ಅನುಷ್ಕಾ ಕಾಣಿಸಿಕೊಂಡ ಜಾಗದಲ್ಲಿ ವಿರಾಟ್‌ಗೇನು ಕೆಲಸ?

Written By:
Subscribe to Oneindia Kannada

ನವದೆಹಲಿ,ಜೂನ್ 04: ವಿರಾಟ್ ಕೊಹ್ಲಿ ಅಂಗಣದಲ್ಲಿ ಬ್ಯಾಟ್ ಬೀಸಿದರಷ್ಟೆ ಸುದ್ದಿ ಅಲ್ಲ. ಅವರಿಗೆ ಮಾಡೆಲ್ ಕೂಡ. ಐಪಿಎಲ್ ನಲ್ಲಿ ರನ್ ಹೊಳೆ ಹರಿಸಿದ್ದ ಕೊಹ್ಲಿ ಜಿಕ್ಯೂ ಇಂಡಿಯಾ ಮ್ಯಾಗಜಿನ್ ಮುಖಪುಟದಲ್ಲಿ ರಾರಾಜಿಸಿದ್ದಾರೆ. 2014ರಲ್ಲಿ ಅನುಷ್ಕಾ ಸಹ ಇದೇ ಮ್ಯಾಗಜಿನ್ ನಲ್ಲಿ ಕಾಣಿಸಿಕೊಂಡಿದ್ದರು.

ಭಾರತದ 50 ಜನ ಬೆಸ್ಟ್ ಡ್ರೆಸಡ್ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡ ಮ್ಯಾಗಜಿನ್ ವಿರಾಟ್ ಅವರನ್ನು ಮುಖಪುಟಕ್ಕೆ ಬಳಸಿಕೊಂಡಿದೆ. ಕೊಹ್ಲಿ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ನನಗೆ ಸಿಕ್ಕ ಬಹುದೊಡ್ಡ ಕಾಂಪ್ಲಿಮೆಂಟ್ ಎಂದು ಬಣ್ಣಿಸಿಕೊಂಡಿದ್ದಾರೆ. [ಐಪಿಎಲ್ 2016ರಲ್ಲಿ ವಿರಾಟ್ ಕೊಹ್ಲಿ ಸಾಧನೆ, ದಾಖಲೆಗಳು]

virat kohli

ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ನಡುವೆ ವಿರಸ ಮೂಡಿದೆ ಎಂದು ಅಂದುಕೊಂಡಿರುವಾಗ ಜೋಡಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ಸುದ್ದಿ ಮಾಡಿತ್ತು.[ಬಿಕಿನಿಯಲ್ಲಿ ಬಾಲಿವುಡ್ ಬೆಡಗಿ ಅನುಷ್ಕಾ]

ಅನುಷ್ಕಾ ಶರ್ಮ ಜಿಕ್ಯೂ ಇಂಡಿಯಾ ಡಿಸೆಂಬರ್ 2014ರ ಸಂಚಿಕೆಗಾಗಿ ಗೋಲ್ಡನ್ ಬಿಕಿನಿಯಲ್ಲಿ ದರ್ಶನ ನೀಡಿದ್ದರು. ಈಗ ಅದೇ ಮ್ಯಾಗಜಿನ್ ಮುಖಪುಟದಲ್ಲಿ ವಿರಾಟ್ ಕಾಣಿಸಿಕೊಂಡಿದ್ದಾರೆ.[ಜೊತೆ, ಜೊತೆಯಲಿ, ವಿರಾಟ್-ಅನುಷ್ಕಾ]

ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಡಲಿದ್ದು ಜುಲೈ 6 ರಿಂದ ಪ್ರವಾಸ ಆರಂಭಗೊಳ್ಳಲಿದೆ. ಜುಲೈ 6 ರಂದು ಸೈಂಟ್ ಕಿಟ್ಸ್ ತಲುಪಲಿರುವ ಟೀಂ ಇಂಡಿಯಾ ಮೊದಲಿಗೆ ಕೆಲ ಅಭ್ಯಾಸ ಪಂದ್ಯಗಳನ್ನಾಡಲಿದೆ. ಜುಲೈ 21 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After making it to record books with his sensational innings in the Indian Premier League (IPL), Team India's Test skipper Virat Kohli has now made it to the cover page of popular magazine GQ India.The Indian swashbuckler was chosen by the magazine amongst 50 best dressed celebs in India.
Please Wait while comments are loading...