ಟೆಸ್ಟ್ : ಅಜೇಯವಾಗಿ ಉಳಿದು ಕೊಹ್ಲಿ ಪಡೆ ದಾಖಲೆ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 20: ನಾಯಕ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಟೀಂ ಇಂಡಿಯಾ ಐದು ಟೆಸ್ಟ್ ಸರಣಿ ಗೆದ್ದಿರುವುದಲ್ಲದೆ ಹೊಸ ದಾಖಲೆಯನ್ನು ಬರೆದಿದೆ. ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯನ್ನು ಭಾರತ 0-4 ಅಂತರದಿಂದ ಗೆಲುವು ಸಾಧಿಸಿದೆ.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಹಾಗೂ 75ರನ್ ಗಳಿಂದ ಸೋಲಿಸಿ ಭರ್ಜರಿ ಜಯ ದಾಖಲಿಸಿತು. ಈ ಜಯದ ಮೂಲಕ ಟೀಂ ಇಂಡಿಯಾ ಯಶಸ್ವಿಯಾಗಿ 18 ಪಂದ್ಯಗಳಲ್ಲಿ ಗೆಲುವು ಕಂಡ ದಾಖಲೆ ಬರೆದಿದೆ. ಈ ಹಿಂದೆ 1985 ರಿಂದ 1987ರ ತನಕ 17 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. (4 ಗೆಲುವು, 12 ಡ್ರಾ, 1 ಟೈ)

ಕೊಹ್ಲಿ ನಾಯಕತ್ವದಲ್ಲಿ 18 ಟೆಸ್ಟ್ ಗೆಲುವು ಸಾಧಿಸಲಾಗಿದ್ದು, ಫಲಿತಾಂಶ ಹೀಗಿದೆ: 14 ಗೆಲುವು, 4 ಡ್ರಾ (ಆಗಸ್ಟ್ 2015ರಿಂದ ಡಿಸೆಂಬರ್ 2016)

Virat Kohli-led India set new Test record with win in Chennai

1. vs ಶ್ರೀಲಂಕಾ 278ರನ್ ಗಳಿಂದ ಗೆಲುವು (ಆಗಸ್ಟ್ 2015), ಕೊಲಂಬೋ

2. vs ಶ್ರೀಲಂಕಾ 117ರನ್ ಗಳಿಂದ ಗೆಲುವು (ಆಗಸ್ಟ್ 2015), ಕೊಲಂಬೋ

3. vs ದಕ್ಷಿಣ ಆಫ್ರಿಕಾ 108ರನ್ ಗಳಿಂದ ಗೆಲುವು (ನವೆಂಬರ್ 2015), ಮೊಹಾಲಿ


4. vs ದಕ್ಷಿಣ ಆಫ್ರಿಕಾ ಡ್ರಾ (ನವೆಂಬರ್ 2015), ಬೆಂಗಳೂರು

5. vs ದಕ್ಷಿಣ ಆಫ್ರಿಕಾ 124ರನ್ ಗಳಿಂದ ಗೆಲುವು (ನವೆಂಬರ್ 2015), ನಾಗ್ಪುರ್


6. vs ದಕ್ಷಿಣ ಆಫ್ರಿಕಾ 337ರನ್ ಗಳಿಂದ ಗೆಲುವು (ಡಿಸೆಂಬರ್ 2015), ನವದೆಹಲಿ


7. ವೆಸ್ಟ್ ಇಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 92ರನ್ ಗಳಿಂದ ಜಯ (ಜುಲೈ 2016)- ನಾರ್ಥ್ ಸೌಂಡ್

8. ವೆಸ್ಟ್ ಇಂಡೀಸ್ ವಿರುದ್ಧ ಡ್ರಾ (ಜುಲೈ 2016)- ಕಿಂಗ್ಸ್ ಟನ್

9. ವೆಸ್ಟ್ ಇಂಡೀಸ್ ವಿರುದ್ಧ 237 ರನ್ ಜಯ (ಆಗಸ್ಟ್ 2016)- ಗ್ರಾಸ್ ಇಸ್ಲೆಟ್

10. ವೆಸ್ಟ್ ಇಂಡೀಸ್ ವಿರುದ್ಧ ಡ್ರಾ (ಆಗಸ್ಟ್ 2016)- ಪೋರ್ಟ್ ಆಫ್ ಸ್ಪೇನ್

11. ನ್ಯೂಜಿಲೆಂಡ್ ವಿರುದ್ಧ 197ರನ್ ಗಳ ಜಯ (ಸೆಪ್ಟೆಂಬರ್ 2016) -ಕಾನ್ಪುರ
12. ನ್ಯೂಜಿಲೆಂಡ್ ವಿರುದ್ಧ 178ರನ್ ಗಳ ಜಯ (ಸೆಪ್ಟೆಂಬರ್ 2016) -ಕೋಲ್ಕತ್ತಾ
13. ನ್ಯೂಜಿಲೆಂಡ್ ವಿರುದ್ಧ 321 ರನ್ ಗಳ ಜಯ (ಅಕ್ಟೋಬರ್ 2016) -ಇಂದೋರ್
14. ಇಂಗ್ಲೆಂಡ್ ವಿರುದ್ಧ ಡ್ರಾ(ನವೆಂಬರ್ 2016)- ರಾಜ್ ಕೋಟ್
15. ಇಂಗ್ಲೆಂಡ್ ವಿರುದ್ಧ 246ರನ್ ಗಳ ಜಯ (ನವೆಂಬರ್ 2016)- ವಿಶಾಖಪಟ್ಟಣಂ

16. ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಜಯ (ನವೆಂಬರ್ 2016)- ಮೊಹಾಲಿ

17. ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಹಾಗೂ 36 ರನ್ ಗಳ ಜಯ (ಡಿಸೆಂಬರ್ 2016)- ಮುಂಬೈ
18. ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಹಾಗೂ 75 ರನ್ ಗಳ ಜಯ (ಡಿಸೆಂಬರ್ 2016)- ಚೆನ್ನೈ

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Captain Virat Kohli took India to a new Test record as the team completed a 4-0 series victory against England here today (December 20).
Please Wait while comments are loading...