ಅನುಷ್ಕಾ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೊಹ್ಲಿ ಗರಂ

Posted By:
Subscribe to Oneindia Kannada

ಮುಂಬೈ, ಫೆ. 18: ಪ್ರೇಮಿಗಳ ದಿನ ಮುಗಿದ ನಾಲ್ಕು ದಿನಗಳ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಸಿಕ್ಕ ಕ್ರಿಕೆಟರ್ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ. ನಟಿ ಅನುಷ್ಕಾ ಶರ್ಮ ಅವರ ಜೊತೆಗಿನ ನಿಮ್ಮ ಸಂಬಂಧದ ಬಗ್ಗೆ ಹೇಳಿ ಎಂದು ಪದೇ ಪದೇ ಕೇಳುತ್ತಿದ್ದ ವರದಿಗಾರರ ಮೇಲೆ ಸಿಟ್ಟಿಗೆದ್ದಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಬ್ರೇಕ್-ಅಪ್ ಆಗಿದ್ದಾರೆ, ಪ್ರೇಮಿಗಳ ದಿನದಂದು ಒಟ್ಟಿಗೆ ಕಾಣಿಸಿಕೊಂಡಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ಗೊತ್ತಾಗಿದೆ. ಕೊಹ್ಲಿ ಅವರು ತಮ್ಮ ತಾಯಿ ಜೊತೆಗಿನ ಚಿತ್ರವನ್ನು ಹಾಕಿ, ಜಗತ್ತಿನ ಅತ್ಯಂತ ಸುಂದರ ಮಹಿಳೆ ಜೊತೆ ಇದ್ದೇನೆ ಅಷ್ಟು ಸಾಕು ಎಂದಿದ್ದರು. [ಭಗ್ನ ಪ್ರೇಮಿ ವಿರಾಟ್ ಕೊಹ್ಲಿಗೀಗ 'ವಿರಹ' ವಿರಾಮ]

Virat Kohli

ಸಂಬಂಧ ಮುರಿದುಕೊಂಡಿರುವ ಬಗ್ಗೆ ಇಬ್ಬರೂ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಸಂಬಂಧ ಇದೇ ಎಂಬುದರ ಬಗ್ಗೆ ಪರೋಕ್ಷವಾಗಿ ಹೇಳುತ್ತಿದ್ದರು. ಇಬ್ಬರು ತಮ್ಮ ವೃತ್ತಿ ಬಗ್ಗೆ ಹೆಚ್ಚಿನ ಗಮನ ಹರಿಸಲು ಬ್ರೇಕ್ ಅಪ್ ಆಗಿದ್ದಾರೆ ಎಂದು ಸುದ್ದಿ ಹಬ್ಬಿದೆ. ಸ್ವಿಸ್ ವಾಚ್ ಕಂಪನಿ Tissot ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಅವರು ಪತ್ರಕರ್ತ ಪ್ರಶ್ನೆಗಳನ್ನು ಎದುರಿಸಿದರು.

'ಈ ಕಂಪನಿ ಕೈಗಡಿಯಾರವನ್ನು ಬಾಲಿವುಡ್​ ನ ಯಾವ ತಾರೆಗೆ ನೀಡುತ್ತೀರಿ' ಎಂಬುದು ಪ್ರಶ್ನೆಯಾಗಿತ್ತು. ಇದಕ್ಕೆ ಗರಂ ಆದ ಕೊಹ್ಲಿ, 'ನಾನು ನನ್ನ ಕುಟುಂಬದವರಿಗೇ ಮೊದಲು ಗಿಫ್ಟ್ ನೀಡುತ್ತೇನೆ. ಬಹುಶಃ ಟೀಮ್ ಇಂಡಿಯಾದ ಸದಸ್ಯರಿಗೂ ಉಡುಗೊರೆ ನೀಡಬಹುದು. ಆದರೆ, ಈ ಪ್ರಶ್ನೆ ಯಾಕೆಂದು ಗೊತ್ತಾಗುತ್ತಿಲ್ಲ ಎಂದರು.

ನಂತರ 'ಸಂಬಂಧ'ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪರೋಕ್ಷ ಪ್ರಶ್ನೆಗೂ ಅಸಮಾಧಾನಗೊಂಡ ಕೊಹ್ಲಿ, 'ಯಾರ ಜತೆಗಿನ ಸಂಬಂಧ? ನಾನು ಸಂಬಂಧಗಳ ಕೌನ್ಸೆಲರ್ ಅಲ್ಲ. ಹೀಗಾಗಿ ಇದು ನನಗೆ ಕೇಳಬಹುದಾದ ಪ್ರಶ್ನೆಯಲ್ಲ, ಪರಿಣತರನ್ನು ಕೇಳಿ' ಎಂದರು.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ 27 ವರ್ಷದ ಕೊಹ್ಲಿ, ಮುಂಬರುವ ಏಷ್ಯಾಕಪ್​ನಲ್ಲಿ ಮತ್ತೆ ಭಾರತ ತಂಡ ಕೂಡಿಕೊಳ್ಳಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India Test skipper Virat Kohli, lost his cool after reporters repeatedly asked questions about his relationship status. Kohli faced questions on Bollywood and relationships at an event where he was named the brad ambassador of a major watch company.
Please Wait while comments are loading...