12 ಸಾವಿರ ರನ್ ಕ್ಲಬ್ ಸೇರಿದ ವಿರಾಟ್ ಕೊಹ್ಲಿ

Posted By:
Subscribe to Oneindia Kannada

ನಾರ್ಥ್ ಸೌಂಡ್ (ಆಂಟಿಗ್ವಾ), ಜುಲೈ 26: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಮೊದಲ ಟೆಸ್ಟ್ ಪಂದ್ಯ ಅವಿಸ್ಮರಣೀಯವಾಗಿದೆ. ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ದ್ವಿಶತಕ ದಾಖಲೆ ಜೊತೆಗೆ 12 ಸಾವಿರ ರನ್ ಗಳಿಕೆ ಕ್ಲಬ್ ಗೂ ಸೇರಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 12 ಸಾವಿರ ರನ್ ಗಳಿಸಿದ ಆಟಗಾರರ ಕ್ಲಬ್ ಸೇರಿಕೊಂಡಿದ್ದಾರೆ. ಈ ಮೈಲಿಗಲ್ಲು ದಾಟಿದ 8ನೇ ಭಾರತೀಯ ಆಟಗಾರ ಹಾಗೂ ವಿಶ್ವ ಕ್ರಿಕೆಟ್ ನಲ್ಲಿ ಒಟ್ಟಾರೆ 51ನೇ ಆಟಗಾರರಾಗಿದ್ದಾರೆ.[ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಗೆಲುವಿನ ನಗೆ]

ಕೊಹ್ಲಿ ಅವರ ದ್ವಿಶತಕ, ರವಿಚಂದ್ರನ್ ಅಶ್ವಿನ್ ಅವರ ಆಲ್ ರೌಂಡ್ ಆಟ(113 ಹಾಗೂ 7 ವಿಕೆಟ್ ಗಳು) ನೆರವಿನಿಂದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 92 ರನ್ ಗಳ ಅಂತರದ ಜಯ ದಾಖಲಿಸಲು ಸಾಧ್ಯವಾಯಿತು. [ವಿಂಡೀಸ್ ಸರಣಿ ಕ್ಲೀನ್ ಸ್ವೀಪ್ ಆದ್ರೆ ಭಾರತ ನಂ.1]

2008ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಕೊಹ್ಲಿ ಅವರು ವಿದೇಶದಲ್ಲಿ ಚೊಚ್ಚಲ ದ್ವಿಶತಕ, ನಾಯಕನಾಗಿ ಮೊದಲ ಬಾರಿಗೆ 200ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ. 12 ಸಾವಿರ ರನ್ ಕ್ಲಬ್ ನಲ್ಲಿರುವ ಇತರೆ ಭಾರತೀಯ ದಿಗ್ಗಜರ ಬಗ್ಗೆ ಮುಂದೆ ಓದಿ..

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎಲ್ಲಾ ಮಾದರಿಯಲ್ಲಿ ರನ್ ಗಳಿಕೆ ಲೆಕ್ಕ ಹಾಕಿದರೆ 34,357 ರನ್ ಗಳಿಸಿದ್ದು, ಎಲ್ಲರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ.

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್ ಅವರು ಎರಡನೇ ಸ್ಥಾನದಲ್ಲಿದ್ದು 24,208ರನ್ ಗಳಿಸಿದ್ದಾರೆ.

ಸೌರವ್ ಗಂಗೂಲಿ

ಸೌರವ್ ಗಂಗೂಲಿ

ಮಾಜಿ ನಾಯಕ ಸೌರವ್ ಗಂಗೂಲಿ ಅವರು ಮೂರನೇ ಸ್ಥಾನದಲ್ಲಿದ್ದು 18,575ರನ್ ಗಳಿಸಿದ್ದಾರೆ.

ವಿರೇಂದರ್ ಸೆಹ್ವಾಗ್

ವಿರೇಂದರ್ ಸೆಹ್ವಾಗ್

ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೇಂದರ್ ಸೆಹ್ವಾಗ್ ಅವರು 17,253ರನ್ ಕಲೆ ಹಾಕಿದ್ದಾರೆ.

ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್ ಅವರು 15,593ರನ್ ಗಳಿಸಿ ನಿವೃತ್ತರಾದರು.

ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿ

14,863ರನ್ ಗಳಿಸಿರುವ ಮಹೇಂದ್ರ ಸಿಂಗ್ ಧೋನಿ ಅವರು ಇನ್ನೂ ಏಕದಿನ ಹಾಗೂ ಟಿ20 ಕ್ರಿಕೆಟ್ ಆಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ನಿಂದ ಮಾತ್ರ ನಿವೃತ್ತರಾಗಿದ್ದಾರೆ.

ಸುನಿಲ್ ಗವಾಸ್ಕರ್

ಸುನಿಲ್ ಗವಾಸ್ಕರ್

ಸುನಿಲ್ ಗವಾಸ್ಕರ್ ಅವರು 10,000 ರನ್ ಗಳಿಸಿದ ಮೊಟ್ಟ ಮೊದಲ ಬ್ಯಾಟ್ಸ್ ಮನ್ ಒಟ್ಟಾರೆ 13,214ರನ್ ಗಳಿಸಿ ನಿವೃತ್ತಿ ಹೊಂದಿದರು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

12 ಸಾವಿರ ರನ್ ಕ್ಲಬ್ ಸೇರಿದ ಇತ್ತೀಚಿನ ಭಾರತೀಯ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಸದ್ಯ ಜುಲೈ 26, 2016ರಂತೆ 12,047 ರನ್ ಗಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It was a memorable Test match for captain Virat Kohli and Team India at Sir Vivian Richards Stadium here. Kohli joined an elite company of Indian cricketers during his 200-run knock.
Please Wait while comments are loading...