ಜಾಹೀರಾತು ವಾರ್: ಧೋನಿ ಹಿಂದಿಕ್ಕಿದ ವಿರಾಟ್ ಕೊಹ್ಲಿ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮಾರ್ಚ್ 21 ; ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಸೇರಿದಂತೆ ಆಟಗಾರರ ಬ್ಯಾಟ್ ಮೇಲಿರುವ ಜಾಹಿರಾತು ಸ್ಟೀಕರ್ ಗಳಿಗೆ ಕೋಟಿ-ಕೋಟಿ ರೂಗಳನ್ನು ಆಯಾ ಬ್ರಾಂಡ್ ಕಂಪನಿಗಳಿಂದ ಪಡೆಯುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಡೆಲ್ಲಿ ಡ್ಯಾಶರ್ ಭಾರತ ಕ್ರಿಕೆಟ್ ತಂಡದ ಉಪ ನಾಯಕ ವಿರಾಟ್ ಕೋಹ್ಲಿ ಅವರು ನಾಯಕ ಧೋನಿಗಿಂತ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಹೌದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಬ್ಯಾಟ್ ಮೇಲಿರುವ ಸ್ಪಾರ್ಟನ್ ಜಾಹಿರಾತು ಸ್ಟೀಕರ್ ಗೆ ಬರೋಬ್ಬರಿ 6 ಕೋಟಿ ರೂಗಳನ್ನು ಸಂಭಾವನೆ ಪಡೆದರೆ. ನಾಯಕನಿಗಿಂತ ನಾನೇನೂ ಕಡಿಮೆ ಇಲ್ಲ ಎನ್ನುವಂತೆ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ತಮ್ಮ ಬ್ಯಾಟ್ ಮೇಲಿರುವ ಎಂ.ಆರ್.ಎಫ್ ಜಾಹಿರಾತು ಕಂಪನಿಯಿಂದ ನಾಯಕ ಧೋನಿಗಿಂತ ಎರಡು ಕೋಟಿಗಳ ಅಧಿಕ 8 ಕೋಟಿ ರೂಗಳನ್ನು ಬಾಚಿಕೊಳ್ಳುತ್ತಿದ್ದಾರೆ. [ಟ್ರಾಲ್ಸ್ : ಕೊಹ್ಲಿ ಪರಿಶ್ರಮ vs ಧೋನಿ ಭಕ್ತರು]

ಅಷ್ಟೇ ಅಲ್ಲದೆ ವಿರಾಟ್ ಮೈದಾನದಲ್ಲಿ ಧರಿಸುವ ಶೂ ಹಾಗೂ ಜರ್ಸಿಗೂ ಸಹ ಕೋಟಿ-ಕೋಟಿ ರೂಗಳನ್ನು ಪಡೆಯುತ್ತಿದ್ದಾರಂತೆ. ಇನ್ನುಳಿದ ಭಾರತದ ಆಟಗಾರರಾದ ಸುರೇಶ್ ರೈನಾ, ರೋಹಿತ್ ಶರ್ಮ ಅವರ ಬ್ಯಾಟ್ ಮೇಲಿರುವ ಸೀಟ್ ಬ್ರಾಂಡ್ ಸ್ಟಿಕರ್ ಗೆ ಹೆಚ್ಚು ಕಡಿಮೆ 3 ಕೋಟಿ ರೂಗಳ ಸಂಭಾವನೆ ಪಡೆತಯತ್ತಿದ್ದಾರೆ.ಇನ್ನೂ ಭಾರತದ ಆರಂಭಿಕ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರಿಗೆ ಎಂ ಆರ್ ಎಫ್ ಕಂಪನಿಯು 3 ಕೋಟಿ ರೂಗಳನ್ನು ನೀಡುತ್ತಿದೆ. [ಅನುಷ್ಕಾರನ್ನು ಕಿಚಾಯಿಸಿದ ಟ್ವೀಟ್ಸ್ ]

Virat Kohli earns Rs 8 crore

ಇದಲ್ಲದೆ 2016 ಇಂಡಿಯನ್ ಪ್ರಿಮಿಯರ್ ಲೀಗ್ ಪ್ರಾಂಚೈಸಿಗಳು ಯಾವ ಯಾವ ಆಟಗಾರರಿಗೆ ಎಷ್ಟು ಸಂಭಾವನೆ ನೀಡುತ್ತಿದ್ದಾರೆ ಎಂಬುವದನ್ನು ಬಿಸಿಸಿಐ ಇತ್ತೀಚಗೆ ಬಿಡುಗಡೆ ಮಾಡಿದ 23 ಆಟಗಾರರ ಪಟ್ಟಿಯನ್ನು ನೋಡುವುದಾದರೆ ಅದರಲ್ಲೂ ವಿರಾಟ್ ತಮ್ಮ ವೀರಾವೇಷವನ್ನು ಮೆರೆದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಅವರರು 15 ಕೋಟಿ ಪಡೆದುಕೊಂಡು ಪ್ರಥಮ ಸ್ಥಾನದಲ್ಲಿದ್ದಾರೆ. ಇನ್ನೂ ಈ ವರ್ಷದಿಂದ ಪುಣೆ ಪರವಾಗಿ ಕಣಕ್ಕಿಳಿಯುತ್ತಿರುವ ಧೋನಿ 12.5 ಕೋಟಿ ಬಾಚಿಕೊಳ್ಳುತ್ತಿದ್ದಾರೆ.

ಆರ್.ಸಿ.ಬಿ ವಿಂಡೀಸ್ ನ ದೈತ್ಯ ಆಟಗಾರ ಕ್ರೀಸ್ ಗೇಲ್ ಗೆ 8.4 ಕೋಟಿ ನೀಡಿದರೆ, ಎದ್ದು ಬಿದ್ದು ಸಿಕ್ಸರ್ ಬಾರಿಸುವ ದಕ್ಷಿಣ ಆಫ್ರಿಕಾ ಎಬಿ.ಡಿ ವಿಲಿಯರ್ಸ್ ಅವರಿಗೆ 9.5 ಕೋಟಿ ನೀಡುತ್ತಿದೆ. ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ತಂಡದ ನಾಯಕ ಗೌತಮ್ ಗಂಭೀರ್ 10 ಕೋಟಿ ರೂಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Team India's swashbuckling batsman Virat Kohli is ruling the cricketing arena with his consistent match winning performances and is therefore raking in the moolah for his willow.
Please Wait while comments are loading...