ಕೊಹ್ಲಿ 25ನೇ ಶತಕ, ಮತ್ತೆ ದಾಖಲೆಗಳು ಧ್ವಂಸ

Posted By:
Subscribe to Oneindia Kannada

ಕ್ಯಾನ್ ಬೆರಾ, ಜ. 20: ಭಾರತದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸತತ ಎರಡನೇ ಏಕದಿನ ಕ್ರಿಕೆಟ್ ಶತಕ ಬಾರಿಸುವ ಮೂಲಕ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ. ವೃತ್ತಿ ಬದುಕಿನ 25ನೇ ಶತಕ ಬಾರಿಸಿ ಶ್ರೀಲಂಕಾದ ದಿಗ್ಗಜ ಕುಮಾರ್ ಸಂಗಕ್ಕಾರ ಅವರ ದಾಖಲೆ ಸಮಕ್ಕೆ ನಿಂತಿದ್ದಾರೆ.

ಕ್ಯಾನ್ ಬೆರಾ ಪಂದ್ಯದ ಸ್ಕೋರ್ ಕಾರ್ಡ್ | ಪಂದ್ಯದ ವರದಿ

ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಮನುಕಾ ಓವಲ್ ಮೈದಾನದಲ್ಲಿ ಬುಧವಾರ (ಜನವರಿ 20) ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅವರು 25ನೇ ಶತಕ ಬಾರಿಸಿದರು. ಈ ಮೂಲಕ ಸಾರ್ವಕಾಲಿಕ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ. [ಎಬಿ ಡಿವಿಲಿಯರ್ಸ್ ದಾಖಲೆ ಧ್ವಂಸಗೊಳಿಸಿದ ಕೊಹ್ಲಿ]

Virat Kohli hits 25th ODI ton to set record

ವಿರಾಟ್ ಕೊಹ್ಲಿ ಅವರು 84 ಎಸೆತಗಳಲ್ಲಿ ಶತಕ ಬಾರಿಸಿದ ನಂತರ 106ರನ್ (92 ಎಸೆತಗಳು, 11x4,1x6) ಗಳಿಸಿ ಕೇನ್ ರಿಚರ್ಡ್ಸನ್ ಗೆ ವಿಕೆಟ್ ಒಪ್ಪಿಸಿದರು. [ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ]

ತ್ವರಿತಗತಿಯಲ್ಲಿ 25ನೇ ಶತಕ: ಕೊಹ್ಲಿ ಅವರು ವಿಶ್ವ ಕ್ರಿಕೆಟ್ ನಲ್ಲಿ ತ್ವರಿತಗತಿಯಲ್ಲಿ 25ನೇ ಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 162 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ರನ್ ಚೇಸಿಂಗ್ ಮಾಡುವಾಗ 15ನೇ ಶತಕ ಇದಾಗಿದೆ.[ವಾಸಿಂ ಅಕ್ರಂಗೆ ಕೊಟ್ಟ ಮಾತು ಉಳಿಸಿಕೊಂಡ ಕೊಹ್ಲಿ]

ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ದಲ್ಲಿ ಜನವರಿ 17ರಂದು ತ್ವರಿತ ಗತಿಯಲ್ಲಿ 24 ಶತಕ ಗಳಿಸಿದ ಸಾಧನೆ ಮಾಡಿದ್ದರು. ಅದೇ ಪಂದ್ಯದಲ್ಲಿ ತ್ವರಿತ ಗತಿಯಲ್ಲಿ ಏಕದಿನ ಕ್ರಿಕೆಟ್ ನಲ್ಲಿ 7,000ರನ್ ಗಳಿಸಿದ ದಾಖಲೆ ಬರೆದಿದ್ದರು.

ಟಾಪ್ 5 ಆಟಗಾರರ ಪಟ್ಟಿ ಹೀಗಿದೆ:
* 49- ಸಚಿನ್ ತೆಂಡೂಲ್ಕರ್ -ಭಾರತ (463 ಪಂದ್ಯಗಳು)
* 30-ರಿಕಿ ಪಾಂಟಿಂಗ್- ಆಸ್ಟ್ರೇಲಿಯಾ (375)
* 28-ಸನತ್ ಜಯಸೂರ್ಯ- ಶ್ರೀಲಂಕಾ (445)
* 25-ಕುಮಾರ್ ಸಂಗಕ್ಕಾರ-ಶ್ರೀಲಂಕಾ (404)
* 25-ವಿರಾಟ್ ಕೊಹ್ಲಿ -ಭಾರತ (170)
* 23-ಎಬಿ ಡಿ ವಿಲಿಯರ್ಸ್- ದಕ್ಷಿಣ ಆಫ್ರಿಕಾ (195)
(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Virat Kohli hits 25th ODI ton to set record. India's star batsman Kohli struck his second consecutive ODI century against Australia to draw level with Sri Lankan great Kumar Sangakkara.
Please Wait while comments are loading...