ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೊಹ್ಲಿ ತಿನ್ನುತ್ತಿರೋದೇನು?

Posted By:
Subscribe to Oneindia Kannada

ಗಾಲೆ (ಶ್ರೀಲಂಕಾ), ಜುಲೈ 25: ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಿರುವ ಟೀಂ ಇಂಡಿಯಾದ ಡಯೆಟ್ ಬಗೆಗಿನ ವಿಡಿಯೊವೊಂದನ್ನು ಭಾರತೀಯ ಕ್ರಿಕೆಟ್ ಸಂಸ್ಥೆಯು (ಬಿಸಿಸಿಐ) ತಮ್ಮ ವೆಬ್ ಸೈಟ್ ನಲ್ಲಿ ಹಾಕಿದ್ದು, ಅದು ಈಗ ವೈರಲ್ ಆಗಿದೆ.

ಆ ವಿಡಿಯೋದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು, ಪಂದ್ಯದ ಮಧ್ಯಾಹ್ನದ ಭೋಜನ ವೇಳೆಯಲ್ಲಿ ಚಿಕನ್ ತಿನ್ನುತ್ತಿರುವ ದೃಶ್ಯಗಳಿವೆ. ಒಂದಿಷ್ಟು ಅನ್ನ, ಚಿಕನ್ ಸಾರು ಹಾಕಿಕೊಂಡು ತಿನ್ನುತ್ತಾ ಮಾತನಾಡುವ ಕೊಹ್ಲಿ, ಇದೆಲ್ಲವೂ ಪ್ರೊಟೀನ್ ಯುಕ್ತ ಆಹಾರವಾಗಿದ್ದು, ಹೆಚ್ಚು ತಿನ್ನದೇ ಚೂರು ತಿಂದರಷ್ಟೇ ಫಿಟ್ನೆಸ್ ಕಾಪಾಡಲು ಸಾಧ್ಯ ಎಂದಿದ್ದಾರೆ.

Virat Kohli enjoys 'delicious' chicken curry during practice match in Sri Lanka

ಮತ್ತೊಂದು ದೃಶ್ಯದಲ್ಲಿ, ಶ್ರೀಲಂಕಾದ ಶುಷ್ಕ ಹವಾಮಾನವನ್ನು ಗೇಲಿ ಮಾಡಿರುವ ಹಾರ್ದಿಕ್ ಪಾಂಡ್ಯ, ಇಲ್ಲಿ ಸಿಕ್ಕಾಪಟ್ಟೆ ಚಳಿ. ಇಲ್ಲಿನ ಬಿಸಿಯನ್ನು ಕಾಪಾಡಿಕೊಳ್ಳಲು ನಿತ್ಯವೂ ಮೊಸರನ್ನು ತಿನ್ನುತ್ತಿರುವುದಾಗಿ ಹೇಳಿದ್ದಾರೆ.

ಆನಂತರದ ದೃಶ್ಯದಲ್ಲಿ ವೇಗಿ ಭುವನೇಶ್ವರ್ ಕುಮಾರ್, ಅನ್ನ, ಮೊಸರು ಹಾಗೂ ದಾಲ್ ತಿನ್ನುವುದು ಕಾಣುತ್ತದೆ.

Champions Trophy 2017 :Indian Cricket Team's Success Is An Outcome Of Good Cricket| Oneindia Kannada

ಆನಂತರದ ದೃಶ್ಯಗಳಲ್ಲಿ, ಭಾರತ ತಂಡಕ್ಕೆ ಊಟ ಸಪ್ಲೈ ಮಾಡುವ ತಾಜ್ ಸಮುದ್ರ ಬ್ಯಾಂಕ್ವೆಟ್ ಹೋಟೆಲ್ ನ ಪ್ರಸನ್ನ ವಿಮಲಾಸುರೇಂದ್ರ ಅವರು, ತಂಡಕ್ಕೆ ಊಟ ತಯಾರಿಸುತ್ತಿರುವ ವಿಧಾನ, ಅದನ್ನು ನೀಟಾಗಿ ಪ್ಯಾಕ್ ಮಾಡಿ ತಂಡದ ಆಟಗಾರರಿಗೆ ತಲುಪಿಸುವ ರೀತಿಯನ್ನು ವಿವರವಾಗಿ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As Team India prepare for the first Test against Sri Lanka at P Sera Stadium in Galle, the BCCI has given an insight of the team's cullinary habit in the island nation.
Please Wait while comments are loading...