ಲಾರ್ಡ್ಸ್ ಟಾಪ್ 20 ಕ್ರಿಕೆಟರ್ಸ್ ಪಟ್ಟಿಯಲ್ಲಿ ಕೊಹ್ಲಿ ನಂ. 1

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 25: ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆಯ ತಂಡಕ್ಕೆ ನಾಯಕರಾಗಿ ಕೊಹ್ಲಿ ಆಯ್ಕೆಯಾದ ಬಳಿಕ ಈಗ ಲಾರ್ಡ್ಸ್ ಕ್ರಿಕೆಟ್ ಮೈದಾನ ಆಯ್ಕೆಯ 2016ರ ಟಾಪ್ 20 ಆಟಗಾರರ ಪೈಕಿ ಕೊಹ್ಲಿಗೆ ಅಗ್ರಸ್ಥಾನ ನೀಡಲಾಗಿದೆ.

2016ರಲ್ಲಿ ಉತ್ತಮ ಪ್ರದರ್ಶನ ನೀಡಿದ 20 ಆಟಗಾರರನ್ನು ಆಯ್ಕೆ ಮಾಡಿ ಪಟ್ಟಿಯನ್ನು ಲಾರ್ಡ್ಸ್ ಮೈದಾನದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ಕೊಹ್ಲಿ ನಂತರದ ಸ್ಥಾನದಲ್ಲಿ ಇಂಗ್ಲೆಂಡಿನ ವಿಕೆಟ್ ಕೀಪರ್ ಜಾನಿ ಬೈರ್ಸ್ಟೋ ಇದ್ದಾರೆ, ಮೂರನೇ ಸ್ಥಾನದಲ್ಲಿ ಭಾರತದ ಆಲ್ ರೌಂಡರ್ ಆರ್ ಅಶ್ವಿನ್ ಸ್ಥಾನಪಡೆದುಕೊಂಡಿದ್ದರೆ, ನಾಲ್ಕನೇ ಸ್ಥಾನದಲ್ಲಿ ಶ್ರೀಲಂಕಾದ ಸ್ಪಿನ್ನರ್ ರಂಗಣಾ ಹೆರಾತ್, ಐದನೇ ಸ್ಥಾನದಲ್ಲಿ ಇಂಗ್ಲೆಂಡಿನ ವೇಗಿ ಕ್ರಿಸ್ ವೋಗ್ಸ್ ಇದ್ದಾರೆ.

Virat Kohli rated No. 1 in Lord's Cricket Ground list of 20 best cricketers of 2016

ಲಾರ್ಡ್ಸ್ ಮೈದಾನದವರ ಆಯ್ಕೆಯ ಟಾಪ್ 20 ಆಟಗಾರರು:
1. ವಿರಾಟ್ ಕೊಹ್ಲಿ
2. ಜಾನಿ ಬೈರ್ಸ್ಟೋ
3. ರವಿಚಂದ್ರನ್ ಅಶ್ವಿನ್
4. ರಂಗನಾ ಹೆರಾತ್
5. ಕ್ರಿಸ್ ವೋಕ್ಸ್
6. ಕಗಿಸೋ ರಬಡಾ
7. ಜೋ ರೂಟ
8. ಕ್ವಿಂಟಾನ್ ಡಿ ಕಾಕ್
9. ಮಿಚೆಲ್ ಸ್ಟಾರ್ಕ್
10. ಬೆನ್ ಸ್ಟೋಕ್
11. ಮಿಸ್ಬಾ ಅಲ್ ಹಕ್
12. ಡೇವಿಡ್ ವಾರ್ನರ್
13. ಅಜಿಂಕ್ಯ ರಹಾನೆ
14. ಸ್ಟೀವ್ ಸ್ಮಿತ್
15. ಯಾಸಿರ್ ಶಾ
16. ಮರ್ಲಾನ್ ಸ್ಯಾಮುಯಲ್ಸ್
17. ಕುಸಾಲ್ ಮೆಂಡಿಸ್
18. ಚೇತೇಶ್ವರ್ ಪೂಜಾರಾ
19. ಇಮ್ರಾನ್ ತಾಹೀರ್
20. ಶಕಿಬ್ ಅಲ್ ಹಸನ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After Cricket Australia named India's batting masterclass, Virat Kohli, the captain of its team of the year 2016, Lord's Cricket Ground have now declared their list of top 20 players led by Kohli.
Please Wait while comments are loading...