ಕೊಹ್ಲಿ ನಾಯಕತ್ವದಲ್ಲಿ ಧೋನಿ ಆಡಿದರೆ ತಪ್ಪೇನಿಲ್ಲ: ಶಾಸ್ತ್ರಿ

Posted By:
Subscribe to Oneindia Kannada

ಬೆಂಗಳೂರು, ಮೇ 31: ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರು ಈಗ ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲಿ ನಾಯಕರಾಗಲು ಕಾಲ ಕೂಡಿ ಬಂದಿದೆ. ಧೋನಿ ಅವರು ಕೊಹ್ಲಿ ನಾಯಕತ್ವದ ಅಡಿಯಲ್ಲಿ ಆಟಗಾರನಾಗಿ ಆಡಿದರೆ ತಪ್ಪೇನಿಲ್ಲ ಎಂದು ಮಾಜಿ ಕ್ರಿಕೆಟರ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.[2016ರಲ್ಲಿ ವಿರಾಟ್ ಕೊಹ್ಲಿ ಸಾಧನೆ, ದಾಖಲೆಗಳು]

ನಾನೇನಾದರು ಆಯ್ಕೆ ಸಮಿತಿಯ ಮುಖ್ಯಸ್ಥನಾದರೆ ತಂಡದ ಭವಿಷ್ಯದ ದೃಷ್ಟಿಯಿಂದ ತೀರ್ಮಾನ ಕೈಗೊಳ್ಳುತ್ತೇನೆ. 2019ರ ಏಕದಿನ ವಿಶ್ವಕಪ್​ಗೆ ಭದ್ರವಾದ ತಂಡ ಕಟ್ಟುವ ಅಗತ್ಯತೆ ಇದೆ. ಅದಕ್ಕೆ ಪೂರ್ವಭಾವಿಯಾಗಿ ಈಗಿನಿಂದಲೇ ತಂಡದಲ್ಲಿ ಬದಲಾವಣೆ ಅಗತ್ಯವಾಗಿದ್ದು, ವಿರಾಟ್​ಗೆ ಮೂರು ಮಾದರಿಗಳಲ್ಲಿ ನಾಯಕನ ಜವಾಬ್ದಾರಿ ನೀಡುವುದು ಸೂಕ್ತ ಎಂದು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ರವಿಶಾಸ್ತ್ರಿ ಹೇಳಿದ್ದಾರೆ.[ಐಪಿಎಲ್ 9: ಯಾರಿಗೆ ಯಾವ ಪ್ರಶಸ್ತಿ, ಕಿರೀಟ, ಪುರಸ್ಕಾರ]

Kohli is ready to captain in all formats, Dhoni can contribute as a player: Ravi Shastri

ಟಿ20 ಹಾಗೂ ಏಕದಿನ ತಂಡದ ನಾಯಕರಾಗಿರುವ ಎಂಎಸ್ ಧೋನಿ ಅವರು ತಂಡದಲ್ಲಿ ಆಟಗಾರರಾಗಿ ಮುಂದುವರೆಯಬಹುದು, ಟೀಂ ಇಂಡಿಯಾ ಈಗ ಆಸ್ಟ್ರೇಲಿಯಾ ಮಾದರಿಯಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಬೇಕಿದೆ. ಇದರಿಂದ ಯುವ ಪ್ರತಿಭೆಗಳಿಗೆ ಸ್ಥಾನ ದೊರೆಕಿಸಬಹುದು ಎಂದಿದ್ದಾರೆ.[ಕೊಹ್ಲಿ ನಾಯಕನಾಗಲು ಇದು ಸಕಾಲವಲ್ಲ: ಗವಾಸ್ಕರ್]

ಮಾರ್ಕ್​ಟೇಲರ್ ಅತ್ಯುತ್ತಮ ನಾಯಕರಾಗಿದ್ದರೂ ಸ್ವೀವಾ ಅವರಿಗೆ ನಾಯಕತ್ವ ಪಟ್ಟ ಕಟ್ಟಲಾಯಿತು. ಅದೇ ರೀತಿ ರಿಕಿ ಪಾಂಟಿಂಗ್, ಕ್ಲಾರ್ಕ್ ಅವರು ತಂಡ ಯಶಸ್ಸಿನ ಉತ್ತುಂಗದಲ್ಲಿದ್ದಾಗ ನಾಯಕತ್ವ ತ್ಯಜಿಸಿದರು ಎಂದು ಶಾಸ್ತ್ರಿ ಹೇಳಿದರು. [ಟಿ20 2016: ಶ್ರೇಷ್ಠ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ!](ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Team Director of the Indian cricket team Ravi Shastri on Monday made it clear that had he been the chairman of selectors, he would have thought about making "Virat Kohli the captain in all three formats" and let Mahendra Singh Dhoni "enjoy his game".
Please Wait while comments are loading...