ಗವಾಸ್ಕರ್, ಸಚಿನ್, ದ್ರಾವಿಡ್ ದಾಖಲೆ ಮುರಿದ ಕೊಹ್ಲಿ

Posted By:
Subscribe to Oneindia Kannada

ಸಿಡ್ನಿ, ಫೆ. 01: ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದಿಗ್ಗಜ ದಾಖಲೆಯನ್ನು ಮುರಿದಿದ್ದಾರೆ. ಸುನಿಲ್ ಆಸ್ಟ್ರೇಲಿಯಾದಲ್ಲಿ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಸಾಧನೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ತಕ್ಕಮಟ್ಟಿನ ರನ್ ಗಳಿಕೆ ನಂತರ ವಿರಾಟ್, ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿ ಗೆಲುವಿಗೆ ಕಾರಣರಾದರು. ಸರಣಿಯ ಕೊನೆ ದಿನ (ಜನವರಿ 31) ದಂದು 27 ವರ್ಷ ವಯಸ್ಸಿನ ಕೊಹ್ಲಿ ಅವರು ಸತತ ಮೂರು ಅರ್ಧಶತಕ ಬಾರಿಸಿ ದಾಖಲೆ ಬರೆದರು.[ಟಿ20 ಸರಣಿ ವೈಟ್ ವಾಶ್, ಧೋನಿರಿಂದ ಹೊಸ ದಾಖಲೆ]


3ನೇ ಟಿ 20 ಪಂದ್ಯದ ಸ್ಕೋರ್ ಕಾರ್ಡ್ | ಟಿ20 ಸರಣಿ ಪೂರ್ಣ ಫಲಿತಾಂಶ

ಸಿಡ್ನಿ ಕ್ರಿಕೆಟ್ ಮೈದಾನ (ಎಸ್ ಸಿಜಿ) ದಲ್ಲಿ ಅಂತಿಮ ಟಿ20 ಪಂದ್ಯದಲ್ಲಿ ಗಳಿಸಿದ 50ರನ್ ಗಳು ಸೇರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಟ್ಟಾರೆ 7 ಅರ್ಧಶತಕ ಗಳಿಸಿದ ಕೊಹ್ಲಿ ಹೊಸ ದಾಖಲೆ ಬರೆದರು. ಎಲ್ಲಾ ಮಾದರಿ ಕ್ರಿಕೆಟ್ ಗಳು ಸೇರಿ ಪ್ರವಾಸದಲ್ಲಿ 6 ಅರ್ಧ ಶತಕ ಗಳಿಸಿದ್ದು ಇಲ್ಲಿನ ತನಕದ ಸಾಧನೆಯಾಗಿತ್ತು. ಗವಾಸ್ಕರ್ ಹಾಗೂ ಸಚಿನ್ ಅವರು ತಲಾ 6 ಅರ್ಧಶತಕ ಗಳಿಸಿದ್ದಾರೆ.[ಟಿ20: ಟೀಂ ಇಂಡಿಯಾ ಶ್ರೇಯಾಂಕ ಪಟ್ಟಿಯಲ್ಲಿ ನಂ.1]

Virat Kohli breaks Sunil Gavaskar

ಐದು ಏಕದಿನ ಕ್ರಿಕೆಟ್ ಸರಣಿಯನ್ನು ಟೀಂ ಇಂಡಿಯಾ 1-4 ಅಂತರದಲ್ಲಿ ಕಳೆದುಕೊಂಡಿತು. ಕೊಹ್ಲಿ ಅವರು 91,59,117,106 ಹಾಗೂ 8 ರನ್ ಗಳಿಸಿದರು. ಟಿ20 ಪಂದ್ಯಗಳ ಸರಣಿಯಲಿ ಅಜೇಯ 90, ಅಜೇಯ 59 ಹಾಗೂ 50ರನ್ ಸೇರಿ ಒಟ್ಟಾರೆ 199ರನ್ ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. [ಗ್ಯಾಲರಿ: ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿದ ಇಂಡಿಯನ್ಸ್]

ಇದೇ ಪ್ರವಾಸದಲ್ಲಿ ಕೊಹ್ಲಿ ಅವರು ತ್ವರಿತಗತಿಯಲ್ಲಿ ಏಕದಿನ ಕ್ರಿಕೆಟ್ ನಲ್ಲಿ 7,000 ರನ್ ಗಳಿಸಿದ್ದು ಹಾಗೂ 25 ಶತಕ ಬಾರಿಸಿದ ಪ್ರಥಮ ಆಟಗಾರ ಎನಿಸಿದರು. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ದೆಹಲಿಯ ಬ್ಯಾಟ್ಸ್ ಮನ್ ಕೊಹ್ಲಿ ಅವರು ಚುಟುಕು ಕ್ರಿಕೆಟ್ ಪಂದ್ಯಗಳಲ್ಲಿ ಹತ್ತು ಹಲವು ದಾಖಲೆಗಳನ್ನು ಧ್ವಂಸಗೊಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತದ ಬ್ಯಾಟ್ಸ್ ಮನ್ ನಿಂದ ಹೆಚ್ಚು 50 ಪ್ಲಸ್ ಸ್ಕೋರ್ (ಎಲ್ಲಾ ಮಾದರಿ ಸೇರಿ)
* 7- ವಿರಾಟ್ ಕೊಹ್ಲಿ (580 ರನ್, 8 ಇನ್ನಿಂಗ್ಸ್)- 2015-16ಸರಣಿ

* 6- ಸುನಿಲ್ ಗವಾಸ್ಕರ್ (700 ರನ್, 11 ಇನ್ನಿಂಗ್ಸ್)- 1985-86 ಸರಣಿ;
--ಸಚಿನ್ ತೆಂಡೂಲ್ಕರ್ (762 ರನ್, 14 ಇನ್ನಿಂಗ್ಸ್)- 2007-08

* 5-ಮುರಳಿ ವಿಜಯ್ (482 ರನ್, 8 ಇನ್ನಿಂಗ್ಸ್)- 2014-15,
--ಜಿಆರ್ ವಿಶ್ವನಾಥ್ (473, 9 ಇನ್ನಿಂಗ್ಸ್)-1977-78,
--ಕೊಹ್ಲಿ (705, 11ಇನ್ನಿಂಗ್ಸ್) -2014-15,
--ವಿವಿಎಸ್ ಲಕ್ಷ್ಮಣ್ (749, 13 ಇನ್ನಿಂಗ್ಸ್)-2003-04,
--ರಾಹುಲ್ ದ್ರಾವಿಡ್ (764, 14ಇನ್ನಿಂಗ್ಸ್)-2003-04 (ಒನ್ ಇಂಡಿಯಾ ಸುದ್ದಿ)
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's best batsman at the moment, Virat Kohli scaled another high when he surpassed batting legends Sunil Gavaskar, Sachin Tendulkar and Rahul Dravid.
Please Wait while comments are loading...