ದ್ವಿಶತಕ ಗಳಿಕೆ : ಗವಾಸ್ಕರ್, ಕ್ಲಾರ್ಕ್ ಸಮಕ್ಕೆ ನಿಂತ ವಿರಾಟ್ ಕೊಹ್ಲಿ

Posted By:
Subscribe to Oneindia Kannada

ಹೈದರಾಬಾದ್, ಫೆಬ್ರವರಿ 10: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ದಾಖಲೆಗಳ ಬೆನ್ನು ಹತ್ತಿದ್ದಾರೆ. ಸತತ ನಾಲ್ಕು ಟೆಸ್ಟ್ ಸರಣಿಯಲ್ಲಿ ನಾಲ್ಕು ದ್ವಿಶತಕ ಸಿಡಿಸಿದ ದಾಖಲೆ ಜೊತೆಗೆ ಅತ್ಯಧಿಕ ಟೆಸ್ಟ್ ದ್ವಿಶತಕ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಗವಾಸ್ಕಾರ್ ಹಾಗೂ ಮೈಕಲ್ ಕ್ಲಾರ್ಕ್ ಸಮಕ್ಕೆ ನಿಂತಿದ್ದಾರೆ.

ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು (ಫೆಬ್ರವರಿ 10) ಟೀಂ ಇಂಡಿಯಾ ನಾಯಕ ಕೊಹ್ಲಿ ಅವರು 204 ರನ್ ಗಳಿಸಿ ಔಟಾದರು.

ಈ ಮೂಲಕ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಸತತ ದ್ವಿಶತಕ ಬಾರಿಸಿ, ಸತತ ನಾಲ್ಕು ಟೆಸ್ಟ್ ಸರಣಿಯಲ್ಲಿ ನಾಲ್ಕು ದ್ವಿಶತಕ ಬಾರಿಸಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

ಅತ್ಯಧಿಕ ದ್ವಿಶತಕ ಗಳಿಕೆ: ನಾಲ್ಕು ದ್ವಿಶತಕ ಗಳಿಸುವ ಮೂಲಕ ಕ್ರಿಕೆಟ್ ದಿಗ್ಗಜರಾದ ಭಾರತದ ಸುನಿಲ್ ಗವಾಸ್ಕರ್, ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಸಮಕ್ಕೆ ಕೊಹ್ಲಿ ನಿಂತಿದ್ದಾರೆ. ಈ ಪಟ್ಟಿಯಲ್ಲಿ ಇನ್ನೂ 10 ಮಂದಿ ಆಟಗಾರರಿದ್ದಾರೆ. 12 ದ್ವಿಶತಕ ಸಿಡಿಸಿರುವ ಡಾನ್ ಬ್ರಾಡ್ಮನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ಪರ ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ತಲಾ 6 ದ್ವಿಶತಕ ಗಳಿಸಿದ್ದರೆ, ರಾಹುಲ್ ದ್ರಾವಿಡ್ 5 ದ್ವಿಶತಕ ಗಳಿಸಿ ಪಟ್ಟಿಯಲ್ಲಿ ಕೊಹ್ಲಿಗಿಂತ ಮುಂದಿದ್ದಾರೆ.

ಟೆಸ್ಟ್ ದಾಖಲೆ ವೀರ ಕೋಹ್ಲಿ

ಟೆಸ್ಟ್ ದಾಖಲೆ ವೀರ ಕೋಹ್ಲಿ

ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು (ಫೆಬ್ರವರಿ 10) ಟೀಂ ಇಂಡಿಯಾ ನಾಯಕ ಕೊಹ್ಲಿ ಅವರು 204 ರನ್ ಗಳಿಸಿ ಔಟಾದರು.

ಈ ಮೂಲಕ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಸತತ ದ್ವಿಶತಕ ಬಾರಿಸಿ, ಸತತ ನಾಲ್ಕು ಟೆಸ್ಟ್ ಸರಣಿಯಲ್ಲಿ ನಾಲ್ಕು ದ್ವಿಶತಕ ಬಾರಿಸಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

