ಕಾಲ್ಚೆಳಕ ತೋರಲು ರೆಡಿಯಾದ ಕೊಹ್ಲಿ-ಧೋನಿ ಟೀಂ

Posted By:
Subscribe to Oneindia Kannada

ಮುಂಬೈ, ಜೂನ್ 03: ಐಪಿಎಲ್ ನಲ್ಲಿ ಗಳಿಸಿದ ಬಹುತೇಕ ದುಡ್ಡನ್ನು ದಾನ ಮಾಡಿರುವ ಕ್ರಿಕೆಟ್ ಕಲಿ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ಚಾರಿಟಿ ಮ್ಯಾಚ್ ಆಡಲು ತಯಾರಿ ನಡೆಸಿದ್ದಾರೆ. ಕೊಹ್ಲಿ-ಧೋನಿ ಒಳಗೊಂಡ ಕ್ರಿಕೆಟ್ ತಂಡ ಹಾಗೂ ಬಾಲಿವುಡ್ ತಾರೆಗಳ ತಂಡದ ನಡುವೆ ಫುಟ್ಬಾಲ್ ಪಂದ್ಯಕ್ಕೆ ಸಿದ್ಧತೆ ನಡೆಸಿದೆ.

ವಿರಾಟ್ ಕೊಹ್ಲಿ ಫೌಂಡೇಶನ್ ಹಾಗೂ ಅಭಿಷೇಕ್ ಬಚ್ಚನ್‌ ಅವರ ಪ್ಲೇಯಿಂಗ್ ಫಾರ್ ಹ್ಯೂಮಾನಿಟಿ ಸಂಸ್ಥೆಯ ಜೊತೆಗೂಡಿ ಸಹಾಯಾರ್ಥ ಫುಟ್ಬಾಲ್ ಪಂದ್ಯವನ್ನು ಮುಂಬೈನಲ್ಲಿ ಆಯೋಜಿಸಿದೆ. [ಐಪಿಎಲ್ 2016ರಲ್ಲಿ ವಿರಾಟ್ ಕೊಹ್ಲಿ ಸಾಧನೆ, ದಾಖಲೆಗಳು]

ಈ ಪಂದ್ಯದಲ್ಲಿ ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ, ಕೊಹ್ಲಿ ಹಾಗೂ ರಣಬೀರ್ ಕಪೂರ್‌, ಆದಿತ್ಯರಾಯ್ ಕಪೂರ್ ಮುಂತಾದವರು ಆಡಲಿದ್ದಾರೆ.

Kohli-Dhoni to play football against Bollywood actors: Will Team India continue their winning spree?

'ಸೆಲೆಬ್ರಿಟಿ ಕ್ಲಾಸಿಕೊ 2016' ಹೆಸರಿನ ಸಹಾಯಾರ್ಥ ಫುತ್ಬಾಲ್ ಪಂದ್ಯ ಪಂದ್ಯ ಶನಿವಾರ(ಜೂ.4) ಅಂಧೇರಿಯ ಸ್ಪೋರ್ಟ್ಸ್ ಸಂಕೀರ್ಣದ ಮುಂಬೈ ಫುಟ್ಬಾಲ್ ಅರೆನಾದಲ್ಲಿ ನಡೆಯಲಿದೆ. ಫೌಂಡೇಶನ್‌ನ ಚಾರಿಟೇಬಲ್‌ಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಪಂದ್ಯವನ್ನು ಆಯೋಜಿಸಲಾಗಿದೆ. [ಹೀರೋಸ್ ತಂಡಕ್ಕೆ ಹೀರೋ ಆದ ಎಂಎಸ್ ಧೋನಿ]

ವಿರಾಟ್ ಕೊಹ್ಲಿ ಆಲ್ ಹಾರ್ಟ್ ಫುಟ್ಬಾಲ್ ಕ್ಲಬ್ ನೇತೃತ್ವವನ್ನು ವಹಿಸಿಕೊಂಡಿದ್ದರೆ, ಬಚ್ಚನ್ ಆಲ್ ಸ್ಟಾರ್ಸ್‌ ಫುಟ್ಬಾಲ್ ಕ್ಲಬ್‌ನ ನಾಯಕತ್ವವನ್ನು ವಹಿಸಲಿದ್ದಾರೆ.

ಸಹಾಯಾರ್ಥ ಪಂದ್ಯದಲ್ಲಿ ಕೊಹ್ಲಿ ಹಾಗೂ ಧೋನಿ ಅವರಲ್ಲದೆ ದೇಶದ ಅಗ್ರ ಕ್ರಿಕೆಟಿಗರಾದ ಜಹೀರ್ ಖಾನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಆರ್.ಅಶ್ವಿನ್ ಹಾಗೂ ಅಜಿಂಕ್ಯ ರಹಾನೆ ಆಡಲಿದ್ದಾರೆ.

ಅಭಿಷೇಕ್ ಬಚ್ಚನ್‌ರಲ್ಲದೆ ರಣಬೀರ್, ಅರ್ಜುನ್ ಕಪೂರ್, ಆದಿತ್ಯ ರಾಯ್ ಕಪೂರ್ ಹಾಗೂ ನಿರ್ದೇಶಕ ಶೂಜಿತ್ ಸಿರ್ಕಾರ್ ಭಾಗವಹಿಸಲಿದ್ದಾರೆ. [ಕ್ರಿಕೆಟ್ ಪ್ರಶಸ್ತಿ : ಕೊಹ್ಲಿ, ಅಶ್ವಿನ್ ಶ್ರೇಷ್ಠ ಆಟಗಾರರು]

ಆಲ್ ಸ್ಟಾರ್ ಫುಟ್ಬಾಲ್ ತಂಡ:
ಅಭಿಶೇಕ್ ಬಚ್ಚನ್, ರಣಬೀರ್ ಕಪೂರ್, ಸಿದ್ದಾರ್ಥ್ ಮಲ್ಹೋತ್ರಾ, ಅರ್ಜುನ್ ಕಪೂರ್, ಡಿನೋ ಮೊರಿಯಾ, ರಾಜ್ ಕುಂದ್ರಾ, ಶಬೀರ್ ಅಹ್ಲುವಾಲಿಯಾ, ಕರಣ್ ವಾಹಿ, ರೋಹನ್ ಶ್ರೇಷ್ಠ, ವಿವಿಯನ್ ಡ್ಸೆನಾ, ನಿಶಾ ಮೆಹ್ರಾ ಮುಂತಾದವರು.

ಆಲ್ ಹಾರ್ಟ್ಸ್ ಫುಟ್ಬಾಲ್ ಕ್ಲಬ್: ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಜಹೀರ್ ಖಾನ್, ವರುಣ್ ಅರೋನ್, ಇಶಾಂತ್ ಶರ್ಮ, ಹಾರ್ದಿ ಪಾಂದ್ಯ ಮುಂತಾದವರು.

ಯಾವಾಗ?: ಶನಿವಾರ 9 PM
ಎಲ್ಲಿ?: ಅಂಧೇತಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್, ಮುಂಬೈ
ಎಲ್ಲಿ ಪ್ರಸಾರ : ಸ್ಟಾರ್ ಸ್ಫೋರ್ಟ್ಸ್ 1, ಎಚ್ ಡಿ 1 ಹಾಗೂ ಹಾಟ್ ಸ್ಟಾರ್

(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After entertaining billions of cricket fans with their cricketing skills in the recently Indian Premier League (IPL), Indian cricket team stars are all set to lock horns with Bollywood celebrities and this time on a football field.
Please Wait while comments are loading...