ಭಾರತದ ಕೋಚ್ ಆಗಲು ವೆಟ್ಟೋರಿ ಸೂಕ್ತ ಎಂದ ಕೊಹ್ಲಿ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮೇ 09 : ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನಕ್ಕೆ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾಲಿ ಕೋಚ್ ಎಡಗೈ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಅವರ ಹೆಸರನ್ನು ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಸ್ತಾಪಿಸಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

2015 ರಲ್ಲಿ ಬಿಗ್ ಬ್ಯಾಶ್ ಲೀಗ್ ನ ಅಕ್ಲೆಂಡ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಡೇನಿಯಲ್ ವೆಟ್ಟೋರಿ ಅವರು ಸಧ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಇವರು ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ವಿರಾಟ್ ಕೊಹ್ಲಿ ಅವರು ವೆಟ್ಟೋರಿ ಪರ ಬ್ಯಾಟಿಂಗ್ ಮಾಡಿದ್ದಾರೆ. [ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ನೆಹ್ರಾ?]

ಖಾಲಿ ಇರುವ ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಬಿಸಿಸಿಐ ಕೂಡಾ ರಾಹುಲ್ ದ್ರಾವಿಡ್ ನೇಮಕ ಮಾಡಿಕೊಳ್ಳಲು ಒಲವು ತೋರಿದೆ. ಇನ್ನೊಂದೆಡೆ ಸಲಹಾ ಸಮಿತಿಯಲ್ಲಿರುವ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸಹ ರಾಹುಲ್ ಪರ ಬ್ಯಾಟ್ ಬೀಸುತ್ತಿದ್ದಾರೆ.

Virat Kohli suggests RCB coach Daniel Vettori's name for Team India coaching job

ಈ ಬಗ್ಗೆ ಸ್ಪಷ್ಟನೆ ನೀಡಿರುವ ದಿ ವಾಲ್ ರಾಹುಲ್ ದ್ರಾವಿಡ್ ಅಟಗಾರ ನಾಯಕನಾಗಿ ಪಂದ್ಯವನ್ನು ನೋಡುವುದೇ ಬೇರೆ. ಕೋಚ್ ಆಗಿ ಕಾರ್ಯನಿರ್ವಹಿಸುವ ರೀತಿಯೇ ಬೇರೆ. ನನಗೆ ಕೋಚ್ ಆಗಿ ಇನ್ನೂ ಹೆಚ್ಚಿನ ಜ್ಞಾನ ಪಡೆಯಬೇಕಿದೆ ಎಂದು ನಮ್ರವಾಗಿ ದ್ರಾವಿಡ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಯಾರು ಎಂಬುವುದು ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ) ಮಾತ್ರ ಇನ್ನು ಯಾವುದೇ ಹೆಸರನ್ನು ಅಂತಿಮಗೋಳಿಸಿಲ್ಲ. ಈ ಹುದ್ದೆಗೆ ಯಾರು ಅರ್ಹರು ಎಂಬುವುದುದನ್ನು ಸಲಹ ಸಮಿತಿ ಅವರ ಪ್ರೋಫೈಲ್ ನೋಡಿ ಅವರನ್ನು ಆಯ್ಕೆ ಮಾಡಲಾಗುವುದು ಎನ್ನುವುವದು ಬಿಸಿಸಿಐನ ಮಾತು.

ದ್ರಾವಿಡ್ ಅವರ ಹೇಳಿಕೆ, ವೆಟೋರಿ ಅವರನ್ನು ಬೆಂಬಲಿಸಿದ ವಿರಾಟ್. ಒಟ್ಟಿನಲ್ಲಿ ಟೀಂ ಇಂಡಿಯಾದ ಕೋಚ್ ಹುದ್ದೆಗೆ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At a time when speculations are rife over who is going to be appointed as Team India's new coach, reports now claim that Test skipper Virat Kohli has suggested former New Zealand skipper Daniel Vettori's name for the job.
Please Wait while comments are loading...