ಕೊಹ್ಲಿ ಆಟವನ್ನು ಕೊಂಡಾಡಿದ ನಾಯಕ ಮಹೇಂದ್ರ ಸಿಂಗ್ ಧೋನಿ.

By: ರಮೇಶ್ ಬಿ
Subscribe to Oneindia Kannada

ಮಿರ್ ಪುರ್ (ಬಾಂಗ್ಲಾದೇಶ). ಮಾರ್ಚ್.03: ದೆಹಲಿ ಬಾಯ್ ಭಾರತ ತಂಡದ ಸ್ಫೋಟಕ ಬಲಗೈ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರೊಬ್ಬ ಅದ್ಭುತ ಆಟಗಾರ ಹೀಗೆಂದು ಭಾರತ ತಂಡದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ವಿರಾಟ್ ಆಟವನ್ನು ಕೊಂಡಾಡಿದ್ದಾರೆ. ಈ ಮೂಲಕ ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಎನ್ನುವ ಕುಹಕಿಗಳಿಗೆ ತಿರುಗೇಟು ನೀಡಿದ್ದಂತಾಗಿದೆ.

ವಿರಾಟ್ ಅವರು ಏಷ್ಯಾ ಕಪ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಅಮೋಘ 49 ರನ್ ಸಿಡಿಸಿ ಮಿಂಚಿದ್ದರು. ಇದೆ ಲಯದಲ್ಲಿಯೇ ಮಂಗಳವಾರ(ಮಾರ್ಚ್ 01) ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೂಡ ಅವರು ಅಜೇಯ 47 ಎಸೆತಗಳಲ್ಲಿ 56 ರನ್ ಗಳಿಸಿ ತಂಡಕ್ಕೆ ಜಯದ ಜೊತೆಗೆ ಫೈನಲ್ ಹಂತ ತಲುಪುವಂತೆ ಮಾಡಿದರು.

Virat Kohli is a 'more matured cricketer', says captain MS Dhoni

ಕೊಹ್ಲಿಗೆ ಯುವರಾಜ್ ಸಿಂಗ್ ಅವರ ಬಿರಿಸಿನ ಆಟದ ಜೊತೆ ಸಿಕ್ಕಿದ್ದು ಉಪಯುಕ್ತವಾಯಿತು ಎಂದು ಧೋನಿ ಹೇಳಿದರು. ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಜಯಗಳಿಸುವುದರ ಮೂಲಕ ಏಷ್ಯಾ ಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲವು ಪಡೆದುಕೊಂಡು ಫೈನಲ್ ಪ್ರವೇಶಿಸಿರುವುದು ತುಂಬ ಸಂತೋಷವಾಗಿದೆ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಹಾಗೂ ಟಿ-20 ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅವರು ಸಮಯಕ್ಕೆ ತಕ್ಕಂತೆ ಆಟವನ್ನು ಆಡುವ ಮನೋಬಲ ಅವರಲ್ಲಿದೆ ಎಂದಿದ್ದಾರೆ.

ಈ ಹಿಂದೆ ನಾಯಕನ ಪಟ್ಟಕ್ಕಾಗಿ ವಿರಾಟ್ ಮತ್ತು ಧೋನಿ ಅವರ ಮಧ್ಯೆ ಆಂತರಿಕ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಎಂಬ ಸುದ್ದಿ ಹರಡಿತ್ತು. ಆದರೆ ಈಗ ಧೋನಿ ಕೋಹ್ಲಿ ಆಟವನ್ನು ಕೊಂಡಾಡಿದ್ದು ಊಹಾಪೋಹಗಳಿಗೆಲ್ಲ ತೆರೆ ಎಳಿದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Be it any format, Virat Kohli is India's best batsman at the moment. Yet again, the Delhi right-hander produced a match-winning innings, this time against Sri Lanka in the Asia Cup Twenty20 match here last night (March 1).
Please Wait while comments are loading...