'ಒತ್ತಡದ ಸಂದರ್ಭದಲ್ಲಿ ಸಚಿನ್ ಗಿಂತ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ ಮನ್'

Posted By:
Subscribe to Oneindia Kannada

ನವದೆಹಲಿ, ಜೂನ್ 15: ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ನೋಡಲು ಆನಂದವಾಗುತ್ತದೆ. ಒತ್ತಡ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗಿಂತ ಹೆಚ್ಚಿನ ಸಮರ್ಥವಾಗಿ ಕೊಹ್ಲಿ ಆಡಬಲ್ಲರು ಎಂದು ಪಾಕಿಸ್ತಾನ ಮಾಜಿ ನಾಯಕ ಇಮ್ರಾನ್ ಖಾನ್ ಅವರು ಹಾಡಿ ಹೊಗಳಿದ್ದಾರೆ.

ಕೊಹ್ಲಿ ಎಂದು ಆಧುನಿಕ ರನ್ ಮಷಿನ್ ಎಂದು ಮಾಜಿ ಕ್ರಿಕೆಟರ್ ಗಳು ಕರೆಯುತ್ತಿರುವ ಬೆನ್ನಲ್ಲೇ ಕೊಹ್ಲಿ ಅವರನ್ನು ಸಚಿನ್ ತೆಂಡೂಲ್ಕರ್ ಜೊತೆ ಹೋಲಿಕೆ ಮಾಡಿ ಹೇಳಿಕೆ ನೀಡುತ್ತಿರುವವರ ಸಾಲಿಗೆ ಇಮ್ರಾನ್ ಖಾನ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.[2016ರಲ್ಲಿ ವಿರಾಟ್ ಕೊಹ್ಲಿ ಸಾಧನೆ, ದಾಖಲೆಗಳು]

Virat Kohli plays better than Sachin Tendulkar under pressure situations: Imran Khan

ಎಂಬತ್ತರ ದಶಕದಲ್ಲಿ ವಿವಿಯನ್ ರಿಚರ್ಡ್ಸ್, ನಂತರ ಬ್ರಿಯಾನ್ ಲಾರಾ ಹಾಗೂ ಸಚಿನ್ ತೆಂಡೂಲ್ಕರ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ವಿರಾಟ್ ಇವರೆಲ್ಲರಿಗಿಂತ ಭಿನ್ನವಾಗಿದ್ದು, ಕ್ರಿಕೆಟ್​ನ ಎಲ್ಲಾ ಹೊಡೆತಗಳನ್ನು ಹೊಂದಿದ್ದಾರೆ ಎಂದು ಹೊಗಳಿದ್ದಾರೆ. [ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

1992ರಲ್ಲಿ ಪಾಕಿಸ್ತಾನಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಇಮ್ರಾನ್ ಖಾನ್ ಅವರು ಕೊಹ್ಲಿ ಅವರ ಉಗ್ರ ಪ್ರತಾಪಿ ಮನೋಭಾವವನ್ನು ಮೆಚ್ಚುತ್ತಾ, ಪ್ರತಿಭೆ ಹಾಗೂ ತಾಂತ್ರಿಕತೆ ಜೊತೆಗೆ ತಂಡವನ್ನು ಮುನ್ನಡೆಸುವ ರೀತಿ ಅನನ್ಯ, ಕೊಹ್ಲಿ ವಿಕೆಟ್ ಪಡೆಯುವುದು ಎದುರಾಳಿ ತಂಡಕ್ಕೆ ಕಷ್ಟವೇ ಸರಿ ಎಂದಿದ್ದಾರೆ. [ಕೊಹ್ಲಿಗೆ ಜೈ ಎಂದ ಮಿಡ್ ಫೀಲ್ಡರ್ ಕ್ರೂಸ್ ]

ಸಚಿನ್ ತಾಳ್ಮೆಯ ಆಟಕ್ಕೆ ಹೆಚ್ಚು ಗಮನ ನೀಡುತ್ತಿದ್ದರು. ಆದರೆ, ಕೊಹ್ಲಿ ಅಗ್ರೆಸಿವ್ ಆಗಿ ಆಡುತ್ತಾರೆ. ಇದು ಈ ಹಿಂದಿನ ಭಾರತೀಯ ಬ್ಯಾಟ್ಸ್ ಮನ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿರಲಿಲ್ಲ ಎಂದು ಇಮ್ರಾನ್ ಹೇಳಿದ್ದಾರೆ.

ಐಪಿಎಲ್ 2016 ರಲ್ಲಿ ಕೊಹ್ಲಿ ಅವರು 973ರನ್ ಗಳಿಸಿದ್ದಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲಿಗೆ ಕೊಂಡೊಯ್ದಿದ್ದು ಗಮನಾರ್ಹ (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lauding Team India's star batsman Virat Kohli, former Pakistan captain Imran Khan has said the 27-year-old is better batsman than Sachin Tendulkar under pressure situations.
Please Wait while comments are loading...