ಗಂಭೀರ್ -ಕೊಹ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡ್ತಿಲ್ಲ!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13: ಸೆಲೆಬ್ರಿಟಿಗಳ ನೆಚ್ಚಿನ ಹಾಗೂ ನಂಬುಗೆಯ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಯಾರು ಯಾರನ್ನು ಫಾಲೋ ಮಾಡುತ್ತಿದ್ದಾರೆ ಎಂಬುದು ಬಹುಚರ್ಚಿತ ವಿಷಯ. ಸದ್ಯಕ್ಕೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಯಾವುದೇ ಟ್ವಿಟ್ಟರ್ ಬಂಧ ಇಲ್ಲ ಎಂಬ ಸಂಗತಿ ಬಹಿರಂಗವಾಗಿದೆ.

ವಿರಾಟ್ ಕೊಹ್ಲಿ ಅವರಿಗೆ 12 ಮಿಲಿಯನ್ ಗೂ ಅಧಿಕ ಹಿಂಬಾಲಕರಿದ್ದಾರೆ ಆದರೆ, ಗೌತಮ್ ಗಂಭೀರ್ ಮಾತ್ರ ಈ ಪಟ್ಟಿಯಲ್ಲಿಲ್ಲ. ದೆಹಲಿ ಮೂಲದ ಈ ಇಬ್ಬರು ಕ್ರಿಕೆಟ್ ಸ್ಟಾರ್ ಗಳು ಒಬ್ಬರಿಗೊಬ್ಬರು ಫಾಲೋ ಮಾಡುತ್ತಿಲ್ಲ. 2013 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ ನಂತರ ಇಬ್ಬರ ನಡುವೆ ಕಂದಕ ಏರ್ಪಟ್ಟಿದೆ ಎಂಬ ಸುದ್ದಿ ಎಲ್ಲರಿಗೂ ತಿಳಿದೇ ಇದೆ.

ನಂತರ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾದರು. ಗೌತಮ್ ಅವರು ಕೋಲ್ಕತ್ತಾ ತಂಡವನ್ನು ಮುನ್ನಡೆಸಲು ಆರಂಭಿಸಿದರು. ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದರು.

Virat Kohli and Gautam Gambhir don't follow each other on Twitter

ಈಗ ನ್ಯೂಜಿಲೆಂಡ್ ವಿರುದ್ಧದ ಇಂದೋರ್ ಟೆಸ್ಟ್ ಪಂದ್ಯದಲ್ಲಿ ಗೌತಮ್ ಗಂಭೀರ್ ಗೆ ಆಡಲು ನಾಯಕ ಕೊಹ್ಲಿ ಅವಕಾಶ ನೀಡಿದ್ದು, ಪಂದ್ಯವನ್ನು ಭಾರತ 321 ರನ್ ಗಳಿಂದ ಗೆದ್ದು, ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದ್ದು ಈಗ ಇತಿಹಾಸ.

ಇದಕ್ಕೂ ಮುನ್ನ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಇಬ್ಬರು ಒಟ್ಟಿಗೆ ಅಭ್ಯಾಸ ನಿರತರಾಗಿದ್ದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಸದ್ದು ಮಾಡಿತ್ತು. ಆದರೆ, ಕೋಲ್ಕತ್ತಾ ಟೆಸ್ಟ್ ಪಂದ್ಯಕ್ಕೆ ಗಂಭೀರ್ ಆಯ್ಕೆ ಮಾಡಲಿಲ್ಲ ಎಂಬ ಕಾರಣಕ್ಕೆ ಕೋಹ್ಲಿ ಅವರನ್ನು ಗಂಭೀರ್ ಅಭಿಮಾನಿಗಳು ದೂಷಿಸಿದರು.

ಟ್ವಿಟ್ಟರ್ ನಲ್ಲಿ ಕೊಹ್ಲಿ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಏಕದಿನ ಕ್ರಿಕೆಟ್ ನಾಯಕ ಎಂಎಸ್ ಧೋನಿ, ರವಿಚಂದ್ರನ್ ಅಶ್ವಿನ್, ಶಿಖರ್ ಧವನ್ ಸೇರಿದಂತೆ 39ಕ್ಕೂ ಅಧಿಕ ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಅದರೆ, ಗಂಭೀರ್ ಅವರನ್ನು ಫಾಲೋ ಮಾಡುತ್ತಿಲ್ಲ.

ಇದೇ ರೀತಿ ಗಂಭೀರ್ ಅವರು ತೆಂಡೂಳ್ಕರ್, ಸೆಹ್ವಾಗ್, ಧೋನಿ ಸೇರಿದಂತೆ 81 ಮಂದಿಯನ್ನು ಫಾಲೋ ಮಾಡುತ್ತಿದ್ದು, ಈ ಪೈಕಿ ಕೊಹ್ಲಿ ಹೆಸರಿಲ್ಲ.

ಗಂಭೀರ್ ಅವರು ಮತ್ತೆ ಟೆಸ್ಟ್ ತಂಡದಲ್ಲಿ ಹೆಚ್ಚು ಕಾಲ ಉಳಿದರೆ ಕೊಹ್ಲಿ ಕೂಡಾ ಫಾಲೋ ಮಾಡುವ ಸಾಧ್ಯತೆ ಹೆಚ್ಚಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಪ್ರತಿಕ್ರಿಯೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's Test captain Virat Kohli has over 12 million followers on Twitter. But Gautam Gambhir is not one of them. The Delhi boys don't follow each other on the micro-blogging website.
Please Wait while comments are loading...