ವಿರಾಟ್ ಕೊಹ್ಲಿ ಮತ್ತೊಂದು ವಿಕ್ರಮ, ಚೊಚ್ಚಲ ದ್ವಿಶತಕ

Posted By:
Subscribe to Oneindia Kannada

ನಾರ್ಥ್ ಸೌಂಡ್(ಆಂಟಿಗ್ವಾ), ಜುಲೈ 21 : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ನಾಯಕನಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ ದ್ವಿಶತಕ ಸಿಡಿಸಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ (ಶುಕ್ರವಾರ)ದಲ್ಲಿ ಈ ಸಾಧನೆ ಕಂಡು ಬಂದಿದೆ.

ಪಂದ್ಯದ ಸ್ಕೋರ್ ಕಾರ್ಡ್

ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಮೊದಲ ದಿನದ ಅಂತ್ಯಕ್ಕೆ 143 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕೊಹ್ಲಿ ಅವರು ವೆಸ್ಟ್ ಇಂಡೀಸ್ ನಲ್ಲಿ ದ್ವಿಶತಕ ಗಳಿಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.

ಅಲ್ಲದೆ, ವಿದೇಶಿ ನೆಲದಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಕ್ಯಾಪ್ಟನ್ ಎಂಬ ಸಾಧನೆ ಮಾಡಿದ್ದಾರೆ. 281 ಎಸೆತಗಳಲ್ಲಿ ಕೊಹ್ಲಿ ಅವರು ಪ್ರಪ್ರಥಮ ಬಾರಿಗೆ 200 ರನ್ ಗಡಿ ದಾಟಿದರು.

Virat Kohli

ವಿರಾಟ್ ಕೊಹ್ಲಿ ಅವರು ತಮ್ಮ 43ನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದರೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ 71 ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದ್ವಿಶತಕ ಬಾರಿಸಿದ್ದರು.

27 ವರ್ಷ ವಯಸ್ಸಿನ ಕೊಹ್ಲಿ ಅವರು ಪಂದ್ಯದ ಮೊದಲ ದಿನದಂದು 12 ನೇ ಶತಕ ಬಾರಿಸಿದ್ದಲ್ಲದೆ 3,000 ವೈಯಕ್ತಿಕ ರನ್ ಗಳಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ 169 ರನ್ ಗಳಿಸಿದ್ದು ಈ ಹಿಂದಿನ ಸಾಧನೆಯಾಗಿತ್ತು. ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲೂ 197 ರನ್ ಕೊಹ್ಲಿ ಅವರ ಗರಿಷ್ಠ ಮೊತ್ತವಾಗಿತ್ತು. ಈಗ ಈ ದ್ವಿಶತಕ ಮೂಲಕ ಎಲ್ಲಾ ದಾಖಲೆ ಸರಿಗಟ್ಟಿದ್ದಾರೆ.

2013ರಲ್ಲಿ ಎಂಎಸ್ ಧೋನಿ ಅವರು ನಾಯಕನಾಗಿ ಆಸ್ಟ್ರೇಲಿಯಾ ವಿರುದ್ಧ ನಡೆದ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ (224) ಬಾರಿಸಿದ್ದರು. ಇದಾದ ಬಳಿಕ ಕೊಹ್ಲಿ ಅವರು ಈ ಸಾಧನೆ ಮಾಡಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India's run machine Virat Kohli smashed his maiden double hundred in Test against the West Indies at the Sir Viv Richards stadium here on Friday (July 22).
Please Wait while comments are loading...