ಕೊಹ್ಲಿ ನಾಯಕನಾಗಲು ಇದು ಸಕಾಲವಲ್ಲ: ಗವಾಸ್ಕರ್

Posted By:
Subscribe to Oneindia Kannada

ನವದೆಹಲಿ, ಮೇ 11: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಿಸಿ ಜೋರಾಗುವ ಸಂದರ್ಭದಲ್ಲೇ ಏಕದಿನ ಕ್ರಿಕೆಟ್ ತಂಡದ ನಾಯಕತ್ವದ ಚರ್ಚೆ ಆರಂಭಗೊಂಡಿದೆ. ಎಂಎಸ್ ಧೋನಿ ವಿರುದ್ಧ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿಕೆ ನೀಡಿದರೆ, ದಿಗ್ಗಜ ಸುನಿಲ್ ಗವಾಸ್ಕರ್ ಅವರು ಕೊಹ್ಲಿ ನಾಯಕರಾಗಲು ಇದು ಸೂಕ್ತ ಕಾಲವಲ್ಲ ಎಂದಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ವಿರಾಟ್ ಕೊಹ್ಲಿ ಅವರು ಉತ್ತಮ ಲಯದಲ್ಲಿದ್ದಾರೆ ನಿಜ, ಆದರೆ, ಏಕದಿನ ಕ್ರಿಕೆಟ್ ಹಾಗೂ ಟಿ20ಐ ನಾಯಕತ್ವ ವಹಿಸಿಕೊಳ್ಳಲು ಇನ್ನೂ ಪಕ್ವತೆ ಬೇಕು. ಒಂದು ವೇಳೆ ಅವಕಾಶ ಒದಗಿಬಂದರೂ ವಿರಾಟ್ ಅವರು ಈ ಬಗ್ಗೆ ಯೋಚಿಸುವುದು ಒಳ್ಳೆಯದು, 2019ರ ವಿಶ್ವಕಪ್ ವೇಳೆಗೆ ಪರಿಸ್ಥಿತಿ ಇದೇ ರೀತಿ ಇರುವುದಿಲ್ಲ ಎಂದು ಎನ್ ಡಿಟಿವಿಗೆ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. [ನೆಹ್ರಾ-ಟೀಂ ಇಂಡಿಯಾದ ಬೌಲಿಂಗ್ ಕೋಚ್?]

Virat Kohli should not be rushed into captaincy in ODIs, T20Is: Sunil Gavaskar

ಐಪಿಎಲ್ 9ರಲ್ಲಿ 561ಕ್ಕೂ ಅಧಿಕ ರನ್ ಗಳಿಸಿರುವ ಕೊಹ್ಲಿ ಅವರು 2015/16ರಲ್ಲಿ 95.57ರನ್ ಸರಾಸರಿಯಂತೆ ಟಿ20ಐಗಳಲ್ಲಿ ರನ್ ಚೆಚ್ಚಿದ್ದಾರೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುವಲ್ಲಿ ಹಲವು ಬಾರಿ ಎಡವಿದ್ದಾರೆ. [ಟೀಂ ಇಂಡಿಯಾದಿಂದ ಜಿಂಬಾಬ್ವೆ ಪ್ರವಾಸ]

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದು, ಎಲ್ಲಾ ಮಾದರಿ ಕ್ರಿಕೆಟ್ ನಲ್ಲೂ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amid growing chorus over making Virat Kohli India's ODI, T20 skipper, former India captain and legendary batsman Sunil Gavaskar feels the Indian swashbuckler, who is in a supreme form, should not be rushed into handing over captaincy in all formats.
Please Wait while comments are loading...