'ನನ್ನ ಹೃದಯ ಗೆದ್ದ ದಾಂಡಿಗ ವಿರಾಟ್' ಎಂದ ವಿಂಡೀಸ್ ದಿಗ್ಗಜ

Subscribe to Oneindia Kannada

ಅಂಟಿಗುವಾ,ಜುಲೈ, 19: ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ದಿಗ್ಗಜ ಸರ್ ವಿವಿಯನ್ ರಿಚರ್ಡ್ಸ್ ಮತ್ತು ಭಾರತದ ಆಟಗಾರರ ಸಮಾಗಮವಾಗಿದೆ. ಟೆಸ್ಟ್ ಸರಣಿಯನ್ನು ಆಡಲು ವಿಂಡೀಸ್ ಗೆ ತೆರಳಿರುವ ವಿರಾಟ್ ಕೊಹ್ಲಿ ನೇತೃತ್ವದ ತಂಡ ಮತ್ತು ರಿಚರ್ಡ್ಸ್ ಒಟ್ಟಿಗೆ ಕಾಲ ಕಳೆದಿದೆ.

ನಾಯಕ ವಿರಾಟ್ ಕೊಹ್ಲಿ, ಮುರಳಿ ವಿಜಯ್, ಶಿಖರ್ ಧವನ್, ಅಜಿಂಕ್ಯ ರಹಾನೆ, ಕೆ ಎಲ್ ರಾಹುಲ್, ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್ ದಿಗ್ಗಜನಿಂದ ಟಿಪ್ಸ್ ಪಡೆದುಕೊಂಡರು. ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಿಚರ್ಡ್ಸ್ ಜತೆ ಇರುವ ಫೋಟೋ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ.[ಪಾಠದ ನಂತರ ಆಟ, ಟೀಂ ಇಂಡಿಯಾ ಮೋಜು ಮಸ್ತಿ]

 Virat Kohli, Team India players meet Sir Vivian Richards

"ನಾನು ವಿರಾಟ್ ಆಟವನ್ನು ಯಾವಾಗಲೂ ಇಷ್ಟಪಡುತ್ತೇನೆ. ನನ್ನ ಹೃದಯ ಗೆದ್ದ ಬ್ಯಾಟ್ಸ್ ಮನ್ ಯಾರಾದರೂ ಇದ್ದರೆ ಅದು ವಿರಾಟ್ ಮಾತ್ರ. ಅವರ ಆಕ್ರಮಣಶೀಲತೆ ನನಗೆ ಇಷ್ಟ ಆಗುತ್ತದೆ. ಒಂದು ಕಾಲದ ನನ್ನ ವ್ಯಕ್ತಿತ್ವವನ್ನು ವಿರಾಟ್ ಅವರಲ್ಲಿ ಕಾಣುತ್ತಿದ್ದೇನೆ" ಎಂದು ರಿಚರ್ಡ್ಸ್ ಹೇಳಿದರು.[ಟೀಂ ಇಂಡಿಯಾದ ಆಟಗಾರರಿಗೆ 'ದಂಡ' ಹಾಕುವ ಕುಂಬ್ಳೆ ಮೆಷ್ಟ್ರು]

ಸೋಮವಾರ ಭಾರತ ತಂಡ ಅಂಟಿಗುವಾದ ವಿವಿಯನ್ ರಿಚರ್ಡ್ಸ್ ಮೈದಾನಕ್ಕೆ ಬಂದಿಳಿದಿದೆ. ವಿಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಜುಲೈ 21 ರಂದು ಆರಂಭವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former West Indies legend Sir Vivian Richards met the Indian cricket team, that is on the Caribbean tour to play Test series, here and spent some quality time with them.India's Test team arrived at Sir Vivian Richards Stadium in North Sound, Antigua on Monday (July 18) where they are going to play the first Test match.
Please Wait while comments are loading...