ಪ್ರೇಗ್ ನಲ್ಲಿ ಇದೇನಿದು ಕೊಹ್ಲಿ ಪಕ್ಕದಲ್ಲಿ ಅನುಷ್ಕಾ ಇಲ್ಲ!

Posted By:
Subscribe to Oneindia Kannada

ಬೆಂಗಳೂರು, ಸೆ.02: ವೆಸ್ಟ್ ಇಂಡೀಸ್ ನಲ್ಲಿ ಟೆಸ್ಟ್ ಸರಣಿ, ಅಮೆರಿಕದಲ್ಲಿ ಟಿ20 ಸರಣಿ ಮುಗಿಸಿಕೊಂಡು ವಿರಾಟ್ ಕೊಹ್ಲಿ ನೇರವಾಗಿ ಜೆಕ್ ರಿಪಬ್ಲಿಕ್ ಗೆ ಹಾರಿದ್ದಾರೆ. ಪ್ರೇಗ್ ನಲ್ಲಿರುವ ತನ್ನ ಪ್ರೇಯಸಿ ಅನುಷ್ಕಾ ಶರ್ಮರನ್ನು ಸಂಧಿಸಲು ಕೊಹ್ಲಿ ಹೋಗಿದ್ದಾರೆ. ಆದರೆ, ಕೊಹ್ಲಿ ಪ್ರೇಗ್ ಗೆ ಹೋಗಿರುವ ವಿಷಯ ತಿಳಿದಿದ್ದು ಒಂದು ಫೋಟೋ ಮೂಲಕ ಅದು ಒಬ್ಬ ಫ್ಯಾನ್ ಜತೆಗೆ ತೆಗೆಸಿಕೊಂಡ ಫೋಟೊ.

ಸೆಲ್ಫಿ ಪ್ರಿಯ ವಿರಾಟ್ ಕೊಹ್ಲಿ ಅವರು ನಟಿ ಅನುಷ್ಕಾ ಶರ್ಮಾ ಜತೆ ಇರುವ ಫೋಟೋ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬೇರೆಯದ್ದೇ ಫೋಟೋ ಕಣ್ಮುಂದೆ ಬಂದಿದೆ. ಅನುಷ್ಕಾ ಅವರ ಜತೆ ಪ್ರೇಗ್ ನಲ್ಲಿದ್ದ ಕೊಹ್ಲಿರನ್ನು ಕಂಡ ಅಭಿಮಾನಿಯೊಬ್ಬರು ಕೊಹ್ಲಿ ಜತೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದಾರೆ.

Virat Kohli in Prague to Meet his ladylove Anushka Sharma

ತಕ್ಷಣವೇ ಅನುಷ್ಕಾ ಶರ್ಮ ಕೈಗೆ ಕೆಮೆರಾ ಕೊಟ್ಟು ಕೊಹ್ಲಿ ಜತೆ ಫೋಟೋ ತೆಗೆಯುವಂತೆ ಹೇಳಿದ್ದಾರೆ. ಅನುಷ್ಕಾ ಕೂಡಾ ಖುಷಿಯಿಂದ ಇಬ್ಬರ ಚಿತ್ರ ತೆಗೆದಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡ ಅಭಿಮಾನಿ, ಹೊಸ ಮಾಸ್ಟರ್ ಬ್ಲಾಸ್ಟರ್ ಜೊತೆ ನನ್ನ ಫೋಟೋ ಈ ಚಿತ್ರ ತೆಗೆದ ಅನುಷ್ಕಾರಿಗೆ ಧನ್ಯವಾದ ಎಂದು ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದಾರೆ.

ಇಮ್ತಿಯಾಜ್ ಅಲಿ ನಿರ್ದೇಶನದ ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮ ಅಭಿನಯದ ಚಿತ್ರದ ಶೂಟಿಂಗ್ ಪ್ರೇಗ್ ನಲ್ಲಿ ಸಾಗಿದೆ. ಶೂಟಿಂಗ್ ಮುಗಿದ ಮೇಲೆ ಕೊಹ್ಲಿ ಜತೆ ಸುತ್ತಾಡುವಾಗ ಫ್ಯಾನ್ಸ್ ಕರೆಗೆ ಓಗೊಟ್ಟು ಅನುಷ್ಕಾ ಅವರು ಫೋಟೋ ಕ್ಲಿಕ್ಕಿಸಿದ್ದಾರೆ.

With the new master blaster , thank you #AnushkaSharma for the lovely picture taken by you. :)

A photo posted by henil2626 (@henilrao) on Aug 31, 2016 at 11:04pm PDT

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Virat Kohli is in Prague, Czech republic to meet his ladylove Anushka Sharma. Meanwhile a fan was lucky to take snap with Virat, Anushka was happy to take he puicture,
Please Wait while comments are loading...