ವಾಹ್ ! ಕೊಹ್ಲಿ ವಾಹ್, ಯುವಕರ ಪಾಲಿಗೆ ನೀವೇ ಮಾದರಿ

Posted By:
Subscribe to Oneindia Kannada

ಜಮೈಕಾ, ಜುಲೈ 29: ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ವೆಸ್ಟ್ ಇಂಡೀಸ್ ಪ್ರವಾಸದ ನಡುವೆ ಮೆಚ್ಚುಗೆಯ ಕಾರ್ಯವೊಂದನ್ನು ಮಾಡಿದ್ದಾರೆ. ಪಾಕಿಸ್ತಾನ ಅಂಪೈರ್ ಅಲಿಂ ದಾರ್ ಅವರ ಪುತ್ರನಿಗೆ ವಿಡಿಯೋ ಸಂದೇಶ ಕಳಿಸಿ ಸ್ಪೂರ್ತಿ ತುಂಬಿದ್ದಾರೆ.

ಯುವ ಕ್ರಿಕೆಟರ್ ಗಳಿಗೆ ಮಾದರಿಯಾಗು ಕೊಹ್ಲಿ ಹೆಸರನ್ನು ಹೇಳಬೇಕೆ? ಬೇಡವೇ? ಎಂದು ಅಪ್ಪ ಅಮ್ಮ ಚಿಂತಿಸುವ ಕಾಲವೊಂದಿತ್ತು. 'ಉಗ್ರ ಪ್ರತಾಪಿ' ಕೊಹ್ಲಿ ಅವರ ಬಗ್ಗೆ ಇರುವ ಭಾವನೆಯನ್ನೇ ಬದಲಾಯಿಸಬಲ್ಲ ವಿಡಿಯೋ ಸಂದೇಶ ಇಲ್ಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಕೊಹ್ಲಿ ಅವರು ಈಗ ಜಮೈಕಾದಲ್ಲಿ ಜುಲೈ 30 ರಂದು ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಈ ನಡುವೆ ಪಾಕಿಸ್ತಾನದ ಅಂಪೈರ್ ಅಲಿಮ್ ದಾರ್ ಅವರ ಪುತ್ರ ಹಸನ್ ಅವರಿಗೆ ಕ್ರಿಕೆಟ್​ ಬಗ್ಗೆ ಕೆಲವು ಟಿಪ್ಸ್ ನೀಡಿದ್ದಾರೆ. ತಮ್ಮ ಸಹಿ ಇರುವ ಬ್ಯಾಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಅಭಿಮಾನಿಯಾಗಿರುವ ಹಸನ್ ಅವರಿಗೆ ಕೊಹ್ಲಿ ಅವರಿಂದ ಸಲಹೆ ಸಿಕ್ಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸುತ್ತಾಡುತ್ತಿದೆ.

Watch: Virat Kohli's inspiring message to Pakistan umpire Aleem Dar's son

ಈ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್, ಯಶಸ್ಸು ಸಾಧಿಸಲು ಹೆಚ್ಚು ಶ್ರಮ ಮತ್ತು ಅರ್ಪಣಾ ಮನೋಭಾವ ಇರಲಿ. ಇದರಿಂದ ನಿಮ್ಮ ಕ್ರಿಕೆಟ್ ಕೌಶಲ ವೃದ್ಧಿಯಾಗಲಿದೆ ಎಂದಿದ್ದಾರೆ.ಅಷ್ಟೇ ಅಲ್ಲ ಭವಿಷ್ಯದಲ್ಲಿ ಅಲಿಮ್ ಬಾಯ್ ಅಂಪೈರ್ ಮಾಡುವ ಪಂದ್ಯದಲ್ಲಿ ನಿಮ್ಮನ್ನು ಭೇಟಿ ಮಾಡಲು ನಾನು ಕಾತುರನಾಗಿದ್ದೇನೆ ಎಂದು ಹಾರೈಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India skipper Virat Kohli has emerged as an inspiration for young cricketers. His popularity is not just limited to Indians. The aggressive middle-order batsman's cricketing spirit has also found admirers outside India, specially youngsters.
Please Wait while comments are loading...