ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆಯ XI -ಕೊಹ್ಲಿ ಕ್ಯಾಪ್ಟನ್

Posted By:
Subscribe to Oneindia Kannada

ಸಿಡ್ನಿ, ಡಿಸೆಂಬರ್ 27: ಟೀಂ ಇಂಡೀಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರನ್ನು ವರ್ಷದ ಏಕದಿನ ಕ್ರಿಕೆಟ್ ತಂಡಕ್ಕೆ ನಾಯಕರಾಗಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಘೋಷಿಸಿದೆ. ಆಸ್ಟ್ರೇಲಿಯಾದ ಟೆಸ್ಟ್ ತಂಡಕ್ಕೂ ಕೊಹ್ಲಿ ಅವರೇ ನಾಯಕರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಐಸಿಸಿ ಪ್ರಕಟಿಸಿದ ವಾರ್ಷಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿರಾಟ್ ಕೊಹ್ಲಿ ವಿಫಲರಾಗಿರುವ ವಿಷಯ ತಿಳಿದಿರಬಹುದು. ಆದರೆ, ಕೊಹ್ಲಿ ಈಗ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ವಾರ್ಷಿಕ ಟೆಸ್ಟ್ ತಂಡ ಹಾಗೂ ಈಗ ಏಕದಿನ ಅಂತಾರಾಷ್ಟ್ರೀಯ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಕೊಹ್ಲಿ ಅವರು 2016ರಲ್ಲಿ 10ಏಕದಿನ ಪಂದ್ಯಗಳಿಂದ 4 ಶತಕಗಳನ್ನು ಬಾರಿಸಿದ್ದಲ್ಲದೆ 92.37ರನ್ ಸರಾಸರಿಯಂತೆ ರನ್ ಗಳಿಸಿದ್ದಾರೆ. ಏಕದಿನ ತಂಡದಲ್ಲಿ ಐವರು ಆಸ್ಟ್ರೇಲಿಯನ್ನರಿದ್ದಾರೆ.

Virat Kohli named ODI skipper of Cricket Australia's Team of the year; Bumrah also in the list

ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ತಂಡ ಹೀಗಿದೆ:
1. ವಿರಾಟ್ ಕೊಹ್ಲಿ (ನಾಯಕ)
2. ಸ್ಟೀವ್ ಸ್ಮಿತ್
3. ಡೇವಿಡ್ ವಾರ್ನರ್
4. ಮಿಚೆಲ್ ಮಾರ್ಷ್
5. ಜಾನ್ ಹೇಸ್ಟಿಂಗ್
6. ಮಿಚೆಲ್ ಸ್ಟಾರ್ಕ್
7. ಕ್ವಿಂಟಾನ್ ಡಿಕಾಕ್ (ವಿಕೆಟ್ ಕೀಪರ್)
8. ಜೋಸ್ ಬಟ್ಲರ್
9. ಇಮ್ರಾನ್ ತಾಹೀರ್
10. ಜಸ್ಪ್ರೀತ್ ಬೂಮ್ರಾ
11. ಬಾಬರ್ ಅಜಮ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's Test skipper and batting masterclass Virat Kohli has been named the captain of Cricket Australia's (CA) One-Day International (ODI) Team of the Year.
Please Wait while comments are loading...