4 ಸರಣಿಗಳಲ್ಲಿ 4 ದ್ವಿಶತಕ ಕೊಹ್ಲಿಯಿಂದ ವಿಶ್ವದಾಖಲೆ!

Posted By:
Subscribe to Oneindia Kannada

ಹೈದರಾಬಾದ್, ಫೆಬ್ರವರಿ 10: ಬಾಂಗ್ಲಾದೇಶ ವಿರುದ್ಧದ ಹೈದರಾಬಾದಿನಲ್ಲಿ ನಡೆದಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಭರ್ಜರಿ ದ್ವಿಶತಕ ಸಿಡಿಸಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಫೆಬ್ರವರಿ 10ರಂದು ಪಂದ್ಯದ ಎರಡನೇ ದಿನದಂದು ಕೊಹ್ಲಿ ಅವರು 204ರನ್ ಗಳಿಸಿ ಔಟಾಗಿದ್ದಾರೆ.

ಸತತ ನಾಲ್ಕು ಸರಣಿಯಲ್ಲಿ ದ್ವಿಶತಕ ಸಿಡಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಹಾಗೂ ಭಾರತದ ರಾಹುಲ್ ದ್ರಾವಿಡ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದಿದ್ದಾರೆ.

Virat Kohli surpasses Don Bradman to set new world record

ಬ್ರಾಡ್ಮನ್ ಹಾಗೂ ರಾಹುಲ್ ದ್ರಾವಿಡ್ ಸತತ ಮೂರು ದ್ವಿಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian captain Virat Kohli today (February 10) set a new world record in the one-off Test against Bangladesh here
Please Wait while comments are loading...