ಬುಡಾಪೆಸ್ಟ್ ಗೆ ತೆರಳಿದ ಅನುಷ್ಕಾ ಬಿಡೋಕೆ ಬಂದ ಕೊಹ್ಲಿ!

Posted By:
Subscribe to Oneindia Kannada

ಮುಂಬೈ, ಜೂನ್ 03: ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಬೆಂಗಳೂರು ಮೂಲದ ಅನುಷ್ಕಾ ಶರ್ಮ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಇರುವ ಸ್ನೇಹ-ಪ್ರೇಮ ಸಂಬಂಧದ ಬಗ್ಗೆ ಸಾಕಷ್ಟು ಕಥೆಗಳಿವೆ. ಸದ್ಯಕ್ಕೆ ಅನುಷ್ಕಾ ಜತೆ ಕೊಹ್ಲಿ ಚೆನ್ನಾಗಿದ್ದಾರೆ, ಚೆನ್ನಾಗಿರಲಿ ಎಂಬುದು ಅಭಿಮಾನಿಗಳ ಹಾರೈಕೆ.

ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ನಡುವೆ ವಿರಸ ಮೂಡಿದೆ ಎಂದು ಎಲ್ಲರೂ ತಿಳಿದುಕೊಳ್ಳುವಷ್ಟರಲ್ಲೇ ಕಳೆದ ರಾತ್ರಿ ಈ ಜೋಡಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ. [ಕಾಲ್ಚೆಳಕ ತೋರಲು ರೆಡಿಯಾದ ಕೊಹ್ಲಿ-ಧೋನಿ ಟೀಂ]

ಸಲ್ಮಾನ್ ಖಾನ್ ಅಭಿನಯನದ ಸುಲ್ತಾನ್ ಚಿತ್ರದ ನಾಯಕಿಯಾಗಿರುವ ಅನುಷ್ಕಾ ಅವರು ಶೂಟಿಂಗ್ ಗಾಗಿ ಬುಡಾಪೆಸ್ಟ್ ಗೆ ತೆರಳುತ್ತಿದ್ದರು. ಅನುಷ್ಕಾರನ್ನು ವಿಮಾನ ನಿಲ್ದಾಣಕ್ಕೆ ಬಿಡೋಕೆ ಕೊಹ್ಲಿ ಬಂದಿದ್ದರು.

Virat Kohli kisses and hugs Anushka Sharma at the airport

ಕೊಹ್ಲಿ ಕಾರು ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ, ಅಲ್ಲೇ ಕಾಯುತ್ತಾ ಕುಳಿತ್ತಿದ್ದ ಫೋಟೋ ಜರ್ನಲಿಸ್ಟ್ ಗಳು ಕಾರಿನ ಸುತ್ತಾ ಮುಗಿ ಬಿದ್ದರು. ಅನುಷ್ಕಾರಿಗೆ ಮುತ್ತುಕೊಟ್ಟು, ಅಪ್ಪಿಕೊಂಡು ಶುಭ ಪ್ರಯಾಣ ಕೋರಿದ ಕೊಹ್ಲಿ ಕಾರಿನಲ್ಲೇ ಕುಳಿತರು. ನಗುಮೊಗ ಹೊತ್ತ ಅನುಷ್ಕಾ, ವಿಮಾನ ನಿಲ್ದಾಣದತ್ತ ತೆರಳಿದರು.

ಸ್ಮೈಲ್ ಫೌಂಡೇಷನ್ ಜೊತೆ ಸೇರಿ ಚಾರಿಟಿ ಫುಟ್ಬಾಲ್ ಮ್ಯಾಚ್ ಆಡಲಿರುವ ಕೊಹ್ಲಿ ಅವರನ್ನು ನಾಳೆ ಅಂಧೇರಿಯಲ್ಲಿ ಅಭಿಮಾನಿಗಳು ಕಾಣಬಹುದು. ಸದ್ಯಕ್ಕೆ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಭೇಟಿ ಮಾಡಿದ ವಿಡಿಯೋ ನೋಡಿ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricketer Virat Kohli kisses and hugs bollywood actress Anushka Sharma at Mumbai International airport. Anushka Sharma had to leave for Budapest for Sultan’ schedule with Salman Khan
Please Wait while comments are loading...