ದ್ವಿಶತಕ ಸಿಡಿಸಿದ ಸರಣಿ ಸೋತಿಲ್ಲ

ದ್ವಿಶತಕ ಸಿಡಿಸಿದ ಸರಣಿ ಸೋತಿಲ್ಲ

* ವೆಸ್ಟ್ ಇಂಡೀಸ್ ವಿರುದ್ಧ ಜುಲೈನಲ್ಲಿ 200ರನ್.
* ನ್ಯೂಜಿಲೆಂಡ್ ವಿರುದ್ಧ 211,
* ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ 235 ರನ್(ವೈಯಕ್ತಿಕ ಗರಿಷ್ಠ ಮೊತ್ತ)ಗಳಿಸಿ ಮೂರು ದ್ವಿಶತಕ ಸಿಡಿಸಿದ ಟೀಂ ಇಂಡಿಯಾದ ನಾಯಕ ಎನಿಸಿದ್ದರು. ಈಗ ನಾಲ್ಕು ದ್ವಿಶತಕ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಎಲ್ಲಾ ದ್ವಿಶತಕಗಳನ್ನು ನಾಯಕನಾಗಿ ಗಳಿಸಿದ್ದಲ್ಲದೆ, ಒಂದು ಟೆಸ್ಟ್ ಸರಣಿ ಕೂಡಾ ಇಲ್ಲಿ ತನಕ ಸೋತಿಲ್ಲ.

ಡಾನ್ ಬ್ರಾಡ್ಮನ್ 12

ಡಾನ್ ಬ್ರಾಡ್ಮನ್ 12

* 12 - ಡ್ರಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ)
* 11 - ಕುಮಾರ ಸಂಗಕ್ಕಾರ(ಶ್ರೀಲಂಕಾ)
* 9 - ಬ್ರಿಯಾನ್ ಲಾರಾ(ವೆಸ್ಟ್ ಇಂಡೀಸ್)
* 7- ವ್ಯಾಲಿ ಹಮ್ಮಂಡ್ (ಇಂಗ್ಲೆಂಡ್ ) ಹಾಗೂ ಮಹೇಲ ಜಯವರ್ದನೆ (ಶ್ರೀಲಂಕಾ)

ಸೆಹ್ವಾಗ್, ಸಚಿನ್ ಅತ್ಯಧಿಕ

ಸೆಹ್ವಾಗ್, ಸಚಿನ್ ಅತ್ಯಧಿಕ

6 -ಮಾರ್ವನ್ ಅಟಪಟ್ಟು(ಶ್ರೀಲಂಕಾ)
ವೀರೇಂದ್ರ ಸೆಹ್ವಾಗ್(ಭಾರತ),
ಜಾವೇದ್ ಮಿಯಾಂದಾದ್ (ಪಾಕಿಸ್ತಾನ),
ಯೂನಿಸ್ ಖಾನ್(ಪಾಕಿಸ್ತಾನ),
ರಿಕಿ ಪಾಂಟಿಂಗ್(ಆಸ್ಟ್ರೇಲಿಯಾ),
ಸಚಿನ್ ತೆಂಡೂಲ್ಕರ್ (ಭಾರತ)

5 ದ್ವಿಶತಕ ಗಳಿಸಿದವರು:

* ಗ್ರಹಾಂ ಸ್ಮಿತ್(ದಕ್ಷಿಣ ಆಫ್ರಿಕಾ)
* ರಾಹುಲ್ ದ್ರಾವಿಡ್ (ಭಾರತ)

4 ದ್ವಿಶತಕ ಗಳಿಸಿದವರು

4 ದ್ವಿಶತಕ ಗಳಿಸಿದವರು

ಟೆಸ್ಟ್ ಇತಿಹಾಸದಲ್ಲಿ ಇಲ್ಲಿ ತನಕ 10 ಬ್ಯಾಟ್ಸ್ ಮನ್ ಗಳು 4 ಬಾರಿ ದ್ವಿಶತಕ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ(ಭಾರತ),
ಜಹೀರ್ ಅಬ್ಬಾಸ್ (ಪಾಕಿಸ್ತಾನ)
ಲೆನ್ ಹಟ್ಟನ್ (ಇಂಗ್ಲೆಂಡ್)
ಗ್ರೆಗ್ ಚಾಪೆಲ್ (ಆಸ್ಟ್ರೇಲಿಯಾ)
ಮೊಹಮ್ಮದ್ ಯೂಸುಫ್ (ಪಾಕಿಸ್ತಾನ)
ಹಶೀಂ ಆಮ್ಲಾ(ದಕ್ಷಿಣ ಆಫ್ರಿಕಾ)
ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)
ಗಾರ್ಡನ್ ಗ್ರೀನಿಡ್ಜ್ (ವೆಸ್ಟ್ ಇಂಡೀಸ್)
ಮೈಕಲ್ ಕ್ಲಾರ್ಕ್(ಆಸ್ಟ್ರೇಲಿಯಾ)
ಸುನಿಲ್ ಗವಾಸ್ಕರ್ (ಭಾರತ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Virat Kohli's collection of records keeps growing by the day. There has been a latest addition to the list today (February 10) in the ongoing India-Bangladesh one-off Test here
Please Wait while comments are loading...