24ನೇ ಶತಕ: ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ

Posted By:
Subscribe to Oneindia Kannada

ಮೆಲ್ಬೋರ್ನ್, ಜ. 17: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಲವು ಆಖಲೆಗಲನ್ನು ಮುರಿದಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿ ವಿಲಿಯರ್ಸ್ ಅವರ ದಾಖಲೆ ಜೊತೆಗೆ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆ ಧೂಳಿಪಟವಾಗಿದೆ.

ಏಕದಿನ ಕ್ರಿಕೆಟ್ ನಲ್ಲಿ ತ್ವರಿತ ಗತಿಯಲ್ಲಿ 7,000 ರನ್ ಗಳಿಸಿದ ಸಾಧನೆ ಮಾಡಿದ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ನಲ್ಲಿ ವೈಯಕ್ತಿಕ 24ನೇ ಶತಕ ದಾಖಲಿಸಿ, ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. [ಎಬಿ ಡಿವಿಲಿಯರ್ಸ್ ದಾಖಲೆ ಧ್ವಂಸಗೊಳಿಸಿದ ಕೊಹ್ಲಿ]

Virat Kohli fastest to score 24 ODI tons, surpasses Ricky Ponting

ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ದಲ್ಲಿ ಭಾನುವಾರ (ಜನವರಿ 17) 117ರನ್ ಗಳಿಸಿದ ಪಾಂಟಿಂಗ್ ಅವರು ಅತ್ಯಂತ ತ್ವರಿತ ಗತಿಯಲ್ಲಿ 24ನೇ ಶತಕ ಬಾರಿಸಿದ ದಾಖಲೆ ಹೊಂದಿದ್ದ ರಿಕಿ ಪಾಂಟಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ.

27ವರ್ಷ ವಯಸ್ಸಿನ ಕೊಹ್ಲಿ ಅವರು 169ನೇ ಪಂದ್ಯ 161ನೇ ಇನ್ನಿಂಗ್ಸ್ ನಲ್ಲಿ ವೃತ್ತಿ ಬದುಕಿನ 24ನೇ ಶತಕ ದಾಖಲಿಸಿದರೆ, ರಿಕಿ ಪಾಂಟಿಂಗ್ ಅವರು 278 ಬಾರಿ ಕ್ರೀಸ್ ಗೆ ಬಂದು ಈ ದಾಖಲೆ ಬರೆದಿದ್ದರು. ಶ್ರೀಲಂಕಾದ ಸನತ್ ಜಯಸೂರ್ಯ ಅವರು 370 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಕ್ರಿಕೆಟ್ ದಿಗ್ಗಜ ಸಚಿನ್ ಅವರು 219 ಇನ್ನಿಂಗ್ಸ್ ಹಾಗೂ ಕುಮಾರ್ ಸಂಗಕ್ಕಾರ 378 ಇನ್ನಿಂಗ್ಸ್ ನಲ್ಲಿ 24 ಶತಕ ಬಾರಿಸಿದ್ದಾರೆ.

ಇದಲ್ಲದೆ, ಕೊಹ್ಲಿ ಅವರು ಅತ್ಯಧಿಕ ಶತಕ ಗಳಿಸಿರುವ ಟಾಪ್ 5 ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಅಗ್ರಸ್ಥಾನದಲ್ಲಿ ಸಚಿನ್ ಅವರು 49 ಶತಕಗಳೊಂದಿಗೆ ಇದ್ದಾರೆ.

ಟಾಪ್ 5 ಆಟಗಾರರ ಪಟ್ಟಿ ಹೀಗಿದೆ:

* 49- ಸಚಿನ್ ತೆಂಡೂಲ್ಕರ್ (463 ಪಂದ್ಯಗಳು)
* 30-ರಿಕಿ ಪಾಂಟಿಂಗ್ (375)
* 28-ಸನತ್ ಜಯಸೂರ್ಯ (445)
* 25-ಕುಮಾರ್ ಸಂಗಕ್ಕಾರ (404)
* 24-ವಿರಾಟ್ ಕೊಹ್ಲಿ (169)
(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Virat Kohli surpassed some of the greats of the game when the Indian right-hander struck his 24th century in One Day Internationals.
Please Wait while comments are loading...