ಕೊಹ್ಲಿ ವೀರಾವೇಶ, ಪ್ಲೇ ಆಫ್ ಗೆ ಆರ್ ಸಿಬಿ ಪ್ರವೇಶ

Posted By:
Subscribe to Oneindia Kannada

ರಾಯ್ ಪುರ್, ಮೇ 22 : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಂತಿಮ ಲೀಗ್ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್ 9 ರ ಪ್ಲೇ ಆಫ್ ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ನಾಯಕ ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ರನ್ ಚೇಸ್, ಚಾಹಲ್ ಸ್ಪಿನ್ ಕಮಾಲ್ ಮೂಲಕ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಗೆಲುವು ತನ್ನದಾಗಿಸಿಕೊಂಡಿದೆ.[ಪಂದ್ಯದ ಸ್ಕೋರ್ ಕಾರ್ಡ್]

Virat Kohli Powers RCB to Play-offs IPL 2016

ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಲೀಗ್ ಆಟ ಮುಗಿಸಿದೆ. ನಾಕೌಟ್ ಹಂತದಲ್ಲಿ ಅಗ್ರಸ್ಥಾನಿ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದ್ದು, ಆ ಪಂದ್ಯವನ್ನು ಗೆಲ್ಲುವ ತಂಡ ನೇರವಾಗಿ ಫೈನಲ್ ತಲುಪಲಿದೆ. [ಚೊಚ್ಚಲ ಐಪಿಎಲ್ ನಲ್ಲೇ ರೈನಾ-ಲಯನ್ಸ್ ಮಹತ್ತರ ಸಾಧನೆ]

ಇನ್ನೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಎಲಿಮಿನೇಟರ್ ನಲ್ಲಿ ಸೆಣಸಲಿವೆ. ಈ ಪಂದ್ಯವನ್ನು ಗೆದ್ದವರು, ಕ್ವಾಲಿಫೈಯರ್ ನಲ್ಲಿ ಸೋತ ತಂಡದೊಡನೆ ಸೆಣಸಿ ಫೈನಲ್ ತಲುಪಬಹುದಾಗಿದೆ.[ಕ್ರೇಜಿ ಬಾಯ್ ಕೊಹ್ಲಿ ಆಡಿ ಕಾರಿನ ಸವಾರಿ]

ಮೇ 24(ಮಂಗಳವಾರ) ರಂದು ಮೊದಲ ಕ್ವಾಲಿಫೈಯರ್ (ಗುಜರಾತ್ vs ಬೆಂಗಳೂರು) ಹಾಗೂ ಮೇ 29 ರಂದು ಭಾನುವಾರ ಫೈನಲ್ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.[ಕೊಹ್ಲಿಯನ್ನು ಬೆಚ್ಚಿಬೀಳಿಸಬಲ್ಲ ಬೌಲರ್ ಯಾರು?]

ಪಂದ್ಯದ ವರದಿ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡಕ್ಕೆ ಆರಂಭಿಕ ಆಟಗಾರ ಡಿ ಕಾಕ್ ಆಸರೆ 52 ಎಸೆತಗಳಲ್ಲಿ 60 ರನ್(5x4,1x6),ಮಿಕ್ಕಂತೆ ಕೊನೆ ಹಂತದಲ್ಲಿ ಕ್ರಿಸ್ ಮೊರೀಸ್ ಅಜೇಯ 27 ರನ್ (18 ಎಸೆತ, 3x4) 8 ವಿಕೆಟ್ ಕಳೆದುಕೊಂಡು 138ರನ್ ಗಳಿಕೆ. ಲೆಗ್ ಸ್ಪಿನ್ನರ್ ಚಾಹಲ್ ಗೆ 3 ವಿಕೆಟ್ ಜತೆಗೆ ಪರ್ಪಲ್ ಕ್ಯಾಪ್ ತಲೆಗೆ ಸಿಕ್ಕಿತು. ಗೇಲ್ ಗೆ ಎರಡು, ಅರವಿಂದ್ ಜೋರ್ಡನ್ ಗೆ ತಲಾ ಒಂದು ವಿಕೆಟ್ ಪ್ರಾಪ್ತಿ.

ಕೊಹ್ಲಿ ವೀರಾವೇಶ, ಪ್ಲೇ ಆಫ್ ಗೆ ಆರ್ ಸಿಬಿ ಪ್ರವೇಶ

ಕೊಹ್ಲಿ ವೀರಾವೇಶ, ಪ್ಲೇ ಆಫ್ ಗೆ ಆರ್ ಸಿಬಿ ಪ್ರವೇಶ

-
-
-

ಆರ್ ಸಿಬಿ ರನ್ ಚೇಸ್: ಕ್ರಿಸ್ ಮೋರಿಸ್ ಬೌಲಿಂಗ್ ನಲ್ಲಿ ಕ್ರಿಸ್ ಗೇಲ್ ಔಟ್, ಎಬಿಡಿ ಜಹೀರ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಔಟ್, ಕೆಎಲ್ ರಾಹುಲ್ 23 ಎಸೆತಗಳಲ್ಲಿ 38 ರನ್(4x4, 1x6), ವಾಟ್ಸನ್ 14 ರನ್ ಸೇರಿಸಿ ಅಜೇಯ 54 ರನ್ ಗಳಿಸಿದ ಕೊಹ್ಲಿಯಿಂದ ವಿಜಯೋತ್ಸವ ಆಚರಣೆ.

ಆರ್ ಸಿಬಿಯಲ್ಲಿ ಆರೇಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಎಬಿಡಿ-ಕೊಹ್ಲಿ ಜೊತೆಯಾಟದ ದಾಖಲೆ, ಕೊಹ್ಲಿ ಹೆಚ್ಚು ಸಿಕ್ಸರ್ ಸಿಡಿತ, ಫೇರ್ ಪ್ಲೇ ಪ್ರಶಸ್ತಿ ಪಟ್ಟಿಯಲ್ಲಿ ಸದ್ಯಕ್ಕೆ ಅಗ್ರಸ್ಥಾನ ಎಲ್ಲವೂ ತುಂಬಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Virat Kohli Powers RCB to enter Play-offs in IPL 2016. Royal Challengers Bangalore playing for the first time in Raipur, beat Delih Dare devils by 6 wickets on May 22 to play play off clash against Gujarat Lions.
Please Wait while comments are loading...