ಝೀವಾ ಜತೆ ವಿರಾಟ್, ಹರ್ಭಜನ್ ಬ್ರಾವೋ ಫೋಟೋ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮುಂಬೈ, ಮಾರ್ಚ್ 30 : ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಡೆಲ್ಲಿ ಡ್ಯಾಷರ್ ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾದ ನಾಯಕ ಧೋನಿ ಅವರ ಪುತ್ರಿ ಝೀವಾ ಜೊತೆ ತೆಗೆಸಿಕೊಂಡ ಸೆಲ್ಫಿ ಸದ್ಯಕ್ಕೆ ಟ್ರೆಂಡಿಂಗ್ ಸುದ್ದಿ. ಇದರ ಬೆನ್ನಲ್ಲೇ ಹರ್ಭಜನ್ ಸಿಂಗ್ ಹಾಗೂ ಬ್ರಾವೋ ಕೂಡಾ ಝೀವಾ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಮಂಗಳವಾರ ರಾತ್ರಿ ಕೊಹ್ಲಿ, ಧೋನಿ ಪುತ್ರಿ ಝೀವಾ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಈ ಫೋಟೋದಲ್ಲಿ ಕೊಹ್ಲಿ ಸೆಲ್ಫಿ ಸ್ಮೈಲ್ ನಲ್ಲಿ ಫೋಸ್ ನೀಡಿದ್ದಾರೆ. [ಭಾರತ- ವೆಸ್ಟ್ ಇಂಡೀಸ್ ಕದನ ಸ್ವಾರಸ್ಯ]

ಇನ್ನೂ ಧೋನಿ ಪುತ್ರಿ ಫೋನ್‍ ಕಿವಿಗೆ ಫೋನ್ ಹಿಡಿದುಕೊಂಡು ಫೋಸ್ ನೀಡಿದ್ದಳು. ಅಲ್ಲದೇ ಕೊಹ್ಲಿ ಈ ಸೆಲ್ಫಿ ಜತೆಗೆ ಝೀವಾ ಮುದ್ದಾಗಿದ್ದಾಳೆ ಹಾಗೂ ಆಕರ್ಷಕವಾಗಿದ್ದಾಳೆ ಎಂದು ಪೋಸ್ಟ್ ಮಾಡಿದ್ದಾರೆ. [ಗೇಲ್ ಜತೆ ಇನ್ಜಿ ಹುಡ್ಗರ ಡ್ಯಾನ್ಸ್]

Virat Kohli Harbhajan Singh and Dwayne Bravo with MS Dhoni’s ‘cute and adorable’ daughter Ziva

ಈ ಫೋಟೋ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅಪ್ಲೋಡ್ ಆಗುತ್ತಿದ್ದಂತೆ 20 ಸಾವಿರಕ್ಕೂ ಹೆಚ್ಚು ಶೇರ್ ಮಾಡಿದ್ದರೆ, 18 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದು, ಲಕ್ಷಗಟ್ಟಲೆ ಲೈಕ್ ಗಳು ಬಂದಿವೆ.

Ziva

ವಿಶೇಷ ಅಂದರೆ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ ಝೀವಾ ಮೊಬೈಲ್ ಕಿವಿಯಲ್ಲಿ ಹಿಡಿದುಕೊಂಡಿದ್ದರಿಂದ ಹಲೋ ಡ್ಯಾಡಿ ನಿಮ್ಮ ರನ್ ಮಷಿನ್ ನನ್ನ ಕಿಡ್ನಾಪ್ ಮಾಡಿದ್ದಾನೆಂದು ಫನ್ನಿಯಾಗಿ ಬರೆದು ಫೋಟೋವನ್ನು ಫೋಸ್ಟ್ ಮಾಡಿದ್ದಾರೆ.

Virat Kohli Harbhajan Singh and Dwayne Bravo with MS Dhoni’s ‘cute and adorable’ daughter Ziva

ಆಸ್ಟ್ರೇಲಿಯಾ ವಿರುದ್ಧ ಅರ್ಭಟಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಡೆಲ್ಲಿ ಡ್ಯಾಶರ್ ವಿರಾಟ್ ಕೊಹ್ಲಿ ಸೇರಿದಂತೆ ವೆಸ್ಟ್ ವಿಂಡೀಸ್ ತಂಡದ ಆಲ್ ರೌಂಡರ್ ಡ್ವೇನ್ ಬ್ರಾವೊ, ಟೀಂ ಇಂಡಿಯಾದ ಸ್ಪಿನ್ನರ್ ಹರ್ಭಜನ್ ಸಿಂಗ್ ಕ್ಯಾಪ್ಟನ್ ಕೂಲ್ ಧೋನಿ ಮಗಳು ಝೀವಾ ಜತೆ ಫೋಟೋಗಳಿಗೆ ಫೋಸ್ ನೀಡಿ ಎನ್ ಜಾಯ್ ಮಾಡಿದ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸಾವಿರಾರು ಕಾಮೆಂಟ್ಸ್, ಮೆಚ್ಚುಗೆಗಳು ಹರಿದು ಬಂದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Virat Kohli Harbhajan Singh and Dwayne Bravo photo with MS Dhoni’s ‘cute and adorable’ daughter Ziva. Bravo also shared his image with MS Dhoni, Team India skipper's daughter Ziva and Harbhajan Singh.
Please Wait while comments are loading...