ಈ ಕಾಲಘಟ್ಟದ ವಿಶ್ವ ಟೆಸ್ಟ್ XIಗೆ ಕೊಹ್ಲಿ ನಾಯಕ!

Posted By:
Subscribe to Oneindia Kannada

ಲಂಡನ್, ಆಗಸ್ಟ್ 06: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರನ್ನು 'ಈ ಕಾಲದ ವಿಶ್ವ ಟೆಸ್ಟ್ XI' ತಂಡ ನಾಯಕರಾಗಿ ಶನಿವಾರ ಆಯ್ಕೆ ಮಾಡಲಾಗಿದೆ. ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರಿದ್ದ ಚರ್ಚಾಕೂಟದಲ್ಲಿ ಈ ಆಯ್ಕೆ ನಡೆಸಲಾಯಿತು.

ಏಕದಿನ ಕ್ರಿಕೆಟ್, ಟಿ20 ಅಂತಾರಾಷ್ಟ್ರೀಯ ಪಂದ್ಯ ಹಾಗೂ ಟೆಸ್ಟ್ ಮೂರು ಮಾದರಿಯಲ್ಲೂ ಅಸಾಧಾರಣ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಅವರು ಈ ಕಾಲಕ್ಕೆ ಯಾವುದೇ ತಂಡವನ್ನು ಗೆಲುವಿನತ್ತ ಮುನ್ನಡೆಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು 'ಸ್ಕೈ ಸ್ಫೋರ್ಟ್ಸ್' ನ ಚರ್ಚಾಕೂಟದಲ್ಲಿ ಶನಿವಾರ (ಆಗಸ್ಟ್ 06) ಘೋಷಿಸಲಾಯಿತು.

Virat Kohli chosen as captain of 'Current World Test XI' by Shane Warne, others

ಆಸ್ಟ್ರೇಲಿಯಾದ ಶೇನ್ ವಾರ್ನ್, ಪಾಕಿಸ್ತಾನದ ರಮೀಜ್ ರಾಜ ಹಾಗೂ ಇಂಗ್ಲೆಂಡಿನ ಮೈಕ್ ಅಥರ್ಟನ್ ಅವರು ಆಯ್ಕೆ ಮಾಡಿದ ತಂಡದಲ್ಲಿ ದಕ್ಷಿಣ ಆಫ್ರಿಕಾದ ಮಾರ್ನೆ ಮಾರ್ಕೆಲ್ 12ನೇ ಆಟಗಾರರಾಗಿದ್ದಾರೆ. 1990ರ ದಶಕದಲ್ಲಿ ಆಡಿದ್ದ ಮಾಜಿ ಆಟಗಾರರಿಬ್ಬರು ಕೂಡಾ ತಂಡದಲ್ಲಿದ್ದಾರೆ.

27 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ನಾಯಕರಾಗಿದ್ದು, ಚೊಚ್ಚಲ ದ್ವಿಶತಕ ಬಾರಿಸಿದ ಸಂಭ್ರಮದಲ್ಲಿದ್ದಾರೆ. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳು ಮುಗಿದಿದ್ದು, ಭಾರತ 1-0 ಮುನ್ನಡೆ ಪಡೆದುಕೊಂಡಿದೆ.

ಈ ಶ್ರೇಷ್ಠ ತಂಡದಲ್ಲಿ ಇಂಗ್ಲೆಂಡ್ ನಾಯಕ ಅಲೈಸ್ಟರ್ ಕುಕ್ ಹಾಗೂ ಆಸ್ಟ್ರೇಲಿಯಾ ಎಡಗೈ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಆರಂಭಿಕ ಆಟಗಾರರಾಗಿದ್ದಾರೆ. ವಿರಾಟ್ ಕೊಹ್ಲಿ ಬಿಟ್ಟರೆ ಆಫ್ ಸ್ಪಿನ್ನರ್ ಅಶ್ವಿನ್ ಅವರು ಭಾರತದಿಂದ ಆಯ್ಕೆಯಾಗಿದ್ದಾರೆ. ಉಳಿದಂತೆ ಯಾರು ಯಾರು ತಂಡದಲಿದ್ದಾರೆ ನೋಡಿ:

1. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
2. ಅಲೈಸ್ಟರ್ ಕುಕ್ (ಇಂಗ್ಲೆಂಡ್)
3. ಜೋ ರೂಟ್ (ಇಂಗ್ಲೆಂಡ್)
4. ವಿರಾಟ್ ಕೊಹ್ಲಿ(ಭಾರತ, ನಾಯಕ)
5. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
6. ಎಬಿ ಡಿ ವಿಲೆಯರ್ಸ್ (ದಕ್ಷಿಣ ಆಫ್ರಿಕಾ, ವಿಕೆಟ್ ಕೀಪರ್)
7. ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
8. ರವಿಚಂದ್ರನ್ ಅಶ್ವಿನ್ (ಭಾರತ)
9. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
10. ಯಾಸಿರ್ ಶಾ(ಪಾಕಿಸ್ತಾನ)
11. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್)
12. ಮಾರ್ನೆ ಮಾರ್ಕೆಲ್ (ದಕ್ಷಿಣ ಆಫ್ರಿಕಾ)


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's star batsman Virat Kohli was today (August 6) chosen as the captain of "Current World Test XI" by spin legend Shane Warne and 2 other former cricketers.
Please Wait while comments are loading...