ವಾಸಿಂ ಅಕ್ರಂ ಆಯ್ಕೆಯ ಐಪಿಎಲ್ XIಗೆ ಕೊಹ್ಲಿ ಕ್ಯಾಪ್ಟನ್

Posted By:
Subscribe to Oneindia Kannada

ಬೆಂಗಳೂರು, ಮೇ 29: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ವಾಸಿಂ ಅಕ್ರಂ ಅವರು ತಮ್ಮ ಕನಸಿನ ತಂಡದ ನಾಯಕರಾಗಿ ಆಯ್ಕೆ ಮಾಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಐಪಿಎಲ್ 9ರಲ್ಲಿ ಹೆಚ್ಚು ಸದ್ದು ಮಾಡಿದ ನಾಯಕರ ಪೈಕಿ ವಿರಾಟ್ ಕೊಹ್ಲಿ ಹಾಗೂ ಡೇವಿಡ್ ವಾರ್ನರ್ ಪ್ರಮುಖರಾಗಿದ್ದು, ಇಬ್ಬರು ಕೂಡಾ ತಮ್ಮ ತಂಡವನ್ನು ಫೈನಲ್ ಹಂತಕ್ಕೆ ಕೊಂಡೊಯ್ದಿದ್ದಾರೆ. ಐಪಿಎಲ್ 2016ರ ಅಂತಿಮ ಹಣಾಹಣಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 29ರ ಸಂಜೆ ನಡೆಯಲಿದೆ.

ಉಳಿದಂತೆ ಬೌಲರ್ ಗಳ ಪೈಕಿ ಆರ್ ಸಿಬಿಯ ಯಜುವೇಂದ್ರ ಚಾಹಲ್ ಅವರು ತಮ್ಮ ಲೆಗ್ ಸ್ಪಿನ್ ಮೂಲಕ ಟೀಂ ಇಂಡಿಯಾಕ್ಕೂ ಆಯ್ಕೆಯಾಗಿದ್ದಾರೆ. ಕೆಕೆಆರ್ ನ ಯೂಸುಫ್ ಪಠಾಣ್ ಕೂಡಾ ಲಯಕ್ಕೆ ಮರಳಿದ್ದಾರೆ. ಆದರೆ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುವಲ್ಲಿ ಹಾಗೂ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ಧೋನಿ ವಿಫಲರಾಗಿದ್ದು, ಅಚ್ಚರಿ ತಂದಿದೆ ಎಂದು ವಾಸಿಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

Virat Kohli pips MS Dhoni to lead Wasim Akram's IPL XI

ಇಂಡಿಯಾ ಟುಡೇಯಲ್ಲಿ ರಾಜ್ ದೀಪ್ ಸರ್ದೇಸಾಯಿ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ವಾಸಿಂ ಅಕ್ರಂ ಆಯ್ಕೆ ಮಾಡಿದ ತಂಡ ಇಂತಿದೆ.

* ರೋಹಿತ್ ಶರ್ಮ (ಮುಂಬೈ ಇಂಡಿಯನ್ಸ್)
* ಡೇವಿಡ್ ವಾರ್ನರ್ (ಸನ್ ರೈಸರ್ಸ್ ಹೈದರಾಬಾದ್)
* ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) [ನಾಯಕ]
* ಎಬಿ ಡಿ ವಿಲಿಯರ್ಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
* ಯೂಸುಫ್ ಪಠಾಣ್ (ಕೋಲ್ಕತ್ತಾ ನೈಟ್ ರೈಡರ್ಸ್)
* ಆಂಡ್ರೆ ರಸೆಲ್ (ಕೋಲ್ಕತ್ತಾ ನೈಟ್ ರೈಡರ್ಸ್)
* ಎಂಎಸ್ ಧೋನಿ (ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ) [ವಿಕೆಟ್ ಕೀಪರ್]
* ಯಜುವೇಂದ್ರ ಚಾಹಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
* ಭುವನೇಶ್ವರ್ ಕುಮಾರ್ (ಸನ್ ರೈಸರ್ಸ್ ಹೈದರಾಬಾದ್)
* ಧವಳ್ ಕುಲಕರ್ಣಿ (ಗುಜರಾತ್ ಲಯನ್ಸ್)
* ಸುನಿಲ್ ನಾರಾಯಣ್ (ಕೋಲ್ಕತ್ತಾ ನೈಟ್ ರೈಡರ್ಸ್)

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Pakistan captain Wasim Akram chose Virat Kohli as the skipper of his Indian Premier League XI. Find out who else made the cut for Akram's dream XI in a cricket show hosted by Rajdeep Sardesai for India Today.
Please Wait while comments are loading...