ್ 23ನೇ ಸ್ಥಾನದಲ್ಲಿದ್ದಾರೆ, ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ 27ನೇ ಸ್ಥಾನದಲ್ಲಿದ್ದರೆ, ಸ್ಪ್ರಿಂಟ್ ಕಿಂಗ್ ಉಸೇನ್ ಬೋಲ್ಟ್ 31ಸ್ಥಾನದಲ್ಲಿದ್ದಾರೆ. ಟಾಪ್ 50ಯಲ್ಲಿ ಕೊಹ್ಲಿ ಬಿಟ್ಟರೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಾತ್ರ ಕಾಣಿಸಿಕೊಂಡಿದ್ದಾರೆ.[ವಿಡಿಯೋ: ಜಿಮ್ ನಲ್ಲಿ ಕೊಹ್ಲಿ ಕಸರತ್ತು, ವಾರೆವ್ಹಾ!]

ಈ ಋತುವಿನಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ನಲ್ಲಿರಬಹುದಾದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಪಟ್ಟಿ ತಯಾರಿಸಲಾಗಿದೆ ಎಂದು ಸ್ಫೋರ್ಟ್ಸ್ ಪ್ರೋ ಹೇಳಿದೆ.[ಗವಾಸ್ಕರ್, ಸಚಿನ್, ದ್ರಾವಿಡ್ ದಾಖಲೆ ಮುರಿದ ಕೊಹ್ಲಿ]

2014ರಲ್ಲಿ ಫಾರ್ಮ್ಯೂಲಾ ಒನ್ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರು ಟಾಪ್ ಶ್ರೇಯಂಕದಲ್ಲಿದ್ದರು. 2012ರಲ್ಲಿ ನಂ. 1 ಸ್ಥಾನ ಪಡೆದ ಬ್ರೆಜಿಲ್ ಫುಟ್ಬಾಲರ್ ನೇಮಾರ್ ಅವರು 8ನೇ ಸ್ಥಾನದಲ್ಲಿದ್ದರೆ, 2011ರಲ್ಲಿ ಬೋಲ್ಟ್ ಮೊದಲ ಸ್ಥಾನ ಪಡೆದಿದ್ದರು.2010ರಲ್ಲಿ ಎನ್ ಬಿಎ ಸ್ಟಾರ್ ಲೆಬ್ರಾನ್ ಜೇಮ್ಸ್ ಮೊದಲ ಬಾರಿಗೆ ಅಗ್ರಸ್ಥಾನ ಗಳಿಸಿದ್ದರು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's Test captain and numero uno batsman Virat Kohli has been named as 'Third Most Marketable Sportsperson' in the world ahead of football superstar Lionel Messi, world No 1 tennis player Novak Djokovic in a latest survey published by magazine 'SportsPro'.
Please Wait while comments are loading...