ನನ್ನನ್ನು ಕ್ರಿಕೆಟ್ ದೇವರಿಗೆ ಹೋಲಿಸಬೇಡಿ ಎಂದ ವಿರಾಟ್ ಕೊಹ್ಲಿ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 18: ಕ್ರಿಕೆಟ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ 'ರನ್ ಮಿಷನ್' ವಿರಾಟ್ ಕೊಹ್ಲಿ ಅವರನ್ನು ಕೆಲವರು ದಿ ಲೆಜೆಂಡ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸುತ್ತಿದ್ದಾರೆ. ಆದರೆ, ವಿರಾಟ್ ಮಾತ್ರ ನನ್ನನ್ನು ಕ್ರಿಕೆಟ್ ದೇವರಿಗೆ ಹೋಲಿಕೆ ಮಾಡುತ್ತಿರುವುದು ನನಗೆ ಮುಜುಗರವಾಗುತ್ತೆ ಹಾಗಾಗಿ ನನ್ನನ್ನು ಸಚಿನ್ ಅವರಿಗೆ ಹೋಲಿಸಬೇಡಿ ಎಂದಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಸಚಿನ್ ಅದ್ಭುತ ವ್ಯಕ್ತಿ. ನನ್ನನ್ನು ಅವರಿಗೆ ಹೋಲಿಸುವುದು ಸರಿಯಲ್ಲ. ನಾನು ಕಳೆದ ಎರಡು ವರ್ಷದಿಂದ ಆಡುತ್ತಿದ್ದೇನೆ. ಆದರೆ ಅವರು ಸುಮಾರು 24 ವರ್ಷಗಳಿಂದ ಆಡಿ ಪ್ರತಿಭೆಗಳೊಂದಿಗೆ ಹುಟ್ಟಿದವರು, ಕೆಲ ತಿಂಗಳಿಂದ ನಾನು ಬ್ಯಾಟಿಂಗ್ ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿದ್ದೇನೆ.

Virat Kohli salutes Sachin Tendulkar, says not fair to draw comparisons with his idol

ನಾನು ಇನ್ನು ಸಾಧನೆಯ ಹಾದಿಯಲ್ಲಿದ್ದೇನೆ. ಅವರ ಆಟದ ಪ್ರೇರಣೆಯಿಂದ ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ಆಟವಾಡಲು ಬಯಸುತ್ತೇನೆ ಎಂದು ವಿರಾಟ್ ಹೇಳಿದ್ದಾರೆ.

ಡೆಲ್ಲಿ ಡ್ಯಾಶರ್ ವಿರಾಟ್ ಐಪಿಎಲ್ ಸೀಸನ್ 9 ನಲ್ಲಿ ತಮ್ಮ ಬ್ಯಾಟಿಂಗ್ ಕೈಚಳಕದಿಂದ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇದರಿಂದ ಕೊಹ್ಲಿ ಅವರನ್ನು ಕೆಲ ಹಿರಿಯ ಆಟಗಾರರು ಕ್ರಿಕೆಟ್ ದಿಗ್ಗಜ ಸಚಿನ್ ಅವರಿಗೆ ಹೋಲಿಕೆ ಮಾಡುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's star batsman Virat Kohli says he has not batted better than the last two months but stopped short of calling the ongoing phenomenal phase as the peak of his career.
Please Wait while comments are loading...