ಡಬ್ಬಲ್ ಸೆಂಚುರಿ ಬಾರಿಸಿ ಬ್ರಾಡ್ಮನ್ ಸಮಕ್ಕೆ ನಿಂತ ಕೊಹ್ಲಿ

Posted By:
Subscribe to Oneindia Kannada

ಇಂದೋರ್, ಅಕ್ಟೋಬರ್ 10: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇಂದೋರ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ದ್ವಿಶತಕ ಬಾರಿಸುವ ಮೂಲಕ ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಟೆಸ್ಟ್ ತಂಡದ ನಾಯಕರಾಗಿ ಕೊಹ್ಲಿ ಮಾಡಿರುವ ಸಾಧನೆ ಈಗ ಡಾನ್ ಬ್ರಾಡ್ಮನ್ ರಂಥ ದಿಗ್ಗಜರ ಸಾಲಿಗೆ ತಂದು ನಿಲ್ಲಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್ ನೋಡಿ

ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರದಂದು ಕೊಹ್ಲಿ ಅವರು ತಮ್ಮ ವೃತ್ತಿ ಬದುಕಿನ ಗರಿಷ್ಠ ಮೊತ್ತ ದಾಖಲಿಸಿದರು. ಹೋಳ್ಕರ್ ಮೈದಾನದಲ್ಲಿ ಕೊಹ್ಲಿ ಅವರು ವೃತ್ತಿ ಬದುಕಿನ ಎರಡನೇ ದ್ವಿಶತಕ ಗಳಿಸಿದ್ದು, ಇದು ಭಾರತ ತಂಡದ ನಾಯಕನೊಬ್ಬನ ಮಹತ್ಸಾಧನೆಯಾಗಿದೆ.

ಇದೇ ವರ್ಷ ಜುಲೈ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ಗಳಿಸಿದ್ದ 27 ವರ್ಷ ವಯಸ್ಸಿನ ಕೊಹ್ಲಿ ಅವರು ಈಗ ಒಂದೇ ವರ್ಷದಲ್ಲಿ ಎರಡು ಅಥವಾ ಹೆಚ್ಚು ದ್ವಿಶತಕ ಬಾರಿಸಿದ ಟೆಸ್ಟ್ ನಾಯಕರ ಸಾಲಿಗೆ ಸೇರಿದ್ದಾರೆ.

ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ ಅವರು ಈ ಸಾಧನೆ ಮಾಡಿದ ಪ್ರಪ್ರಥಮ ಟೆಸ್ಟ್ ನಾಯಕರಾಗಿದ್ದಾರೆ. ಮೈಕಲ್ ಕ್ಲಾರ್ಕ್ (4 ಬಾರಿ), ಗ್ರೆಗ್ ಚಾಪೆಲ್, ಬ್ರಿಯಾನ್ ಲಾರಾ ಹಾಗೂ ಬ್ರೆಂಡನ್ ಮೆಕಲಮ್ ಅವರು ತಲಾ 4 ದ್ವಿಶತಕಗಳೊಂದಿಗೆ ಪಟ್ಟಿಯಲ್ಲಿದ್ದಾರೆ.

ಒಟ್ಟಾರೆ ಕೊಹ್ಲಿ ಅವರು 48 ಟೆಸ್ಟ್ ಪಂದ್ಯಗಳಲ್ಲಿ 13 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. 2011ರಲ್ಲಿ ವೃತ್ತಿ ಬದುಕು ಆರಂಭಿಸಿದ ಕೊಹ್ಲಿ ಅವರು 2014ರಲ್ಲಿ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದರು. ಅಂಕಿ ಅಂಶಗಳ ಕೃಪೆ: ಎಚ್ ಆರ್ ಗೋಪಾಲ ಕೃಷ್ಣ, ಬೆಂಗಳೂರು

ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ)

ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ)

ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ)- 4- 2012- ಅಜೇಯ 329 ಹಾಗೂ 210 vs ಭಾರತ, ಅಜೇಯ 259 vs ದಕ್ಷಿಣ ಆಫ್ರಿಕಾ, 230 vs ದಕ್ಷಿಣ ಆಫ್ರಿಕಾ

ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ)

ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ)

ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ) 1937- 270 ಹಾಗೂ 212 vs ಇಂಗ್ಲೆಂಡ್

ಗ್ರೆಗ್ ಚಾಪೆಲ್ (ಆಸ್ಟ್ರೇಲಿಯಾ)

ಗ್ರೆಗ್ ಚಾಪೆಲ್ (ಆಸ್ಟ್ರೇಲಿಯಾ)

ಗ್ರೆಗ್ ಚಾಪೆಲ್ (ಆಸ್ಟ್ರೇಲಿಯಾ) -1981 - 204 vs ಭಾರತ, 201 vs ಪಾಕಿಸ್ತಾನ

ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)

ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)

ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)-2003- 209 vs ಶ್ರೀಲಂಕಾ, 202 vs ದಕ್ಷಿಣ ಆಫ್ರಿಕಾ

ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)

ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)

ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್) -2014- 224 vs ಭಾರತ, 302 vs ಭಾರತ.

ವಿರಾಟ್ ಕೊಹ್ಲಿ (ಭಾರತ)

ವಿರಾಟ್ ಕೊಹ್ಲಿ (ಭಾರತ)

ವಿರಾಟ್ ಕೊಹ್ಲಿ (ಭಾರತ) -2016- 200 vs ಭಾರತ, 211 vs ನ್ಯೂಜಿಲೆಂಡ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's star batsman Virat Kohli, with his double century against New Zealand, has joined an elite company of Test captains that includes the legendary Don Bradman.
Please Wait while comments are loading...