ನೋಟು ನಿಷೇಧ: ಪ್ರಧಾನಿ ಮೋದಿಯನ್ನು ಹೊಗಳಿದ ಕೊಹ್ಲಿ

Posted By:
Subscribe to Oneindia Kannada

ವಿಶಾಖಪಟ್ನಂ, ನವೆಂಬರ್, 16: ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಈ ಕುರಿತು ಬುಧವಾರ ಪ್ರತಿಕ್ರಿಯೆ ನೀಡಿರುವ ಅವರು "ನನ್ನ ಅನಿಸಿಕೆಯಂತೆ ಇದೊಂದು ಮಹತ್ವದ ಹೆಜ್ಜೆ, ಭಾರತದ ಇತಿಹಾಸದಲ್ಲೇ ಒಂದು ಪ್ರಮುಖ ನಿರ್ಧಾರ" ಎಂದು ಹೇಳಿದ್ದಾರೆ.

"ಮೋದಿಯವರ ನಿರ್ಧಾರ ನನ್ನನ್ನು ಆಶ್ಚರ್ಯಗೊಳಿಸಿದೆ. ಪ್ರಸ್ತುತ ದೇಶದಲ್ಲಿರುವ ಉಂಟಗಿರುವ ಸ್ಥಿತಿಯನ್ನು ನನ್ನ ಕೈಯಲ್ಲಿ ನಂಬಲಾಗುತ್ತಿಲ್ಲ" ಎಂದು ಅವರು ಹೇಳಿದ್ದಾರೆ.[ಹುಬ್ಬಳ್ಳಿಯಲ್ಲಿ ನ.21 ರಿಂದ ರಣಜಿ ಕ್ರಿಕೆಟ್ ಪಂದ್ಯ]

Virat Kohli Hails PM Narendra Modi's Demonetisation Move

ಇದೇ ವೇಳೆ ತಾವು ಎದುರಿಸಿದ ನೋಟ್ ನಿಷೇಧದ ಅನುಭವನ್ನು ಹಂಚಿಕೊಂಡಿರುವ ಕೊಹ್ಲಿ "ನಾನು ರಾಜ್ ಕೋಟ್ ನಲ್ಲಿರುವ ಹೋಟೆಲ್ ವೊಂದಕ್ಕೆ ಹೋಗಿದ್ದೆ. ಬಿಲ್ ಕಟ್ಟುವ ಭರದಲ್ಲಿ ಅರಿವಿಲ್ಲದೆಯೇ ಹಳೆಯ ನೋಟನ್ನು ನೀಡಿದ್ದೆ.[ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ಮೊದಲ ಆಯ್ಕೆ: ಕೊಹ್ಲಿ]

ಹಳೆಯ ನೋಟಿಗೆ ಬೆಲೆಯಿಲ್ಲ ಎಂದು ಆ ನಂತರ ಗೊತ್ತಾಯಿತು. ನಾನು ಹಲವು ಅಭಿಮಾನಿಗಳಿಗೆ ನೋಟುಗಳ ಮೇಲೆ ನನ್ನ ಆಟೋಗ್ರಾಫ್ ಬರೆದು ಕೊಟ್ಟಿದ್ದೆ, ಈಗ ಆ ನೋಟುಗಳಿಗೆ ಬೆಲೆಯಿಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Test skipper Virat Kohli on Wednesday described Modi government's demonetisation move as the greatest in the country's political history.
Please Wait while comments are loading...