ಟಿ20 ಶ್ರೇಯಾಂಕ: ವಿರಾಟ್ ನಂ.01, ಕನ್ನಡಿಗ ರಾಹುಲ್ ಗೆ ಬಡ್ತಿ

By: ಕ್ರೀಡಾ ಡೆಸ್ಕ್
Subscribe to Oneindia Kannada

ದುಬೈ ಸೆಪ್ಟೆಂಬರ್, 01: ಅಮೆರಿಕಾದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ರನ್ ಬರ ಅನುಭವಿಸಿದರೂ ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾದ ಉಪನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಟ್ವೆಂಟಿ-20 ಬ್ಯಾಟ್ಸ್ ಮನ್‌ಗಳ ವಿಶ್ವ ಕ್ರಮಾಂಕಪಟ್ಟಿಯಲ್ಲಿ ರನ್ ಮಿಷನ್ ಡೆಲ್ಲಿ ಬಾಯ್ ವಿರಾಟ್‌ ಕೊಹ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.[400 ರನ್ ಗಳಿಕೆ ಕ್ಲಬ್ ಭಾರತ ನಂ. 2ನಲ್ಲಿ, ನಂ. 1 ಯಾರು?]

ಕನ್ನಡಿಗ ಕೆ.ಎಲ್‌. ರಾಹುಲ್‌ ಅವರು 31ನೇ ಸ್ಥಾನಕ್ಕೇರಿದ್ದಾರೆ. ಅಮೆರಿಕದಲ್ಲಿ ನಡೆದಿದ್ದ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಕರ್ನಾಟಕದ ರಾಹುಲ್‌ ಶತಕ ಗಳಿಸಿ ಮಿಂಚಿದ್ದರು. ಇದರೊಂದಿಗೆ 36 ಸ್ಥಾನ ಬಡ್ತಿ ಪಡೆದು ಮೊದಲ ಬಾರಿಗೆ ಅಗ್ರ 35ರೊಳಗೆ ಕಾಣಿಸಿಕೊಂಡಿದ್ದಾರೆ. [ಟೆಸ್ಟ್ ಶ್ರೇಯಾಂಕ: ಡೇಲ್ ಸ್ಟೇನ್ ಮತ್ತೆ ನಂ.1, ಅಶ್ವಿನ್ ನಂ.3]

Virat Kohli retains No 1 spot in T20 rankings

ರೋಹಿತ್ ಶರ್ಮ ಐದು ಸ್ಥಾನ ಮೇಲೇರಿದ್ದು 17ನೇ ಸ್ಥಾನದಲ್ಲಿದ್ದಾರೆ. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಪರಿಣಾಮಕಾರಿ ದಾಳಿ ನಡೆಸಿದ್ದ ಆರ್. ಅಶ್ವಿನ್ ಬೌಲಿಂಗ್ ವಿಭಾಗದಲ್ಲಿ ಏಳರಿಂದ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟ್ವೆಂಟಿ-20 ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಅಮಿತ್‌ಮಿಶ್ರಾ ಇದೇ ಮೊದಲ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಕಾಣಿಸಿಕೊಂಡು 104ನೇ ಸ್ಥಾನ ಪಡೆದುಕೊಂಡಿದ್ದಾರೆ. [ಹೊಸ ದಾಖಲೆ ಬರೆದ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾ]

ಭುವನೇಶ್ವರ್ ಕುಮಾರ್‌ (67) ಮತ್ತು ಮಹಮ್ಮದ್‌ ಶಮಿ (82) ಅವರೂ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ. ತಂಡಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೆ, 132 ರೇಟಿಂಗ್‌ ಪಾಯಿಂಟ್ಸ್ ಹೊಂದಿರುವ ನ್ಯೂಜಿಲೆಂಡ್ ಅಗ್ರಸ್ಥಾನ ಹೊಂದಿದೆ. ವೆಸ್ಟ್‌ ಇಂಡೀಸ್‌ ತಂಡ ಮೂರನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ತಂಡಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's star batsman Virat Kohli has maintained his number one position in the ICC T20 batsmen rankings, while off-spinner Ravichandran Ashwin returned to the top five in the bowlers' list, climbing up to fourth spot from seventh.
Please Wait while comments are loading...