ಸರಣಿ ಗೆದ್ದ ನಾಯಕ ಕೊಹ್ಲಿಗೆ ಸಕತ್ ಮುತ್ತಿನ ಸುರಿಮಳೆ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 13: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದು ಮನೆಗೆ ಬಂದ ನಾಯಕ ವಿರಾಟ್ ಕೊಹ್ಲಿಗೆ ಮುತ್ತಿನ ಸುರಿಮಳೆ ಸಿಕ್ಕಿದೆ. ಮನೆಯಲ್ಲಿ ಮೃಷ್ಟಾನ್ನ ಭೋಜನ ಸವಿದ ವಿರಾಟ್ ಅವರು ಈಗ ಧರ್ಮಶಾಲಕ್ಕೆ ಬಂದಿಳಿದಿದ್ದಾರೆ.

ಇಂದೋರ್ ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಂತರ ಸಿಕ್ಕ ಕೆಲ ಸಮಯವನ್ನು ಮನೆಯಲ್ಲಿ ಕಳೆಯಲು ಕೊಹ್ಲಿ ನಿರ್ಧರಿಸಿದರು. ಐದು ದಿನಗಳ ಟೆಸ್ಟ್ ಪಂದ್ಯ ಕೂಡಾ ನಾಲ್ಕು ದಿನಗಳಲ್ಲಿ ಮುಕ್ತಾಯವಾಗಿದ್ದು ಕೊಹ್ಲಿಗೆ ಇನ್ನೂ ಖುಷಿ ಕೊಟ್ಟಿತು. ಇಂದೋರ್ ಟೆಸ್ಟ್ ಪಂದ್ಯದಲ್ಲಿ 321ರನ್ ಗಳಿಂದ ಗೆದ್ದು 3-0 ಅಂತರದಲ್ಲಿ ವೈಟ್ ವಾಶ್ ಸಾಧಿಸಿದ ಕೊಹ್ಲಿ ಅವರು ಸಂಭ್ರಮದಿಂದ ಮನೆಗೆ ತೆರಳಿದರು.

Virat Kohli enjoys home food, gets unconditional love from 'little dynamite'

27 ವರ್ಷ ವಯಸ್ಸಿನ ಕೊಹ್ಲಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಸರಣಿ ಸೆಲ್ಫಿ ಚಿತ್ರಗಳನ್ನು ಹಾಕುವ ಮೂಲಕ ತಮಗೆ ಮನೆಯಲ್ಲಿ ಸಿಕ್ಕ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.


ಮನೆಯಲ್ಲಿ ಒಳ್ಳೆ ಊಟ, ನನ್ನ ಲಿಟಲ್ ಡೈನಮೋ ಜತೆ ಒಡನಾಟ, ಬೇಡಿಕೆ ಇರದ ಇಂಥ ಪ್ರೀತಿ ಸಿಕ್ಕರೆ ನಾನು ಸೋಮಾರಿಯಾಗುವೆ ಎಂದಿದ್ದಾರೆ.

ಟೀಂ ಇಂಡಿಯಾದ ಫಿಟ್ ಕ್ರಿಕೆಟರ್ ಎನಿಸಿಕೊಂಡಿರುವ ಕೊಹ್ಲಿ ಅವರು ಡಯಟ್ ಪುಡ್ ಇಷ್ಟಪಡುತ್ತಾರೆ. ಹೆಚ್ಚು ಎಣ್ಣೆಯುಕ್ತ ಪದಾರ್ಥ, ಕಾರ್ಬನ್ ಹೈಡ್ರೇಟ್ ಯುಕ್ತ ಆಹಾರ ವರ್ಜ್ಯ. ಆದರೆ, ಅಮ್ಮನ ಕೈ ಅಡುಗೆ ಸಿಕ್ಕರೆ ಡಯಟ್ ಎಲ್ಲಾ ದೂರ.

ಅಕ್ಟೋಬರ್ 16(ಭಾನುವಾರ) ರಂದು ಧರ್ಮಶಾಲದಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ನಡೆಯಲಿದೆ. ಐದು ಏಕದಿನ ಪಂದ್ಯಗಳ ಸರಣಿಗೆ ಕೊಹ್ಲಿ ಸಜ್ಜಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Test captain and star batsman Virat Kohli headed for home after registering an early win over New Zealand at Indore Test.
Please Wait while comments are loading...