ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿಡಿ ದಾಖಲೆ ಮುರಿದು, ತ್ವರಿತಗತಿಯಲ್ಲಿ 9 ಸಾವಿರ ರನ್ ಗಳಿಸಿದ ಕೊಹ್ಲಿ

By Mahesh

ಕಾನ್ಪುರ್, ಅಕ್ಟೋಬರ್ 29: ಇಲ್ಲಿನ ಗ್ರೀನ್ ಪಾರ್ಕ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ದಾಖಲೆ ಬರೆದಿದ್ದಾರೆ. ತ್ವರಿತಗತಿಯಲ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 9,000ರನ್ ಗಳಿಸಿರುವ ಕೊಹ್ಲಿ ಅವರು ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ದಾಖಲೆ ಮುರಿದಿದ್ದಾರೆ.

194 ಇನ್ನಿಂಗ್ಸ್ ನಲ್ಲಿ 9 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಎಬಿ ಡಿ ವಿಲಿಯರ್ಸ್ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ.

Virat Kohli becomes fastest to 9000 ODI runs, breaks AB de Villiers' record

ಕೊಹ್ಲಿ ಸಾಧನೆ:
* 2017ರಲ್ಲಿ 2000ರನ್ ಗಳಿಸಿದ್ದು, ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. 2012, 2014 ಹಾಗೂ 2016ರಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದರು.
* 28 ವರ್ಷ ವಯಸ್ಸಿನ ಕೊಹ್ಲಿ ಅವರು ವೃತ್ತಿ ಬದುಕಿನ 32ನೇ ಶತಕ ಸಿಡಿಸಿದ್ದಾರೆ. ಹಾಲಿ ಕ್ರಿಕೆಟರ್ ಗಳ ಪೈಕಿ ಕೊಹ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಸಚಿನ್ ಅವರು 49 ಶತಕ ಸಿಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
* ಏಕದಿನ ಕ್ರಿಕೆಟ್ ನಲ್ಲಿ 97 ಸಿಕ್ಸರ್ ಸಿಡಿಸಿರುವ ಕೊಹ್ಲಿ ಅವರು ಈ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸಿದರೆ 100 ಸಿಕ್ಸರ್ ಗಡಿ ದಾಟಿದ ಭಾರತದ 8ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಇದಕ್ಕೂ ಮುನ್ನ ಬಲಗೈ ಬ್ಯಾಟ್ಸ್ ಮನ್ ಕೊಹ್ಲಿ ಅವರು 175 ಇನ್ನಿಂಗ್ಸ್ ಗಳಲ್ಲಿ 8, 000ರನ್ ಗಳಿಸಿದ್ದರು. ಕೊಹ್ಲಿ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಹ ಆಟಗಾರ ಎಬಿ ಡಿ ವಿಲಿಯರ್ಸ್ ಅವರು 182 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಗಳಿಸಿದ್ದರು.

ಈ ಮುಂಚೆ ತ್ವರಿತಗತಿಯಲ್ಲಿ 7,000ರನ್ ಗಳಿಸಿದ್ದ ಎಬಿ ಡಿ ವಿಲಿಯರ್ಸ್(166 ಇನ್ನಿಂಗ್ಸ್) ದಾಖಲೆಯನ್ನು ಕೂಡಾ ವಿರಾಟ್ ಕೊಹ್ಲಿ ಅವರು ಮುರಿದಿದ್ದರು. 161 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಈ ಗುರಿ ತಲುಪಿದ್ದರು.

ಆದರೆ,ದಕ್ಷಿಣ ಆಫ್ರಿಕಾದ ಹಶೀಂ ಅಮ್ಲ ಅವರು ಏಕದಿನ ಕ್ರಿಕೆಟ್‌ನಲ್ಲಿ 2,000, 3,000, 4,000, 5,000. 6,000, 7,000 ರನ್‌ಗಳನ್ನು ಕೂಡಾ ತ್ವರಿತಗತಿಯ ಪೂರ್ಣಗೊಳಿಸಿದ ಸಾಧನೆಯನ್ನು ಸರಿಗಟ್ಟಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X