ಡೆಹ್ರಾಡೂನ್ ನಲ್ಲಿ ಕೊಹ್ಲಿ-ಅನುಷ್ಕಾ ನಿಶ್ಚಿತಾರ್ಥ ಆಯ್ತೆ?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 29: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮ ಇಬ್ಬರ ನಡುವಿನ ಗೆಳೆತನ, ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ ಬಿದ್ದಿದೆ ಎಂಬ ಸುದ್ದಿ ಹಬ್ಬಿದೆ.

ಲೈವ್ ಹಿಂದೂಸ್ತಾನ್.ಕಾಂ ಎಂಬ ವೆಬ್ ತಾಣದಲ್ಲಿ ಮೊದಲಿಗೆ ಈ ಬಗ್ಗೆ ಸುದ್ದಿ ಪ್ರಕಟವಾಗಿದ್ದು, ಡೆಹ್ರಾಡೂನ್ ನಲ್ಲಿ ವಿರಾಮದಲ್ಲಿರುವ ಈ ಇಬ್ಬರು ಪ್ರೇಮಿಗಳು, ಗೌಪ್ಯವಾಗಿ ನಿಶ್ಚಿತಾರ್ಥ ಶಾಸ್ತ್ರ ಮುಗಿಸಿಕೊಂಡಿದ್ದಾರೆ ಎನ್ನಲಾಗಿದೆ.

Virat Kohli gets secretly engaged to actor girlfriend Anushka Sharma: Reports

ಈ ರೀತಿ ಸುದ್ದಿಯನ್ನು ಪ್ರಕಟಿಸಿರುವ ಮುಂಬೈ ಮಿರರ್, ಈ ತಾರಾ ಜೋಡಿ ಇಲ್ಲಿಂದ ಅನುಷ್ಕಾ ಅವರ ಪೋಷಕರು ಇರುವ ತೆಹ್ರಿಗೆ ತೆರಳಲಿದ್ದಾರೆ. ದೆಹಲಿಯಿಂದ ವಿರಾಟ್ ಕೊಹ್ಲಿ ಅವರ ತಾಯಿ ಕೂಡಾ ತೆಹ್ರಿಗೆ ಆಗಮಿಸಲಿದ್ದಾರೆ. ಎಲ್ಲರೂ ಸೇರಿ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮುಳುಗಲಿದ್ದಾರೆ ಎಂದು ಹೇಳಲಾಗಿದೆ.

ಸ್ಥಳೀಯ ಪತ್ರಿಕೆಗಳ ವರದಿಯಂತೆ ಕೊಹ್ಲಿ ಹಾಗೂ ಅನುಷ್ಕಾ ಇಬ್ಬರು ಉತ್ತರಾಖಂಡ್ ನ ನರೇಂದ್ರ ನಗರದ ಆನಂದ್ ಹೋಟೆಲ್ ನಲ್ಲಿ ತಂಗಿದ್ದರು. ಅಮಿತಾಬ್ ಬಚ್ಚನ್ ಕುಟುಂಬ ಹಾಗೂ ಅನಿಲ್ ಅಂಬಾನಿ ಹಾಗೂ ಟೀನಾ ದಂಪತಿಗಳನ್ನು ಸತ್ಕರಿಸುವ ಹೊಣೆ ಹೊತ್ತಿದ್ದರು ಎಂದು ತಿಳಿದು ಬಂದಿದೆ.

In the end, It's all about cherishing the simple things in life 😇❤️#nature

A video posted by AnushkaSharma1588 (@anushkasharma) on Dec 26, 2016 at 11:07pm PST

ಆದರೆ, ಅಧಿಕೃತವಾಗಿ ನಿಶ್ಚಿತಾರ್ಥ ಸಮಾರಂಭ ಹೊಸ ವರ್ಷದಲ್ಲಿ ನಡೆಯಲಿದ್ದು, ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಉತ್ತರಾಖಂಡ್ ರಾಜ್ಯದ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಅವರನ್ನು ಉತ್ತರಾಖಂಡ್ ಸಿಎಂ ಹರೀಶ್ ರಾವತ್ ಕೂಡಾ ಟ್ವೀಟ್ ಮಾಡಿ ಸ್ವಾಗತಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Virat-Anushka get engaged?
English summary
Rumour mills are abuzz that Indian cricket's biggest star Virat Kohli has secretly got engaged to his actor girlfriend Anushka Sharma.
Please Wait while comments are loading...