ಪಾಕ್ ವಿರುದ್ಧದ ಫೈನಲ್ ಬಗ್ಗೆ ಕೊಹ್ಲಿ ಮುಗುಳ್ನಕ್ಕಿದ್ದೇಕೆ?

Posted By:
Subscribe to Oneindia Kannada

ಲಂಡನ್, ಜೂನ್ 16: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ನಿರ್ಣಾಯಕ ಘಟ್ಟಕ್ಕೆ ಬಂದು ಮುಟ್ಟಿದ್ದು, ಬರುವ ಭಾನುವಾರ (ಜೂನ್ 18) ನಡೆಯಲಿರುವ ಟೂರ್ನಿಯ ಫೈನಲ್ ನಲ್ಲಿ ಭಾರತ ತಂಡ, ತನ್ನ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.

ಚಾಂಪಿಯನ್ಸ್ ಟ್ರೋಫಿ : ಗ್ಯಾಲರಿ

ಬಾಂಗ್ಲಾದೇಶದ ವಿರುದ್ಧ ಸೆಮಿಫೈನಲ್ ಪಂದ್ಯ ಗೆದ್ದ ಮೇಲೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿಯವರನ್ನು ಈ ಬಗ್ಗೆ ಕೇಳಿದಾಗ ಅವರು ಮುಗುಳ್ನಕ್ಕರು. ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿದ್ದ ಬಹುತೇಕ ಪತ್ರಕರ್ತರೂ ಮುಗುಳ್ನಕ್ಕರು. ಏಕೆ....?

Virat Kohli says no strategy for Indo-Pak title clash in champions trophy 2017

ವಿಚಾರ ಇಷ್ಟೇ. ಪತ್ರಿಕಾಗೋಷ್ಠಿ ಶುರುವಾದ ನಂತರ, ಪತ್ರಕರ್ತನೊಬ್ಬ ಏಷ್ಯಾದ ರಾಷ್ಟ್ರಗಳೇ ಫೈನಲ್ ಗೆ ಕಾಲಿಟ್ಟಿರುವ ಈ ಪಂದ್ಯಕ್ಕಾಗಿ ಏನಾದರೂ ವಿಶೇಷ ತಂತ್ರಗಾರಿಕೆ ಹೊಂದಿದ್ದೀರಾ ಎಂಬರ್ಥದ ಪ್ರಶ್ನೆಯನ್ನು ಕೇಳಿದ.

ಕೊಹ್ಲಿ ನಾಲಗೆ ಹೊರಹಾಕಿ ಸಂಭ್ರಮಿಸಿದ್ದಕ್ಕೆ ಏನರ್ಥ?

ಇದಕ್ಕೆ ವಿರಾಟ್ ಕೊಹ್ಲಿ, ಇಲ್ಲ ಎಂದು ಉತ್ತರಿಸಿ, ಮುಗುಳ್ನಕ್ಕರು. ಅದರರ್ಥ, ಈಗಲೇ ಏನೂ ಹೇಳಲಾಗದು ಎಂದು. ಆದರೆ, ಕೊಹ್ಲಿಯವರ ಈ ಹೇಳಿಕೆಯು ಈಗಾಗಲೇ ಪಾಕಿಸ್ತಾನವನ್ನು ಮಣಿಸಿರುವ ನಮಗೆ (ಭಾರತಕ್ಕೆ) ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದಂತೆ ಭಾಸವಾಯಿತು. ಹಾಗಾಗಿ, ಪತ್ರಿಕಾಗೋಷ್ಠಿಯಲ್ಲಿ ನಗೆ ಉಕ್ಕಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India captain Virat Kohli says he has no strategy right now for the final match of Champions trophy against Pakistan.
Please Wait while comments are loading...