ಎಬಿಡಿ ಏಕದಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

Posted By:
Subscribe to Oneindia Kannada

ಬರ್ಮಿಂಗ್ ಹ್ಯಾಮ್, ಜೂನ್ 15: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತ್ವರಿತಗತಿಯಲ್ಲಿ 8,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿ ವಿಲಿಯರ್ಸ್ ದಾಖಲೆಯನ್ನು ಮುರಿದಿದ್ದಾರೆ.

ಚಾಂಪಿಯನ್ಸ್ ಟ್ರೋಫಿ 2017ರ ಎರಡನೇ ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಈ ಸಾಧನೆ ಕಂಡು ಬಂದಿದೆ. ಬಲಗೈ ಬ್ಯಾಟ್ಸ್ ಮನ್ ಎಬಿ ಡಿ ವಿಲಿಯರ್ಸ್ ಅವರು 175 ಇನ್ನಿಂಗ್ಸ್ ಗಳಲ್ಲಿ 8, 000ರನ್ ಗಳಿಸಿದ್ದಾರೆ. ಕೊಹ್ಲಿ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಹ ಆಟಗಾರ ಎಬಿ ಡಿ ವಿಲಿಯರ್ಸ್ ಅವರು 182 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಗಳಿಸಿದ್ದರು.

Virat Kohli fastest to complete 8000 ODI runs, breaks AB de Villiers' record

ಈ ಮುಂಚೆ ತ್ವರಿತಗತಿಯಲ್ಲಿ 7,000ರನ್ ಗಳಿಸಿದ್ದ ಎಬಿ ಡಿ ವಿಲಿಯರ್ಸ್(166 ಇನ್ನಿಂಗ್ಸ್) ದಾಖಲೆಯನ್ನು ಕೂಡಾ ವಿರಾಟ್ ಕೊಹ್ಲಿ ಅವರು ಮುರಿದಿದ್ದರು. 161 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಈ ಗುರಿ ತಲುಪಿದ್ದರು. ನಂತರ ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ ಅವರು ಈ ದಾಖಲೆಯನ್ನು ಉತ್ತಮಪಡಿಸಿದ್ದರು.

ಅಮ್ಲ ಅವರು ಏಕದಿನ ಕ್ರಿಕೆಟ್‌ನಲ್ಲಿ 2,000, 3,000, 4,000, 5,000. 6,000, 7,000 ರನ್‌ಗಳನ್ನು ಕೂಡಾ ತ್ವರಿತಗತಿಯ ಪೂರ್ಣಗೊಳಿಸಿದ ಸಾಧನೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's batting mainstay Virat Kohli on Thursday (June 15) touched another milestone by becoming the fastest to score 8000 ODI runs.
Please Wait while comments are loading...