ಚಿತ್ರಗಳಲ್ಲಿ: ಕ್ರೇಜಿ ಬಾಯ್ ಕೊಹ್ಲಿ ಆಡಿ ಕಾರಿನ ಸವಾರಿ

Posted By:
Subscribe to Oneindia Kannada

ಬೆಂಗಳೂರು, ಮೇ 20: ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಹೊಸ ಸ್ಪೋರ್ಟ್ಸ್ ಕಾರು ಆರ್8 ವಿ10 ಪ್ಲಸ್ ಲೋಕಾರ್ಪಣೆ ಮಾಡಿ ಥ್ರಿಲ್ ಆಗಿ ನಲಿದಾಡಿದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಬೆಂಗಳೂರಿನ ಹೊರ ವಲಯದ ಡೆಂಕಣಿಕೋಟೆ ತಾಲೂಕಿನ ಬೆಳಗೊಂಡನಪಲ್ಲಿಯ ಬಳಿ ಇರುವ ತನೇಜಾ ಏರೋಸ್ಪೇಸ್ ಹಾಗೂ ಏವಿಯೇಷನ್ ಲಿಮಿಟೆಡ್ ನಲ್ಲಿ ಮುಂದಿನ ಪೀಳಿಗೆಯ ಮೆಚ್ಚುಗೆಯ ಆಡಿ ಕಾರು ಬಿಡುಗಡೆ ಮಾಡಲಾಯಿತು.

'ಆಡಿ ಕಾರುಗಳು ನನಗೆ ತುಂಬಾ ಇಷ್ಟ ಆಡಿ ಓಡಿಸುವುದೆಂದರೆ ನನಗೆ ಪಂಚಪ್ರಾಣ. ಈಗಾಗಲೇ ನನ್ನ ಬಳಿ ಆಡಿಯ ಬೇರೆ ಬೇರೆ ಕಾರುಗಳಿವೆ. ಈಗ ಹೊಸ ಮಾಡೆಲ್ ಕಾರು ಬುಕ್ ಮಾಡಬೇಕೆನ್ನಿಸುತ್ತಿದೆ' ಎಂದರು.[ದೆಹಲಿ ರೋಡಿನಲ್ಲಿ ವಿರಾಟ್ ಕೊಹ್ಲಿ ಜಾಲಿ ರೈಡ್]

Virat Kohli launches Audi R8 V10 Plus

ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿ.ನ ಟ್ರ್ಯಾಕ್ ಮೇಲೆ ಕೊಹ್ಲಿ ಅವರು ಆಡಿ ಕಾರು ಹತ್ತಿ ನಾಲ್ಕಾರು ಸುತ್ತು ಚಲಾಯಿಸಿದರು. ಕಾರಿನಲ್ಲಿರುವ ತಂತ್ರಜ್ಞಾನ, ಒಳಾಂಗಣ ವಿನ್ಯಾಸ, ವಿಶೇಷತೆ ನನ್ನನ್ನು ಆಕರ್ಷಿಸುವಂತೆ ಮಾಡಿದೆ.

ಆರ್8 ವಿ10 ಪ್ಲಸ್​ನಲ್ಲಿ ಸಾಕಷ್ಟು ಡಿಜಿಟಲ್ ತಂತ್ರಜ್ಞಾನದಿಂದ ಕೂಡಿದ ಅತ್ಯುನ್ನತ ಕಾರು ಎಂದು ಕೊಹ್ಲಿ ಹೇಳಿದರು.
ಕರ್ನಾಟಕದ ಶೋ ರೂಂಗಳಲ್ಲಿ ಲಭ್ಯ ಆರ್ 8 ಆವೃತ್ತಿಯ ಆಡಿ ಕಾರುಗಳು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಆಡಿ ಇಂಡಿಯಾದ ಮುಖ್ಯಸ್ಥ ಜಾಯ್ ಕಿಂಗ್ ಘೋಷಿಸಿದರು.

ಚಿತ್ರಗಳಲ್ಲಿ: ಕ್ರೇಜಿ ಬಾಯ್ ಕೊಹ್ಲಿ ಆಡಿ ಕಾರಿನ ಸವಾರಿ

ಚಿತ್ರಗಳಲ್ಲಿ: ಕ್ರೇಜಿ ಬಾಯ್ ಕೊಹ್ಲಿ ಆಡಿ ಕಾರಿನ ಸವಾರಿ

-
-
-
-
-
-
-
-
-
-
-

3.2 ಸೆಕೆಂಡ್​ಗಳಲ್ಲಿ 100 ಕಿಲೋ ಮೀಟರ್ ವೇಗ ಪಡೆಯುವ ಸಾಮರ್ಥ್ಯ ಹೊಂದಿರುವ ಆಡಿ ಕಾರು, ಗಂಟೆಗೆ 330 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಈ ಕಾರಿನಲ್ಲಿದೆ. ಕರ್ನಾಟಕದ ಶೋರೂಂಗಳಲ್ಲಿ ಲಭ್ಯವಿರುವ ಈ ಕಾರಿನ ಬೆಲೆ 2.60 ಕೋಟಿ ರು.

ಐಪಿಎಲ್ 2015ರಲ್ಲಿ ಲ್ಯಾಂಬ್ರೋಗಿನಿ ಗಲಾಟ್ ಏರಿದ್ದ ಕೊಹ್ಲಿ ಅವರು ದೆಹಲಿ ರಸ್ತೆಯಲ್ಲಿ ಸುತ್ತಾಡಿ ಸುದ್ದಿ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricketer Virat Kohli has launched German auto major Audi most powerful car in India, the Audi R8 V10 Plus. The company specially flew in its brand ambassador and star cricketer Virat Kohli to unveil the car with its India head Joe King on the airstrip of Tanjea Aerospace and Aviation Limited
Please Wait while comments are loading...