ಕೊಹ್ಲಿ- ಸಾಧನೆಯ ಮತ್ತೊಂದು ಮೈಲಿಗಲ್ಲು ದಾಟಲು ಸಜ್ಜು!

Posted By:
Subscribe to Oneindia Kannada

ವಿಶಾಖಪಟ್ಟಣಂ, ನವೆಂಬರ್ 15: ಟೀಂ ಇಂಡಿಯಾ ನಾಯಕ ಹಾಗೂ ಭರವಸೆಯ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಆಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಲಿದ್ದಾರೆ.

2011ರಲ್ಲಿ ಜಮೈಕಾದ ಕಿಂಗ್ಸ್ ಟನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ 28 ವರ್ಷ ವಯಸ್ಸಿನ ಕೊಹ್ಲಿ ಅವರು ಟೆಸ್ಟ್ , ಏಕದಿನ ಹಾಗೂ ಟ್ವೆಂಟಿ 20 ಮೂರು ಮಾದರಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.[ಕೊಹ್ಲಿಗೆ ಈಗ ಅಜರುದ್ದೀನ್ ದಾಖಲೆ ಮುರಿಯುವ ತವಕ!]

Virat Kohli set to play milestone Test against England in Visakhapatnam

ಈಗಾಗಲೇ ಆನೇಕ ಟೆಸ್ಟ್ ದಾಖಲೆಗಳನ್ನು ಮುರಿದಿರುವ ಕೊಹ್ಲಿ ಅವರು ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿಯಲ್ಲಿ 28ನೇ ಟೆಸ್ಟ್ ಆಟಗಾರನಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ಅವರ ವೃತ್ತಿ ಬದುಕಿನ 50ನೇ ಟೆಸ್ಟ್ ಪಂದ್ಯವಾಗಿದೆ. 200ನೇ ಟೆಸ್ಟ್ ಪಂದ್ಯವಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. [ಭಾರತಕ್ಕೆ ಇಂಗ್ಲೆಂಡ್ ಪ್ರವಾಸ, ಬೆಂಗ್ಳೂರಲ್ಲಿ 1 ಟಿ20 ಪಂದ್ಯ]

ಕೊಹ್ಲಿ ಅವರು 49 ಟೆಸ್ಟ್ ಪಂದ್ಯಗಳಲ್ಲಿ 13 ಶತಕ, 12 ಅರ್ಧಶತಕ ಮೂಲಕ 3,643 ರನ್ ಗಳಿಸಿದ್ದಾರೆ. 211 ವೈಯಕ್ತಿಕ ಗರಿಷ್ಠ ಮೊತ್ತ. ಟೆಸ್ಟ್ ತಂಡದ ನಾಯಕನಾಗಿ ಕೊಹ್ಲಿ ಅವರು 18 ಪಂದ್ಯಗಳಿಂದ 10 ಜಯ ದಾಖಲಿಸಿದ್ದಾರೆ. ಎಂಎಸ್ ಧೋನಿ (27 ಜಯ), ಸೌರವ್ ಗಂಗೂಲಿ(21) ಹಾಗೂ ಅಜರುದ್ದೀನ್(14) ನಂತರದ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ಕ್ರಿಕೆಟರ್ಸ್ ಪಟ್ಟಿ:
* 200- ಸಚಿನ್ ತೆಂಡೂಲ್ಕರ್
* 163- ರಾಹುಲ್ ದ್ರಾವಿಡ್
* 134- ವಿವಿಎಸ್ ಲಕ್ಷ್ಮಣ್
* 132- ಅನಿಲ್ ಕುಂಬ್ಳೆ
* 131 - ಕಪಿಲ್ ದೇವ್
* 125- ಸುನಿಲ್ ಗವಾಸ್ಕರ್
* 116- ದಿಲೀಪ್ ವೆಂಗ್ ಸರ್ಕಾರ್
* 113- ಸೌರವ್ ಗಂಗೂಲಿ
* 103- ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್
* 99- ಮೊಹಮ್ಮದ್ ಅಜರುದ್ದೀನ್
* 92- ಜಹೀರ್ ಖಾನ್
* 91-ಜಿಆರ್ ವಿಶ್ವನಾಥ್
* 90- ಮಹೇಂದ್ರ ಸಿಂಗ್ ಧೋನಿ
* 88 - ಸೈಯದ್ ಕಿರ್ಮಾನಿ
* 80- ರವಿಶಾಸ್ತ್ರಿ
* 72- ಇಶಾಂತ್ ಶರ್ಮ
* 69- ಮೋಹಿಂದರ್ ಅಮರನಾಥ್
* 67- ಬಿಷನ್ ಸಿಂಗ್ ಬೇಡಿ, ಜಾವಗಲ್ ಶ್ರೀನಾಥ್
* 59- ಪಾಲಿ ಉಮ್ರಿಗರ್
* 58- ಬಿಎಸ್ ಚಂದ್ರಶೇಖರ್, ಗೌತಮ್ ಗಂಭೀರ್
* 55- ಎಸ್ ವೆಂಕಟರಾಘವನ್
* 51- ನವಜ್ಯ್ಯೋತ್ ಸಿಂಗ್ ಸಿಧು
* 49 -ವಿರಾಟ್ ಕೊಹ್ಲಿ, ಕಿರಣ್ ಮೋರೆ, ಇಎಎಸ್ ಪ್ರಸನ್ನ
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Virat Kohli set to play milestone Test against England in Visakhapatnam. The 28-year-old Kohli, who is, by far, India's best batsman across all three formats at the moment, is set to play his 50th Test on Thursday. He made his Test debut against West Indies in June 2011 in Kingston (Jamaica).
Please Wait while comments are loading...