'ರನ್ ಯಂತ್ರ' ವಿರಾಟ್ ಕೊಹ್ಲಿ 3 ಸಾವಿರ ರನ್ ಗಳ ಸರದಾರ

Posted By:
Subscribe to Oneindia Kannada

ನಾರ್ಥ್ ಸೌಂಡ್ (ಆಂಟಿಗ್ವಾ), ಜುಲೈ 21: ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಅವರು ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಗುರುವಾರದಂದು ಕೊಹ್ಲಿ ಅಬ್ಬರಕ್ಕೆ ವಿಂಡೀಸ್ ಬೌಲರ್ ಗಳು ಬೆಚ್ಚಿದ್ದಾರೆ.

[ಪಂದ್ಯದ ಸ್ಕೋರ್ ಕಾರ್ಡ್]

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಮೊತ್ತ ಕಲೆ ಹಾಕಲು ಸಹಕಾರಿಯಾದರು. ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜರಾ ಅವರು ಕಳಪೆ ಮೊತ್ತಕ್ಕೆ ಔಟಾದ ಬಳಿಕ ಶಿಖರ್ ಧವನ್ ಜತೆಗೂಡಿ ಕೊಹ್ಲಿ ಉತ್ತಮ ಜೊತೆಯಾಟ ಪ್ರದರ್ಶನ ನೀಡಿದರು. [ಕೊಹ್ಲಿ -ಧವನ್ ಜೊತೆಯಾಟ, ವಿಂಡೀಸ್ ಗೆ ಪೀಕಲಾಟ]

Virat Kohli completes 3,000 Test runs, becomes 19th Indian to reach the milestone

ಕೊಹ್ಲಿ ಅವರು 6 ರನ್ ಗಳಿಸುತ್ತಿದ್ದಂತೆ ಟೆಸ್ಟ್ ವೃತ್ತಿ ಬದುಕಿನಲ್ಲಿ 3,000 ರನ್ ಗಳಿಸಿದ ಸಾಧನೆ ಮಾಡಿದರು. ಈ ಗುರಿ ಮುಟ್ಟಿದ 19ನೇ ಭಾರತೀಯ ಕ್ರಿಕೆಟರ್ ಎನಿಸಿಕೊಂಡರು. 43 ಪಂದ್ಯ ಹಾಗೂ 73 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಪೂರೈಸಿದರು.

ಆದರೆ, ತ್ವರಿತ ಅವಧಿಯಲ್ಲಿ 3 ಸಾವಿರ ರನ್ ಗಳಿಕೆ ಕ್ಲಬ್ ಸೇರಿದವರ ಪೈಕಿ ವಿರೇಂದ್ರ ಸೆಹ್ವಾಗ್ ಮೊದಲಿಗರು 34 ಪಂದ್ಯಗಳ 55 ಇನ್ನಿಂಗ್ಸ್ ನಲ್ಲೇ ಈ ಗುರಿ ಮುಟ್ಟಿದರು. ತ್ವರಿತವಾಗಿ ರನ್ ಗಳಿಕೆ ಪಟ್ಟಿಯಲ್ಲಿ ಕೊಹ್ಲಿ 8ನೇ ಸ್ಥಾನದಲ್ಲಿದ್ದಾರೆ.

ಗುಂಡಪ್ಪ ವಿಶ್ವನಾಥ್, ದಿಲೀಪ್ ವೆಂಗ್ ಸರ್ಕಾರ್, ಕಪಿಲ್ ದೇವ್, ಎಂಎಸ್ ಧೋನಿ, ರವಿಶಾಸ್ತ್ರಿ, ಪಾಲಿ ಉಮ್ರಿಗಾರ್, ವಿಜಯ್ ಮಂಜ್ರೇಕರ್, ಚಂದು ಬೋರ್ಡೆ ಅವರು 3,000ರನ್ ಕ್ಲಬ್ ನಲ್ಲಿದ್ದಾರೆ.

3,000 ರನ್ ತ್ವರಿತವಾಗಿ ಗಳಿಕೆ ಕ್ರಿಕೆಟರ್ಸ್ ಟಾಪ್ 10 ಭಾರತೀಯ ಆಟಗಾರರು:
1. Virender Sehwag: 34 matches; 55 innings
2. Mohammed Azharuddin: 43 matches; 64 innings
3. Sunil Gavaskar: 34 matches; 66 innings
4. Gautam Gambhir: 37 matches; 66 innings
5. Rahul Dravid: 39 matches; 67 innings
6. Sachin Tendulkar: 44 matches; 67 innings
7. Navjot Singh Sidhu: 42 matches; 73 innings
8. Virat Kohli: 43 matches; 73 innings
9. VVS Laxman: 47 matches; 77 innings
10. Mohinder Amarnath: 46 matches; 79 innings

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's 'run machine' Virat Kohli completed yet another milestone by completing 3000 Test runs and became the 19th Indian batsman to do so
Please Wait while comments are loading...